ಬಹಳ ಸಿಂಪಲ್ ಆಗಿ ಹೆಚ್ಚಿನ ರಿಸ್ಕ್ ಇಲ್ಲದೆ, ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ನೀಡುವ ಉದ್ಯಮ ಯಾವುದು ಗೊತ್ತೇ?? ನೀವು ಆರಂಭಿಸಿ ಹಣಗಳಿಸಿ.

99

ಈಗಿನ ಕಾಲದಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಬ್ಯುಸಿನೆಸ್ ಮಾಡಿ, ಚೆನ್ನಾಗಿ ಲಾಭ ಮಾಡಬೇಕು, ಹಣ ಗಳಿಕೆ ಮಾಡಬಿಕೆಯೂ ಎಂದು ಎಲ್ಲರೂ ಬಯಸುತ್ತಾರೆ. ಒಂದು ಬ್ಯುಸಿನೆಸ್ ಶುರು ಮಾಡುವ ಮೊದಲು ಅದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು, ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಪಡೆಯುವಂಥ ಬ್ಯುಸಿನೆಸ್ ಅನ್ನು ಆಯ್ಕೆ ಮಾಡಿ, ನಡೆಸಬೇಕು. ಅಂಥದ್ದೇ ಒಂದು ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇದು ಐಸ್ ಕ್ರೀಮ್ ಪಾರ್ಲರ್ ಬ್ಯುಸಿನೆಸ್ ಆಗಿದೆ.

ಈ ಬ್ಯುಸಿನೆಸ್ ಶುರು ಮಾಡಲು, ಆರಂಭದಲ್ಲಿ 10 ಸಾವಿರ ರೂಪಾಯಿ ಇದ್ದರೆ ಸಾಕು. ಈ ಬ್ಯುಸಿನೆಸ್ ಶುರು ಮಾಡಿ ಹಲವಾರು ಜನರು ಲಾಭ ಪಡೆದಿದ್ದಾರೆ, ಈ ಬ್ಯುಸಿನೆಸ್ ನಲ್ಲಿ ನಷ್ಟ ಆಗುವುದಿಲ್ಲ, ಬ್ಯುಸಿನೆಸ್ ಕ್ಲಿಕ್ ಆದ ಕಾರಣ ಹೆಚ್ಚು ಲಾಭ ಪಡೆದು ದೊಡ್ಡ ಮಟ್ಟದಲ್ಲಿ ಐಸ್ ಕ್ರೀಮ್ ಬ್ಯುಸಿನೆಸ್ ಶುರು ಮಾಡುತ್ತಿದ್ದಾರೆ. ಈ ಬ್ಯುಸಿನೆಸ್ ನಲ್ಲಿ ನಷ್ಟ ಆಗದೆ ಇರುವುದಕ್ಕೆ ಮುಖ್ಯ ಕಾರಣ, ಜನರಿಗೆ ಐಸ್ ಕ್ರೀಮ್ ಎಂದರೆ ತುಂಬಾ ಇಷ್ಟ. ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ, ಯಾವುದೇ ಸಮಯ ಇದ್ದರು ಸಹ ಜನರು ಐಸ್ ಕ್ರೀಮ್ ಅನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ಮದುವೆಗಳು, ಪಾರ್ಟಿಗಳು ಮತ್ತು ಇನ್ನಿತರ ಹಲವು ರೀತಿಯ ಸಮಾರಂಭಗಳಲ್ಲಿ ಐಸ್ ಕ್ರೀಮ್ ಬಳಸುತ್ತಾರೆ. ಹಾಗು ಬೇಸಿಗೆ ಕಾಲದಲ್ಲಿ ಅತಿಹೆಚ್ಚಿನ ಬೇಡಿಕೆ ಐಸ್ ಕ್ರೀಮ್ ಗೆ ಇದೆ, ಬೇಸಿಗೆಯಲ್ಲಿ ದಾಖಲೆ ಮಟ್ಟದಲ್ಲಿ ವ್ಯಾಪಾರ ಆಗಿ, ಲಾಭ ಸಿಗುತ್ತದೆ. ಈ ಕಾರಣದಿಂದ ಐಸ್ ಕ್ರೀಮ್ ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿದರೆ, ಲಾಭ ಸಿಗುವುದು ಖಂಡಿತ, ನಷ್ಟವಂತು ಆಗುವುದಿಲ್ಲ. ಮಳೆಗಾಲದಲ್ಲು ಐಸ್ ಕ್ರೀಮ್ ತಿನ್ನುವವರ ಸಂಖ್ಯೆ ಕಡಿಮೆ ಇಲ್ಲ. ಹಾಗಾಗಿ ಐಡಿ ಕ್ರೀಮ್ ಬ್ಯುಸಿನೆಸ್ ನಲ್ಲಿ ನಷ್ಟ ಆಗುವುದಿಲ್ಲ, ಹಾಗೂ ಸದಾ ಬೇಡಿಕೆ ಇರುತ್ತದೆ.

Leave A Reply

Your email address will not be published.