ಶ್ರೇಷ್ಠ ದರ್ಜೆಯ ಬ್ಯಾಟಿಂಗ್ ಮಾಡಿದರೂ ಕೂಡ ವಿಶ್ವಕಪ್ ನಲ್ಲಿ ಸ್ಥಾನ ಪಡೆಯದ ನಾಲ್ವರು ನತದೃಷ್ಟರು ಯಾರ್ಯಾರು ಗೊತ್ತೇ??

131

ಟಿ20 ವಿಶ್ವಕಪ್ ಶುರುವಾಗಲು ಹೆಚ್ಚಿನ ಸಮಯ ಉಳಿದಿಲ್ಲ, ಈಗಾಗಲೇ ಬಹುತೇಕ ಎಲ್ಲಾ ದೇಶಗಳು ತಮ್ಮ ದೇಶದ ತಂಡಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ, ಜೊತೆಗೆ ಕೊನೆಕ್ಷಣದ ತಯಾರಿಗಳನ್ನು ಮಾಡುತ್ತಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್, ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಉತ್ತಮ ಪ್ರದರ್ಶನ ನೀಡಿ, ಅದ್ಭುತವಾದ ಫಾರ್ಮ್ ನಲ್ಲಿದ್ದರು ಸಹ ಕೆಲವು ಆಟಗಾರರು ವಿಶ್ವಕಪ್ ಗೆ ಸೆಲೆಕ್ಟ್ ಆಗದೆ ಇರುವುದು ಬೇಸರದ ವಿಚಾರವೇ ಆಗಿದೆ. ಹೀಗೆ ಅದ್ಭುತ ಫಾರ್ಮ್ ನಲ್ಲಿದ್ದರು ವಿಶ್ವಕಪ್ ನಲ್ಲಿ ಸ್ಥಾನ ಪಡೆಯದ ವಿಶ್ವದ ನಾಲ್ವರು ಆಟಗಾರರನ್ನು ತಿಳಿಸುತ್ತೇವೆ ನೋಡಿ..

ಸಂಜು ಸ್ಯಾಮ್ಸನ್ :- ಈ ವರ್ಷ ಸಂಜು ಸ್ಯಾಮ್ಸನ್ ಅವರು ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುವಲ್ಲಿ ಮತ್ತು ಬ್ಯಾಟ್ಸ್ಮನ್ ಆಗಿ ಅದ್ಭುತ ಪ್ರದರ್ಶನ ನೀಡಿದರು. ಇನ್ನು ಭಾರತದ ಪರವಾಗಿ ಸಹ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊದಲ ಅರ್ಧಶತಕ ಭಾರಿಸಿದರು. ಹಾಗಿದ್ದರು ಸಹ ಸಂಜು ಸ್ಯಾಮ್ಸನ್ ಅವರಿಗೆ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಸಿಕ್ಕಿಲ್ಲ.
ಆಸ್ಟ್ರೇಲಿಯಾ ತಂಡದ ಕ್ಯಾಮರೂನ್ ಗ್ರೀನ್ :- ಇವರು ಆಸೀಸ್ ತಂಡದ ಉತ್ತಮ ಆಲ್ ರೌಂಡರ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮಾನವಾದ ಉತ್ತಮವಾದ ಕೊಡುಗೆ ನೀಡುತ್ತಾರೆ. ಭಾರತದ ವಿರುದ್ಧ ಆರಂಭಿಕ ಬ್ಯಾಟ್ಸ್ಮನ್ ಆಗಿ ಬಂದು ರನ್ಸ್ ಸಿಡಿಸಿದ್ದರು. ಬ್ಯಾಟಿಂಗ್ ನಲ್ಲಿ ಉತ್ತವಾಗಿದ್ದರು ಕೂಡ ಕ್ಯಾಮರೂನ್ ಗ್ರೀನ್ ಅವರಿಗೆ ವಿಶ್ವಕಪ್ ನಲ್ಲಿ ಸ್ಥಾನ ಸಿಕ್ಕಿಲ್ಲ.

ದಕ್ಷಿಣ ಆಫ್ರಿಕಾ ಮಾಜಿ ಕ್ಯಾಪ್ಟನ್ ಫಾಫ್ ಡು ಪ್ಲೇಸಿಸ್ :- ದ.ಆಫ್ರಿಕಾ ಮ್ಯಾನೇಜ್ಮೆಂಟ್ ಮತ್ತೊಮ್ಮೆ ಇವರನ್ನು ಕಡೆಗಣಿಸಿದೆ. ಫಾಫ್ ಅವರು ಈಗಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಫಾಫ್ ಅವರು ಸೈಂಟ್ ಲೂಸಿಯಾ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದು, ಅತಿಹೆಚ್ಚು ರನ್ ನಾಲ್ಕನೇ ಬ್ಯಾಟ್ಸ್ಮನ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರು ಸಹ, ಫಾಫ್ ಅವರನ್ನು ವಿಶ್ವಕಪ್ ಗೆ ಆಯ್ಕೆ ಮಾಡಿಲ್ಲ.
ಇಂಗ್ಲೆಂಡ್ ಆಟಗಾರ ಬೆನ್ ಡಕ್ಕೆಟ್ :- ಪಾಕಿಸ್ತಾನ್ ಹಾಗು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿ ಪಂದ್ಯಗಲ್ಲಿ ಬೆನ್ ಅವರು ಉತ್ತಮ ಪ್ರದರ್ಶನ ನೀಡಿ 167 ರನ್ ಗಳಿಸಿ, ಅತಿಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎನ್ನಿಸಿಕೊಂಡಿದ್ದಾರೆ. ಆದರು ಕೂಡ ಇವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿಲ್ಲ..

Leave A Reply

Your email address will not be published.