ಹಾರ್ಧಿಕ್ ಪಾಂಡ್ಯ ರವಗಿಗಿಂತ ಬೆಸ್ಟ್ ಅಲ್ ರೌಂಡರ್ ಅನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ: ಯಾರಂತೆ ಗೊತ್ತೇ??
ಹಾರ್ದಿಕ್ ಪಾಂಡ್ಯ ಭಾರತದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಹಲವು ಸಾರಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಗಳನ್ನು ನೀಡಿದ್ದಾರೆ. ಭಾರತ ತಂಡದ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಇಂಜುರಿ ಕಾರಣದಿಂದ ಹಲವು ದಿನಗಳ ಕಾಲ ತಂಡದಿಂದ ದೂರ ಉಳಿದಿದ್ದರು. ಈ ವರ್ಷ ಐಪಿಎಲ್ ಮೂಲಕ ಹಾರ್ದಿಕ್ ಪಾಂಡ್ಯ ಮತ್ತೆ ಕ್ರಿಕೆಟ್ ಗೆ ಕಂಬ್ಯಾಕ್ ಮಾಡಿದರು. ಗುಜರಾತ್ ತಂಡದ ನಾಯಕನಾಗಿ ಅದ್ಭುತವಾದ ಪ್ರದರ್ಶನ ನೀಡಿದರು.
ಗುಜರಾತ್ ತಂಡ ಐಪಿಎಲ್ ಗೆ ಎಂಟ್ರಿ ಜೋತ್ತ ಮೊದಲ ಸೀಸನ್ ನಲ್ಲೇ ಟ್ರೋಫಿ ಗೆಲ್ಲುವ ಹಾಗೆ ಮಾಡುವಲ್ಲಿ, ಹಾರ್ದಿಕ್ ಪಾಂಡ್ಯ ಅವರಪಾತ್ರ ಬಹಕ ಮುಖ್ಯವಾದದ್ದು, ಆಟಗಾರನಾಗಿ ಮತ್ತು ಕ್ಯಾಪ್ಟನ್ ಆಗಿ ಅದ್ಭುತವಾದ ಪ್ರದರ್ಶನ ನೀಡಿದರು. ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಟೀಮ್ ಇಂಡಿಯಾಗೆ ಸೆಲೆಕ್ಟ್ ಆದರು, ಇವರು ಆಡಿರುವ ಎಲ್ಲಾ ಪಂದ್ಯಗಳಲ್ಲೂ ಉತ್ತಮವಾದ ಪ್ರದರ್ಶನವನ್ನೇ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ಪಂದ್ಯದಲ್ಲಿ ಸಹ ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದರೆ ಇದೀಗ ಪಾಕಿಸ್ತಾನದ ಮಾಜಿ ಆಟಗಾರ ರಶೀದ್ ಲತೀಫ್ ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮ ಆಟಗಾರ ಮತ್ತೊಬ್ಬರಿದ್ದಾರೆ ಎಂದಿದ್ದಾರೆ.

ರಶೀದ್ ಲತೀಫ್ ಅವರು ಮಾತನಾಡಿರುವುದು ಇಂಗ್ಲೆಂಡ್ ನ ಆಟಗಾರ ಬೆನ್ ಸ್ಟೋಕ್ಸ್ ಅವರ ಬಗ್ಗೆ. “ಹಾರ್ದಿಕ್ ಪಾಂಡ್ಯ ಗಿಂತ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ಬೆಸ್ಟ್. ಪಾಂಡ್ಯ ಅವರನ್ನು ಬೆನ್ ಸ್ಟೋಕ್ಸ್ ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ, ಅವರಿಗಿಂತ ಸ್ಟೋಕ್ಸ್ ಬಹಳ ಮುಂದೆ ಇದ್ದಾರೆ. ಟೀಮ್ ಇಂಡಿಯಾ ಪರವಾಗಿ ಹಾರ್ದಿಕ್ ಪಾಂಡ್ಯ ಅವರು 2 ಟಿ20 ವಿಶ್ವಕಪ್, 1 ಒನ್ ಡೇ ಕ್ರಿಕೆಟ್ ಮತ್ತು ಚಾಂಪಿಯನ್ಸ್ ಟ್ರೋಫಿ ಆಡಿದ್ದಾರೆ. ಯಾವುದೇ ಪಂದ್ಯವಳಿಯಲ್ಲೂ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ, ಸಾಧನೆ ಮಾಡಿಲ್ಲ. 2019ರಲ್ಲಿ ಒನ್ ಡೇ ವಿಶ್ವಕಪ್ ಗೆಲ್ಲಲು ಸ್ಟೋಕ್ಸ್ ಅವರ ಪಾತ್ರ ಬಹಳ ಪ್ರಮುಖವಾಗಿತ್ತು..” ಎಂದಿದ್ದಾರೆ.