Rashmika Mandanna : ಫಿಲ್ಮ್‌ಫೇರ್ ಸಮಾರಂಭ ಕ್ಕೆ ರಶ್ಮಿಕಾ ಗೈರಾಗಿರುವ ಹಿಂದಿನ ಕಾರಣ ಏನು ಗೊತ್ತೇ??
ಫಿಲ್ಮ್ ಫೇರ್ ಅವಾರ್ಡ್ಸ್ ಪ್ರತಿಷ್ಠಿತ ಕಾರ್ಯಕ್ರಮ ಆಗಿದೆ, ಇದರಲ್ಲಿ ಪಾಲ್ಗೊಳ್ಳಲು ಕಲಾವಿದರು ಕಾಯುತ್ತಲಿರುತ್ತಾರೆ, ಈ ವರ್ಷ 67ನೇ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ ವಿಶೇಷವಾಗಿ ಬೆಂಗಳೂರಿನಲ್ಲಿ ನಡೆಯಿತು, ಈ ಶೋಗೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಸ್ಟಾರ್ ಕಲಾವಿದರು ಬಂದಿದ್ದರು, ಆದರೆ ರಶ್ಮಿಕಾ ಮಂದಣ್ಣ ಅವರು ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡರು. ರಶ್ಮಿಕಾ ಅಭಿನಯದ ಪುಷ್ಪ ಸಿನಿಮಾಗೆ ಐದಾರು ಅವಾರ್ಡ್ ಗಳು ಬಂದವು, ಪುಷ್ಪ ಸಿನಿಮಾದ ಇಡೀ ತಂಡ ಕಾರ್ಯಕ್ರಮದಲ್ಲಿದ್ದು, ಆದರೆ ಕರ್ನಾಟಕದವರೆ ಆದ ರಶ್ಮಿಕಾ ಮಂದಣ್ಣ ಮಾತ್ರ ಫಿಲ್ಮ್ ಫೇರ್ ಶೋಗೆ ಗೈರಾಗಿದ್ದರು. ಇಲ್ಲಿ ಫಿಲ್ಮ್ ಫೇರ್ ಅವಾರ್ಡ್ ಶೋ ನಡೆಯುತ್ತಿದ್ದರೆ, ಅತ್ತ ರಶ್ಮಿಕಾ ಮಾಲ್ಡಿವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದರು. ರಶ್ಮಿಕಾ ಅವರಿಗೆ ಅವಾರ್ಡ್ ಬಂದಿಲ್ಲದೆ ಇರುವುದರಿಂದ ಆಕೆ ಫಿಲ್ಮ್ ಫೇರ್ ಅವಾರ್ಡ್ಸ್ ಶೋಗೆ ಬಂದಿಲ್ಲ ಎಂದು ಅನ್ನಿಸುತ್ತಿದೆ.
ಪುಷ್ಪ ಸಿನಿಮಾಗೆ ಅತ್ಯುತ್ತಮ ನಾಯಕನಟ ಪ್ರಶಸ್ತಿ ಸಿಕ್ಕಿತು, ಆದರೆ ಅತ್ಯುತ್ತಮ ನಟಿ ಕ್ಯಾಟಗರಿಯ ಎರಡು ಅವಾರ್ಡ್ ಸಿಕ್ಕಿದ್ದು ಮತ್ತೊಬ್ಬ ಸ್ಟಾರ್ ನಟಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ ಅವರಿಗೆ, ಅವಾರ್ಡ್ ಬರಲಿಲ್ಲ ಎಂದು ಬೇಸರಗೊಂಡ ರಶ್ಮಿಕಾ ಅವರು ಅವಾರ್ಡ್ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡರು ಎನ್ನಲಾಗಿದೆ. ಇತ್ತ ನೆಟ್ಟಿಗರು, ಅವಾರ್ಡ್ ಕೊಟ್ಟರೆ ಮಾತ್ರ ಈಕೆ ಕಾರ್ಯಕ್ರಮಗಳಿಗೆ ಬರುವುದಾ ಎಂದು ಕಮೆಂಟ್ಸ್ ಬರೆಯುತ್ತಿದ್ದಾರೆ. ರಶ್ಮಿಕಾ ಅವರು ಮಾಲ್ಡಿವ್ಸ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ, ಮಾಲ್ಡಿವ್ಸ್ ನ ಅವರ ಗ್ಲಾಮರಸ್ ಫೋಟೋಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ರಶ್ಮಿಕಾ ಅವರು ಮಾಲ್ಡಿವ್ಸ್ ಗೆ ಒಬ್ಬರೇ ಹೋಗಿದ್ದಾರಾ ಅಥವಾ ಯಾರದ್ದಾದರು ಜೊತೆಯಾಗಿ ಹೋಗಿದ್ದಾರಾ ಎನ್ನುವ ಚರ್ಚೆ ಹಾಟ್ ಟಾಪಿಕ್ ಆಗಿ ನಡೆಯುತ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಸದ್ದು ಮಾಡುತ್ತಲೇ ಇದೆ, ಆದರೆ ಇವರಿಬ್ಬರು ಆ ವಿಚಾರವನ್ನು ಲೈಟ್ ಆಗಿ ತೆಗೆದುಕೊಂಡಿದ್ದಾರೆ. ವಿಜಯ್ ನಾನು ಜಸ್ಟ್ ಫ್ರೆಂಡ್ಸ್ ಎಂದು ರಶ್ಮಿಕಾ ಹೇಳುತ್ತಿದ್ದರು ಸಹ, ಇವರಿಬ್ಬರನ್ನು ಲಿಂಕ್ ಮಾಡಿ ಸುದ್ದಿಗಳು ಹರಿದಾಡುತ್ತಲೇ ಇದೆ, ಮಾಲ್ಡಿವ್ಸ್ ಗು ಸಹ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆಯಲ್ಲೇ ಹೋಗಿದ್ದಾರೆ ಎನ್ನಲಾಗುತ್ತಿದೆ. ಈ ಮಾಲ್ಡಿವ್ಸ್ ವಿಚಾರ ಚರ್ಚೆಯಾಗುತ್ತಿದ್ದರೆ, ಇತ್ತ ಸಿನಿಮಾಗಳ ವಿಚಾರದಲ್ಲಿ ಸಹ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ಎಲ್ಲದರಲ್ಲೂ ಬ್ಯುಸಿ ಆಗಿದ್ದಾರೆ ರಶ್ಮಿಕಾ.