ಸೂರ್ಯ ಕುಮಾರ್ ಯಾದವ್ ರವರ ಶ್ರೀಮಂತಿಕೆ ಬಗ್ಗೆ ನಿಮಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಹೇಗಿದೆ ಗೊತ್ತೇ ಸೂರ್ಯ ರವರ ಆಸ್ತಿ, ಐಶ್ವರ್ಯ.
ಭಾರತ ತಂಡದಲ್ಲಿ ಪ್ರಸ್ತುತ ಅದ್ಭುತವಾದ ಫಾರ್ಮ್ ನಲ್ಲಿರುವ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರು. 4ನೇ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್, ಪ್ರತಿ ಪಂದ್ಯದಲ್ಲು ಅದ್ಭುತವಾದ ಪ್ರದರ್ಶನ ನೀಡಿ, ಭಾರತ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಈ ಪ್ರದರ್ಶನ ನೋಡಿ ಹಲವರಿಗೆ ಅವರ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಗಿದೆ. ಇಂದು ನಾವು ಸೂರ್ಯಕುಮಾರ್ ಅವರ ವೈಯಕ್ತಿಕ ಜೀವನಜ್ ಅವರ ಶ್ರೀಮಂತಿಕೆ ಎಲ್ಲದರ ಬಗ್ಗೆ ತಿಳಿಸುತ್ತೇವೆ ನೋಡಿ…
ಸೂರ್ಯಕುಮಾರ್ ಯಾದವ್ ಅವರು ಹುಟ್ಟಿದ್ದು ಮುಂಬೈನಲ್ಲಿ, 1990ರ ಸೆಪ್ಟೆಂಬರ್ 14ರಂದು ಜನಿಸಿದರು. ಇವರ ತಂದೆ ಅಶೋಕ್ ಕುಮಾರ್ ಇಂಜಿನಿಯರ್, ಇವರ ತಾಯಿ ಸ್ವಪ್ನ ಕುಮಾರ್, ತಂದೆ ತಾಯಿಗೆ ಸೂರ್ಯಕುಮಾರ್ ಅವರು ಒಬ್ಬನೇ ಮಗ ಆಗಿದ್ದಾರೆ. ಇವರ ಪತ್ನಿಯ ಹೆಸರು ದೇವಿಕ ಶೆಟ್ಟಿ. ಚಿಕ್ಕ ವಯಸ್ಸಿನಿಂದಲು ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಸೂರ್ಯಕುಮಾರ್, 2010ರಲ್ಲಿ ವೃತ್ತಿ ಜೀವನ ಶುರು ಮಾಡಿದರು. ಮೊದಲ ಮ್ಯಾಚ್, ಮುಂಬೈ ಪರವಾಗಿ ದೆಹಲಿಯಲ್ಲಿ ಆಡುವಾಗ 89 ಎಸೆತಗಳಲ್ಲಿ 73 ರನ್ ಗಳಿಸಿದರು.

ಇವರ ಮೆಚ್ಚಿನ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ. ಸೂರ್ಯಕುಮಾರ್ ಯಾದವ್ ಅವರು ಬಹಳ ಇಷ್ಟಪಟ್ಟ ಸಿನಿಮಾ ಓಂ ಶಾಂತಿ ಓಂ, ಬಾಜಿರಾವ್ ಮಸ್ತಾನಿ, ಗೋಲ್ಮಾಲ್, ಹೇರ ಫೇರಿ, ಧಮಾಲ್, ಅಂದಾಜ್ ಅಪ್ನ ಅಪ್ನ. ಇನ್ನು ಸೂರ್ಯಕುಮಾರ್ ಯಾದವ್ ಅವರ ಮೆಚ್ಚಿನ ಬ್ಯಾಟ್ಸ್ಮನ್ ಬಗ್ಗೆ ಹೇಳುವುದಾದರೆ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್. ಇವರ ಮೆಚ್ಚಿನ ಬೌಲರ್, ವಸಿಂ ಅಕ್ರಂ, ಜಹೀರ್ ಖಾನ್. ಇನ್ನು ಸೂರ್ಯಕುಮಾರ್ ಯಾದವ್ ಅವರ ಒಟ್ಟು ಆಸ್ತಿ 30 ಕೋಟಿ ರೂಪಾಯಿ ಆಗಿದೆ, ಇವರ ಒಟ್ಟು ನಿವ್ವಳ $4ಮಿಲಿಯನ್ ಡಾಲರ್ ಎಂದು ಮಾಹಿತಿ ಸಿಕ್ಕಿದೆ.