ತಿಂಗಳಿಗೆ ಜಸ್ಟ್ 2000 ಸಾವಿರ ಉಳಿಸುವ ಮೂಲಕ ಒಟ್ಟಾರೆ 48 ಲಕ್ಷ ಪಡೆಯುವುದು ಹೇಗೆ ಗೊತ್ತೇ??

177

LIC ತನ್ನ ಗ್ರಾಹಕರಿಗೆ ಒಳ್ಳೆಯ ಯೋಜನೆಗಳನ್ನು ಜೀವವಿಮೆಗಳನ್ನು ನೀಡುತ್ತದೆ. ಹಣವನ್ನು ವ್ಯರ್ಥವಾಗಿ ಖರ್ಚು ಮಾಡುವುದಕ್ಕಿಂತ ಎಲ್.ಐ.ಸಿ ಯಲ್ಲಿ ಹೂಡಿಕೆ ಮಾಡಿದರೆ, ಹಣ ಭದ್ರವಾಗಿಯೂ ಇರುತ್ತದೆ ಜೊತೆಗೆ, ಹೂಡಿಕೆ ಮಾಡಿದ ಕೊನೆಯ ಸಮಯಕ್ಕೆ ಹೆಚ್ಚಿನ ರಿಟರ್ನ್ಸ್ ಸಹ ಪಡೆಯಬಹುದು, ಜೊತೆಗೆ ರಕ್ಷಣೆ ಸಹ ಇರುತ್ತದೆ. LIC ಯ ಒಂದು ಯೋಜನೆಯಲ್ಲಿ ತಿಂಗಳಿಗೆ ಕೇವಲ 2000 ರೂಪಾಯಿ ಹೂಡಿಕೆ ಮಾಡಿ, ಅರ್ಧ ಕೋಟಿ ರೂಪಾಯಿ ಆದಾಯ ಪಡೆಯಬಹುದು. ಉಳಿತಾಯ ಮತ್ತು ರಕ್ಷಣೆ ಎರಡಕ್ಕಾಗಿಯು ಇರುವ ಈ ಯೋಜನೆಯನ್ನು LIC Endowment Policy ಎಂದು ಕರೆಯಲಾಗುತ್ತದೆ.

ಇದು ಲಿಂಕ್ ಮಾಡದೆ, ಭಾಗವಹಿಸುವ, ಜೀವವಿಮೆ ಯೋಜನೆ ಆಗಿದೆ. ಈ ಯೋಜನೆ ಮುಗಿಯುವ ಸಮಯಕ್ಕೆ ಹೆಚ್ಚಿನ ಹಣ ಪಡೆಯಬಹುದು. ಈ ಯೋಜನೆಯನ್ನು 8 ರಿಂದ 55 ವರ್ಷದೊಳಗೆ ಇರುವ ಯಾರಾದರೂ ಶುರು ಮಾಡಬಹುದು. 12 ರಿಂದ 35 ವರ್ಷಗಳ ಅವಧಿ ಈ ಯೋಜನೆಯಲ್ಲಿ ಇರುತ್ತದೆ. ಇದರ ಕನಿಷ್ಠ ವಿಮೆ ಮೊತ್ತ, ₹1,00,000 ರೂಪಾಯಿ ಆಗಿದೆ. ಇದರಲ್ಲಿ ನಿಮಗೆ ರೈಡರ್ ಆಯ್ಕೆ ಇದೆ, LIC ಅಪಘಾತ ಮರಣ ಮತ್ತು ಅಂಗವೈಫಲ್ಯ ಪ್ರಯೋಜನ ರೈಡರ್, LIC ಅಪಘಾತ ಪ್ರಯೋಜನ ರೈಡರ್, LIC ಹೊಸ ಟರ್ಮ್ ಅಶ್ಯೂರೆನ್ಸ್ ರೈಡರ್, LIC New Critical Illness Benefit ರೈಡರ್, LIC ಪ್ರೀಮಿಯಂ ವೇವರ್ ಬೆನಿಫಿಟ್ ರೈಡರ್ ಇಷ್ಟು ಆಯ್ಕೆಗಳಿವೆ. ಇವುಗಳ ಒಟ್ಟು ಮೊತ್ತದ ಬದಲಿಗೆ ಡೆತ್ ಬೆನಿಫಿಟ್ ಸಹ ಇನ್ಸ್ಟಾಲ್ಮೆಂಟ್ ನಲ್ಲಿ ತೆಗೆದುಕೊಳ್ಳಬಹುದು.

ಈ ಯೋಜನೆಯ ಪ್ರಯೋಜನಗಳು ಹೀಗಿವೆ. ಉದಾಹರಣೆಗೆ, 30 ವರ್ಷದ ವ್ಯಕ್ತಿ, 35 ವರ್ಷದ ಪಾಲಿಸಿ ತೆಗೆದುಕೊಂಡು ವಾರ್ಷಿಕ 1 ಲಕ್ಷ ರೂಪಾಯಿ ವಿಮೆ ಪಾಲಿಸಿ ತೆಗೆದುಕೊಂಡರೆ, ಇದರ ವಾರ್ಷಿಕ ಪ್ರೀಮಿಯಂ ₹2881+ತೆರಿಗೆ ಪಾವತಿ ಮಾಡಬೇಕು. ಮೆಚ್ಯುರ್ ಆದ ಬಳಿಕ ₹2,49,000 ರೂಪಾಯಿ ವರೆಗು ಸಿಗುತ್ತದೆ. 18 ವರ್ಷದ ವ್ಯಕ್ತಿ, 35 ವರ್ಷಗಳ ವಿಮೆ ತೆಗೆದುಕೊಂಡು, ವಾರ್ಷಿಕವಾಗಿ ₹24,391 ರ ಪ್ರೀಮಿಯಂ ತೆಗೆದುಕೊಳ್ಳುತ್ತಾರೆ ಎಂದರೆ, ಮಾಸಿಕ ಪ್ರೀಮಿಯಂ ₹2079 ಇರುತ್ತದೆ. ಮೆಚ್ಯುರಿಟಿ ಸಮಯದಲ್ಲಿ 48 ಲಕ್ಷಕ್ಕಿಂತ ಹೆಚ್ಚು ರಿಟರ್ನ್ಸ್ ಪಡೆಯಬಹುದು. ಇನ್ನೇಕೆ ತಡ ನೀವು ಸಹ LIC ಈ ಯೋಜನೆಯ ಮೂಲಕ ಪ್ರಯೋಜನ ಪಡೆಯಿರಿ.

Leave A Reply

Your email address will not be published.