Trending News: ಸದಾ ಮೋದಿ, ಅಂಬಾನಿ ಹಾಗು ಅದಾನಿ ಬಯ್ಯುತ್ತಿದ್ದ NDTV ನ್ಯೂಸ್ ಚಾನೆಲ್ ಗೌತಮ್ ಅದಾನಿ ತೆಕ್ಕೆಗೆ.
ಮೋದಿ ಹಾಗು ಬಿಜೆಪಿ ಸರಕಾರದ ವಿರುದ್ಧ ಮಾತಾಡುತ್ತಿದ್ದ ಒಂದೇ ಒಂದು ರಾಷ್ಟೀಯ ಚಾನೆಲ್ ಇದ್ದರೆ ಅದು NDTV. ಇದೀಗ ಅದು ಕೂಡ ಅದಾನಿ ಸಂಸ್ಥೆಗೆ ಸೇರಿದೆ. ನ್ಯೂ ಡೆಲಿ ಟೆಲಿವಿಷನ್ ಎನ್ನುವ ಚಾನೆಲ್ ಅನ್ನು ಪ್ರಣೋಯ್ ರಾಯ್ ಹಾಗು ರಾಧಿಕಾ ರಾಯ್ ಇಬ್ಬರು ಕೂಡ RRPR ಎನ್ನುವ ಪ್ರೈವೇಟ್ ಕಂಪನಿ ಮೂಲಕ ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದರು. ಇದೀಗ ಈ ಸಂಸ್ಥೆಗೆ ಇಬ್ಬರು ರಾಜೀನಾಮೆ ನೀಡುವ ಮೂಲಕ ಎಲ್ಲ ಶೇರ್ ಗಳನ್ನೂ ಅಧಾನಿ ಸಂಸ್ಥೆಗೆ ನೀಡಿದೆ.
RRPR ಎನ್ನುವ ಪ್ರೈವೇಟ್ ಕಂಪನಿ NDTV ಚಾನೆಲ್ ನ ೨೯.೧೮ ರಷ್ಟು ಪಾಲು ಹೊಂದಿತ್ತು. ಅದನ್ನು ಅದಾನಿ ಸಂಸ್ಥೆ ಖರೀದಿ ಮಾಡಿತ್ತು. ಹಾಗೇನೇ ಸಾರ್ವಜನಿಕರಿಂದ ಉಳಿದ ೨೬% ಪಾಲನ್ನು ಕೂಡ ಖರೀದಿಸಲು ಘೋಷಣೆ ಮಾಡಿತ್ತು. ಈ ತರ ಅದಾನಿ ಈ ಚಾನೆಲ್ ಅನ್ನು ಸಂಪೂರ್ಣವಾಗಿ ಹಿಡಿತ ಸಾದಿಸಲು ಹೊರಟಿತ್ತು. ಇದೀಗ ಅದಾನಿ ಸಂಸ್ಥೆ ಒಟ್ಟು ೫೧.೧೮% ಶೇರ್ ಹೊಂದಿದೆ.

ಇದಲ್ಲದೆ ಪ್ರಣಯ್ ರಾಯ್ ಹಾಗು ರಾಧಿಕಾ ಒಟ್ಟು ೩೨% ರಷ್ಟು ಪಾಲನ್ನು ಹೊಂದಿದ್ದು ಅದು ಅವರ ವಯಕ್ತಿಕವಾಗಿದೆ. ಇದನ್ನು ಅವರ ಬಳಿಯೇ ಇರಿಸಿಕೊಂಡಿದ್ದಾರೆ. ಸೋಮವಾರ ಎಲ್ಲ ಶೇರ್ RRPR ನ ಎಲ್ಲ ಶೇರ್ ಗಳನ್ನೂ ಅದಾನಿ ಸಂಸ್ಥೆಗೆ ಹಸ್ತಾಂತರಿಸಿದ ಬಳಿಕ ಈ ಮಾಹಿತಿ ಹೊರಬಿದ್ದಿದೆ. ಇದೀಗ ಮೋದಿ ಹಾಗು ಬಿಜೆಪಿ ಯನ್ನು ದುರುತ್ತಿದ್ದ ಒಂದು ಚಾನೆಲ್ ಕಮ್ಮಿ ಆಗಿದ್ದು ಮುಂದೆ ಯಾವ ರೀತಿ ಮಾಹಿತಿ ಈ ಚಾನೆಲ್ ಅಲ್ಲಿ ಪ್ರಸಾರ ಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.