ಮೊದಲ ಸ್ಥಾನ ಅಲಂಕರಿಸಿದ ಟೀಮ್ ಇಂಡಿಯಾ. ನೆದರ್ಲ್ಯಾಂಡ್ ಸೋಲಿಸಿದ ಭಾರತ.

118

ಸಿಡ್ನಿ ಅಲ್ಲಿ ಭಾರತ ನೆದರ್ಲ್ಯಾಂಡ್ ವಿರುದ್ಧ ತನ್ನ ಎರಡನೇ ಟಿ-೨೦ ವಿಶ್ವಕಪ್ ಪಂದ್ಯವನ್ನಾಡಿದೆ. ಇದರಲ್ಲಿ ಭಾರತ ೫೬ ರನ್ಗಳ ಅಂತರದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಟಿ-೨೦ ಪಂದ್ಯಾವಳಿಯಲ್ಲಿ ಇದೆ ಮೊದಲ ಬಾರಿಗೆ ನೆದರ್ಲ್ಯಾಂಡ್ ಭಾರತ ಎದುರು ಪಂದ್ಯವಾಡಿದೆ. ಇದಕ್ಕಿಂತ ಮೊದಲು ಮುಖಾಮುಖಿ ಆಗಲೇ ಇಲ್ಲ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮ ಅವರ ಅರ್ಧ ಶತಕ ದೊಂದಿಗೆ ಉತ್ತಮ ಆರಂಭ ಪಡೆಯಿತು.

ರೋಹಿತ್ ಶರ್ಮ ೩೯ ಬಾಲ್ ಗಳಲ್ಲಿ ೩ ಸಿಕ್ಸರ್ ಸಹಿತ ೫೩ ರನ್ ಗಳಿಸಿದ್ದಾರೆ. ಇದಾದ ನಂತರ ವಿರಾಟ್ ಕೊಹ್ಲಿ ೪೪ ಬಾಲ್ ಗಳಲ್ಲಿ ೬೨ ರನ್ ಗಳಿಸಿದರೆ ಸೂರ್ಯಕುಮಾರ್ ಯಾದವ್ ೨೫ ಬಾಲ್ ಗಳಲ್ಲಿ ೫೧ ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಅವರ ಈ ಇನ್ನಿಂಗ್ಸ್ ಅಲ್ಲಿ ೭ ಫೋರ್ ಹಾಗು ೧ ಸಿಕ್ಸ್ ಕೂಡ ಕೂಡಿತ್ತು. ಇನ್ನು ಕೆ ಎಲ್ ರಾಹುಲ್ ಬಗ್ಗೆ ಹೇಳುವುದಾದರೆ ೧೨ ಬಾಲ್ ಗಳಲ್ಲಿ ೯ ರನ್ ಗಳಿಸಿ ಔಟ್ ಆಗುವ ಮೂಲಕ ಎರಡನೇ ಪಂದ್ಯದಲ್ಲೂ ವಿಫಲರಾಗಿದ್ದಾರೆ. ಭಾರತ ಒಟ್ಟು ೨೦ ಓವರ್ ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೧೭೯ ಗಳಿಸಿತ್ತು.

ಇನ್ನು ನೆದರ್ಲ್ಯಾಂಡ್ ಪರ ಅತಿ ಹೆಚ್ಚು ರನ್ ಗಳಿಸಿದ್ದು ಟೈಮ್ ಪ್ರಿಂಗಲ್ 20 ಹಾಗುColin ಅಕರ್ಮನ್
೧೭ ರನ್ ಗಳಿಸಿದ್ದಾರೆ. ನೆದರ್ಲ್ಯಾಂಡ್ ತಂಡ ೨೦ ಓವರ್ ಗಳಲ್ಲಿ 123 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು. ಇನ್ನು ಭಾರತದ ಪರ ಭುವನೇಶ್ವರ್ ಕುಮಾರ್ ಅರ್ಶದೀಪ್ ಸಿಂಗ್, ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಎರಡು ವಿಕೆಟ್ ಪಡೆದು ನೆದರ್ಲ್ಯಾಂಡ್ ತಂದವನು ಕಟ್ಟಿ ಹಾಕುವಲ್ಲಿ ಯಶಸ್ವೀ ಆಗಿದ್ದಾರೆ. ಇನ್ನು ವಿಶ್ವಕಪ್ ೨೦೨೨ ಅಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂಬರ್ ೩ ಸ್ಥಾನ ಪಡೆದಿದ್ದಾರೆ. ಹಾಗೇನೇ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

Leave A Reply

Your email address will not be published.