Kannada Bigg Boss: ಅಮೂಲ್ಯ, ರಾಕಿ ಬಾಲ ಹಿಡಿಯುತ್ತಿದ್ದಾರೆ ಕಾವ್ಯಶ್ರೀ ಗೌಡ ಎಂದ ಪ್ರಶಾಂತ್ ಸಂಬರಗಿ.

96

Kannada Bigg boss season 9 ಅರ್ಧ ಭಾಗ ಮುಗಿದಿದ್ದು ಈಗಾಗಲೇ ಮನೆಯಲ್ಲಿ ಕಳಪೆ ಆಟ ಹಾಗು ಮನರಂಜನೆ ನೀಡದೆ ಇರುವ ಆಟಗಾರರು ಮನೆಯಿಂದ ಎಲಿಮಿನೇಷನ್ ಆಗಿ ಹೊರಗೆ ಹೋಗಿದ್ದಾರೆ. ಈ ಬಾರಿ ಮಾತ್ರವಲ್ಲದೆ ಪ್ರತಿ ಬಿಗ್ ಬಾಸ್ ಸೀಸನ್ ಅಲ್ಲಿ ಕೂಡ ಗುಂಪುಗಾರಿಕೆ ಇದ್ದೆ ಇರುತ್ತದೆ. ಅದೇ ರೀತಿ ಈ ಬಾರಿಯೂ ಹಾಗೇನೇ ಇದೆ ಎನ್ನುವುದು 10 ನೇ ವಾರಕ್ಕೆ ಕಾಲಿಡುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗು ಕಾಣುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಇಲ್ಲಿಯವರೆಗೂ ಬಲಿಷ್ಠ ಸ್ಪರ್ದಿಯಾಗಿ ಕಾಣಿಸಿಕೊಂಡಿರುವುದು ಕಾವ್ಯಶ್ರೀ ಗೌಡ. ಇವರು ಮಂಗಳ ಗೌರಿ ಎನ್ನುವ ಧಾರಾವಾಹಿ ಇಂದ ಮನೆ ಮನ ಗೆದ್ದಿರುವ ನಟಿ. ಇವರ ಪ್ರಖ್ಯಾತಿ ಎಷ್ಟಿದೆ ಎನ್ನುವುದಕ್ಕೆ ಇಲ್ಲಿಯವರೆಗೆ ಬಿಗ್ ಬಾಸ್ ಮನೆಯಲಿ ಎಲಿಮಿನೇಷನ್ ಆಗದೆ ಇರುವುದೇ ಸಾಕ್ಷಿ. ಇನ್ನು ಈ ಮನೆಯಲ್ಲಿ ಗುಂಪುಗಾರಿಕೆ ಎನ್ನುವುದು ಆಟಗಾರರು ಗೆಲುವಿನಲ್ಲೂ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ತಪ್ಪಿಲ್ಲ.

ವೋಟ್ ಮಾಡುವುದರಿಂದ ಹಿಡಿದು, ಇನ್ನೊಬ್ಬರಿಗೆ ಬೆಂಬಲ ನೀಡುವುದರ ವೆರೆಗೂ ಒಂದು ಗುಂಪು ಎನ್ನುವುದು ಬೇಕೇ ಬೇಕು. ಕಾವ್ಯಶ್ರೀ ಅವರು ಈ ಆವೃತ್ತಿ ಶುರು ಆಗಿದ್ದರಿಂದ ಇಲ್ಲಿಯವರೆಗೂ ಕಾಣಿಸಿಕೊಂಡಿದ್ದು ಅರುಣು ಸಾಗರ್, ಪ್ರಶಾಂತ್ ಸಂಬರಗಿ, ವಿನೋದ್ ಅವರ ಜೊತೆ. ಇದೀಗ ಅವರ ಚಿತ್ತ ಅನುಪಮಾ ಗೌಡ, ಅಮೂಲ್ಯ, ದಿವ್ಯ ಉರುಡುಗ ಹಾಗು ರಾಕೇಶ್ ಅಡಿಗ ಅವರ ಗುಂಪಿನ ಕಡೆ ವಾಲುತ್ತಿದೆ ಎಂದು ಪ್ರಶಾಂತ್ ಸಂಬರಗಿ ಓಪನ್ ಆಗಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.