ಸಿರಾಜ್ ಬೇಡವೇ ಬೇಡ, ಟಿ 20 ವಿಶ್ವಕಪ್ ನಲ್ಲಿ ಬುಮ್ರಾ ಬದಲಿಗೆ ಯಾರು ಬೆಸ್ಟ್ ಅಂತೇ ಗೊತ್ತೇ?? ರೇಸ್ ನಲ್ಲಿ ಇರುವವರು ಯಾರು ಗೊತ್ತೇ??

89

ಭಾರತ ತಂಡದ ಹಿರಿಯ ಬೌಲರ್ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣ ಟಿ20 ವಿಶ್ವಕಪ್ ಇಂದ ಹೊರಗುಳಿದಿದ್ದಾರೆ. ಇದರಿಂದಾಗಿ ಭಾರತ ತಂಡಕ್ಕೆ ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲೇ ಭಾರಿ ಹಿನ್ನಡೆ ಆಗಿದೆ. ಈಗಾಗಲೇ ಭಾರತ ತಂಡದ ಬೌಲಿಂಗ್ ಲೈನಪ್ ಒಳ್ಳೆಯ ಪ್ರದರ್ಶನ ನೀಡುತ್ತಿಲ್ಲ, ರವೀಂದ್ರ ಜಡೇಜಾ ಅವರು ಕೂಡ ವಿಶ್ವಕಪ್ ಇಂದ ಹೊರಗುಳಿದಿದ್ದಾರೆ, ಇಂತಹ ಸಮಯದಲ್ಲಿ ಬುಮ್ರ ಅವರು ಸಹ ಆರೋಗ್ಯದ ಕಾರಣದಿಂದ ಹೊರಗಿರುವುದು ಹೆಚ್ಚಿನ ಆತಂಕ ತರಿಸಿದೆ. ಆದರೆ ಬುಮ್ರ ಅವರ ಸ್ಥಾನಕ್ಕೆ ಬೇರೆ ಬೌಲರ್ ಅನ್ನು ನೇಮಿಸಲೇಬೇಕಾದ ಪರಿಸ್ಥಿತಿ ಇದ್ದು, ಇವರ ಸ್ಥಾನಕ್ಕೆ ಸಿರಾಜ್ ಅವರು ಮಾತ್ರ ಬೇಡವೇ ಬೇಡ ಎನ್ನಲಾಗುತ್ತಿದೆ. ಆದರೆ ಬುಮ್ರ ಅವರ ಸ್ಥಾನಕ್ಕೆ ಇನ್ನು ನಾಲ್ಕು ಬೌಲರ್ ಗಳ ಹೆಸರು ಕೇಳಿ ಬರುತ್ತಿದ್ದು, ಆ ನಾಲ್ಕು ಬೌಲರ್ ಗಳು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಮೊಹಮ್ಮದ್ ಶಮಿ :- ಬುಮ್ರ ಅವರ ಬದಲಾಗಿ ಮೊಹಮ್ಮದ್ ಶಮಿ ಅವರು ಆಯ್ಕೆಯಾದರೆ ಒಳ್ಳೆಯದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಬುಮ್ರ ಅವರ ಹಾಗೆ ಶಮಿ ಅವರು ಸಹ ಅದ್ಭುತವಾಗಿ ಯಾರ್ಕರ್ ಹಾಕುತ್ತಾರೆ. ಜೊತೆಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಅನುಭವ ಇವರಿಗೆ ಇದೆ. ಭಾರತದ ಪರವಾಗಿ 17 ಟಿ20 ಪಂದ್ಯಗಳನ್ನು ಅಡಿ, 18 ವಿಕೆಟ್ಸ್ ಪಡೆದಿದ್ದಾರೆ.
ದೀಪಕ್ ಚಾಹರ್ :- ಇವರು ಸ್ವಿಂಗ್ ಬೌಲಿಂಗ್ ಮಾಡುವುದರಲ್ಲಿ ಪ್ರವೀಣರು. ಕೆಳ ಕ್ರಮಾಂಕದಲ್ಲಿ ಒಳ್ಳೆಯ ಬ್ಯಾಟಿಂಗ್ ಸಹ ಮಾಡುತ್ತಾರೆ. ಪ್ರಸ್ತುತ ಚಾಹರ್ ಅವರು ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳನ್ನು ಆಡುತ್ತಿದ್ದು, ಮೊದಲ ಪಂದ್ಯದಲ್ಲಿ ಎರಡು ವಿಕೆಟ್ಸ್ ಪಡೆದು, ಉತ್ತಮ ಪ್ರದರ್ಶನ ನೀಡಿದ್ದಾರೆ.

ಉಮ್ರಾನ್ ಮಲಿಕ್ :- ಈ ವರ್ಷ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಉಮ್ರಾನ್ ಮಲಿಕ್. ವೇಗದ ಬೌಲಿಂಗ್ ಇಂದಾಗಿ ಉಮ್ರಾನ್ ಮಲಿಕ್ ಅವರು ಫೇಮಸ್ ಆಗಿದ್ದಾರೆ. ಕ್ರಿಕೆಟ್ ತಜ್ಞರು ಹೇಳುವ ಪ್ರಕಾರ, ಉಮ್ರಾನ್ ಮಲಿಕ್ ಅವರು ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮವಾದ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಉಮೇಶ್ ಯಾದವ್ :- ಈ ವರ್ಷ ಐಪಿಎಲ್ ನಲ್ಲಿ ಕೆಕೆಆರ್ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದರು ಉಮೇಶ್ ಯಾದವ್. ಜೊತೆಗೆ ಇವರು ಅನುಭವಿ ಹಿರಿಯ ಬೌಲರ್, ಭಾರತ ತಂಡಕ್ಕಾಗಿ 8 ಪಂದ್ಯಗಳನ್ನಾಡಿದ್ದು, 11 ವಿಕೆಟ್ಸ್ ಪಡೆದಿದ್ದಾರೆ. ಅನುಭವಿ ಬೌಲರ್ ಆಗಿರುವ ಇವರನ್ನು ಬಿಸಿಸಿಐ ಆಯ್ಕೆ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.