ಕೊನೆಗೂ ಮೌನ ಮುರಿದ ದ್ರಾವಿಡ್. ತಂಡದಲ್ಲಿ ಇಷ್ಟೆಲ್ಲಾ ಬದಲಾವಣೆ ಮಾಡುತ್ತಿರುವುದು ಯಾಕೆ ಅಂತೇ ಗೊತ್ತೆ?? ದ್ರಾವಿಡ್ ಪ್ಲಾನ್ ಏನು ಗೊತ್ತೆ??

146

ಕಳೆದ ವರ್ಷ ಟಿ20 ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಅನಿರೀಕ್ಷಿತವಾಗಿ ನಿರ್ಗಮಿಸಿದ ನಂತರ, ಈ ವರ್ಷ ವರ್ಲ್ಡ್ ಕಪ್ ಗಾಗಿ ಬೆಸ್ಟ್ ಟೀಮ್ ಕಟ್ಟಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಇಲ್ಲಿಯವರೆಗು ನಡೆದ 29 ಪಂದ್ಯಗಳಲ್ಲಿ ಓಪನರ್ ಗಳಿಗಾಗಿ 11 ಬದಲಾವಣೆಗಳನ್ನು ಮಾಡಿದ್ದರು ಸಹ ಕೊನೆಗೆ ಇಷ್ಟು ದಿನಗಳ ಕಾಲ ಆರಂಭಿಕರಾಗಿದ್ದ ರೋಹಿತ್ ಶರ್ಮ ಮತ್ತು ಕೆ.ಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕ್ರಿಕೆಟ್ ತಜ್ಞರು ಹೇಳುವ ಪ್ರಕಾರ, ಪದೇ ಪದೇ ಈ ರೀತಿ ಪ್ಲೇಯಿಂಗ್ 11 ನಲ್ಲಿ ಬದಲಾವಣೆ ಮಾಡುತ್ತಿದ್ದರೆ, ಆಟಗಾರರ ಆತ್ಮವಿಶ್ವಾಸ ಕಡಿಮೆ ಆಗಬಹುದು ಎನ್ನುವ ಮಾತು ಹೇಳಿತ್ತಿದ್ದರೆ, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ತಂಡದ ನಡುವೆ ಒಗ್ಗಟ್ಟು ಮತ್ತು ಮಾತುಕತೆ ಚೆನ್ನಾಗಿದೆ, ಅಂಥದ್ದೇನು ಆಗುವುದಿಲ್ಲ..ಎಂದಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯಕ್ಕಿಂತ ಮೊದಲು ನಡೆದ ಪ್ರೆಸ್ ಮೀಟ್ ನಲ್ಲಿ ಈ ವಿಚಾರಗಳ ಬಗ್ಗೆ ಮಾತನಾಡಿ ಕ್ಲಾರಿಟಿ ನೀಡಿದ್ದಾರೆ ರಾಹುಲ್ ದ್ರಾವಿಡ್, “ಒಂದೇ ಪ್ಲೇಯಿಂಗ್ 11 ಪ್ರತಿ ಪಂದ್ಯದಲ್ಲು ಆಡಬೇಕು ಎಂದು ನಮ್ಮಿಂದ ನಿರೀಕ್ಷೆ ಮಾಡುವುದು ಬಹಳ ಅಸಹಜ ಎನ್ನಿಸುತ್ತದೆ. ಕೆಲವೊಮ್ಮೆ ಜನರು ಹೇಳುವ ಹಾಗೆ ತಂಡದಲ್ಲಿ ನಡೆಯುವ ಪ್ರಯೋಗಗಳನ್ನು ನಾವು ಕೂಡ ಒತ್ತಡದಿಂದಲೇ ಮಾಡಿರುತ್ತೇವೆ. ನಿನ್ನೆಯ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರ ಆಡುತ್ತಿಲ್ಲ ಎಂದರೆ ಅದು ನಾವು ಮಾಡುತ್ತಿರುವ ಪ್ರಯೋಗ ಅಲ್ಲ, ಅವರಿಗೆ ಅನಾರೋಗ್ಯವಾಗಿದೆ. ಜೂನ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ 5 ಪಂದ್ಯಗಳಲ್ಲಿ, ಒಂದೇ ಪ್ಲೇಯಿಂಗ್ 11 ಟೀಮ್ ಅಡಿತ್ತು, ಆಗ ಜನರು ಬದಲಾವಣೆ ಯಾಕೆ ಮಾಡುತ್ತಿಲ್ಲ ಎಂದಿದ್ದರು. ನಾವು ಏನೇ ಮಾಡಿದರೂ ಒಂದಲ್ಲಾ ಒಂದು ಮಾತುಗಳನ್ನು ಕೇಳುತ್ತೇವೆ..

ಜನರಿಗೆ ಇದು ಪೂರ್ತಿಯಾಗಿ ಅರ್ಥ ಆಗುವುದಿಲ್ಲ. ಆದರೆ ನಮ್ಮ ತಂಡಕ್ಕೆ ನಾವು ಮಾಡುತ್ತಿರುವ ಕೆಲಸಗಳ ಬಗ್ಗೆ ಆತ್ಮವಿಶ್ವಾಸ ಇದೆ. ಕೆಲವೊಮ್ಮೆ ಹೊರಗಿನವರಿಗೆ ಇದು ಸರಿಯಾಗಿ ಕಾಣಿಸದೆ ಇರಬಹುದು. ಪ್ಲೇಯರ್ ಗಳಿಗೆ ಏನಾಗುತ್ತಿದೆ, ಪ್ಲೇಯರ್ ಗಳನ್ನು ನಾವು ಹೇಗೆ ಮ್ಯಾನೇಜ್ ಮಾಡುತ್ತೇವೆ ಇದೆಲ್ಲವೂ ಬೇರೆ ರೀತಿಯೆ ಇರುತ್ತದೆ. ಕೆಲವೊಮ್ಮೆ ಟೆಸ್ಟ್ ಪಂದ್ಯಗಳನ್ನು ಆಡುತ್ತಿರುತ್ತೇವೆ, ಅದೇ ಸಮಯದಲ್ಲಿ ಐರ್ಲೆಂಡ್ ನಲ್ಲಿ ಸೀರಿಸ್ ನಡೆಯುತ್ತಿರುತ್ತದೆ, ಹಾಗಿರುವಾಗ ಸಾಕಷ್ಟು ಯೋಚನೇ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ..” ಎಂದಿದ್ದಾರೆ. ಇನ್ನು ವಿಶ್ವಕಪ್ ಗೆ ಈಗಾಗಲೇ 15 ಆಟಗಾರರು ಆಯ್ಕೆಯಾಗಿದ್ದು, ಈಗಾಗಲೇ ತಂಡದಿಂದ ಇಂಜುರಿ ಕಾರಣದಿಂದ ಜಸ್ಪ್ರೀತ್ ಬುಮ್ರ ಮತ್ತು ರವೀಂದ್ರ ಜಡೇಜಾ ಹೊರಹೋಗಿದ್ದು, ಪ್ಲೇಯಿಂಗ್ 11 ಬಗ್ಗೆ ಸಹ ಮಾತನಾಡಿದ್ದಾರೆ ದ್ರಾವಿಡ್.

“ಟೂರ್ನಿ ಶುರುವಾಗುವ ಒಂದು ತಿಂಗಳು ಮೊದಲೇ ಪ್ಲೇಯಿಂಗ್ 11 ಅನ್ನು ಅಂತಿಮಗೊಳಿಸಲು ಆಗುವುದಿಲ್ಲ. ವಿಕೆಟ್ ಮತ್ತು ಅಲ್ಲಿನ ಪರಿಸ್ಥಿತಿ ಹೇಗಿರುತ್ತದೆ ಎಂದು ಗೊತ್ತಿರುವುದಿಲ್ಲ. ತಂಡದ 15 ಜನರಲ್ಲಿ ಯಾವ ರೀತಿಯ ಸ್ಕಿಲ್ಸ್ ಇರಬೇಕು ಎಂದು ನಮಗೆ ಗೊತ್ತಿದೆ. ಇಂಜುರಿ ಹೊರತುಪಡಿಸಿ ಇನ್ನುಳಿದ ಆಟಗಾರರಲ್ಲಿ ವರ್ಲ್ಡ್ ಕಪ್ ಆಡಲು ಬೇಕಿರುವ ಕೆಲವು ಸ್ಕಿಲ್ ಗಳಿವೆ. ವರ್ಲ್ಡ್ ಕಪ್ ಅಂತಹ ಪಂದ್ಯಗಳಲ್ಲಿ ಐದು ಅಥವಾ ನಾಲ್ಕು ಬೇರೆ ಬೇರೆ ಸ್ಥಳಗಳಲ್ಲಿ ಆಡಬೇಕಾಗುತ್ತದೆ. ಹಾಗಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಆಗುವ ಹಾಗೆ, ಸ್ಕ್ವಾಡ್ ನಲ್ಲಿ ವಿಭಿನ್ನತೆ ಮತ್ತು ವರ್ಸಟೈಲಿಟಿ ಇರಬೇಕು. ಹಿಂದಿನ ಕೆಲವು ಸೀರೀಸ್ ಗಳಲ್ಲಿ ನಾವು ಅಂದುಕೊಂಡಿರುವ ಸ್ಕ್ವಾಡ್ ನಮಗೆ ಸಿಕ್ಕಿಲ್ಲ, ಇದಕ್ಕೆ ಬೇರೆ ಬೇರೆ ಕಾರಣಗಳಿವೆ, ಇದು ನಡೆಯಲು ಬಹುದು. ಆದರೆ ಪ್ರಸ್ತುತ ತಂಡದ 15 ರ ಬಳಗದಲ್ಲಿ ಇರುವವರು ಚೆನ್ನಾಗಿ ಆಡಬಲ್ಲರು..” ಎಂದು ತಿಳಿಸಿದ್ದಾರೆ ರಾಹುಲ್ ದ್ರಾವಿಡ್ ಅವರು.

Leave A Reply

Your email address will not be published.