IPL News :ಬಿಗ್ ಬ್ಯಾಷ್ ನಿಯಮ ಇನ್ನು ಮುಂದೆ ಐಪಿಎಲ್ ಅಲ್ಲೂ ಕಾಣಸಿಗುತ್ತದೆ. ಇನ್ಮುಂದೆ ಐಪಿಎಲ್ ಕಿಕ್ ಬೇರೆ ಲೆವೆಲ್ ಅಲ್ಲಿರಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಭಾರತದಲ್ಲಿ ನಡೆಸಲಾಗುತ್ತಿರುವ ಅತ್ಯಂತ ಯಶಸ್ವಿ ಟೂರ್ನಮೆಂಟ್ ಗಳಲ್ಲಿ ಮೊದಲನೇದ್ದಾಗಿದೆ. ಹದಿನೈದು ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಬಿಸಿಸಿಐ ಈ ಬಾರಿ ಅಂದರೆ ಮುಂದೆ ಬರಲಿರುವ ೧೬ ನೇ ಆವೃತ್ತಿಗೆ ಬಿಗ್ ಬ್ಯಾಷ್ (BigBash) ನಲ್ಲಿ ಈಗಾಗಲೇ ಜಾರಿಯಲ್ಲಿರುವ ಹೊಸ ನಿಯಮವನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಹಾಗೇನೇ ಈ ನಿಯಮ ಐಪಿಎಲ್ 16 ರಲ್ಲಿ ಕಾಣಸಿಗಬಹುದು ಎಂದು ಹೇಳಲಾಗುತ್ತಿದೆ.

ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮ ಎನ್ನುವುದು ಈಗಾಗಲೇ ಬಿಗ್ ಬ್ಯಾಷ್ ಫುಟ್ ಬಾಲ್ (Football) ಹಾಕಿ ಆಟಗಳಲ್ಲಿ ಇದೆ. ಹಾಗೇನೇ ಈ ನಿಯಮ ಬಂದರೆ ಅಭಿಮಾನಿಗಳಲ್ಲಿ ಹೊಸ ಹುರುಪು ಬರಲಿದೆ ಹಾಗೇನೇ ಕಿಕ್ ಕೂಡ ಸಿಗಲಿದೆ. ಏನಿದು ನಿಯಮ ಅಂತೀರಾ? ಇಂಪ್ಯಾಕ್ಟ್ ಪ್ಲೇಯರ್ 9Impact Player) ಎಂದರೆ ಎರಡು ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ನಾಲ್ವರು ಆಟಗಾರರನ್ನು ಬದಲಿ ಅಂದರೆ substitute ಆಗಿ ಆಯ್ಕೆ ಮಾಡಿಕೊಳ್ಳಬೇಕು. ಟಾಸ್ ಸಮಯದಲ್ಲಿ ನಾಲ್ಕು ಆಟಗಾರರ ಹೆಸರನ್ನು ಆನ್ ಫೀಲ್ಡ್ ಹಾಗು ಆಫ್ ಫೀಲ್ಡ್ ಅಂಪೈರ್ ಗಳಿಗೆ ನೀಡಬೇಕು.
ಈ ನಾಲ್ಕು ಆಟಗಾರರಲ್ಲಿ ಒಬ್ಬ ತಂಡಕ್ಕೆ ಗೆಲುವು ನೀಡಲು ಮುಖ್ಯ ಎಂದೆನಿಸಿದರೆ, ಆ ಆಟಗಾರನನ್ನು 14 ನೇ ಓವರ್ಗಳ ನಂತರ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡಿಸಬಹುದು. ಅಂದರೆ ಈ ಆಟಗಾರ ಕೇವಲ ಕೊನೆಯ 6 ಓವರ್ ಗಳಿಗೆ ಮಾತ್ರ ಸೀಮಿತವಾಗಿರುತ್ತಾನೆ. ಇದು ಭಾರತದ ದೇಶಿಯ ಮುಷ್ಟಾಕ್ ಅಲಿ ಟಿ-೨೦ ಪಂದ್ಯಗಳಿಗೆ ಇದರ ಮೊದಲು ಜಾರಿ ಮಾಡಲಾಗಿತ್ತು. ಅದು ಯಶಸ್ಸು ಆದ ನಂತರ ಈ ನಿಯಮ ಐಪಿಎಲ್ ಅಲ್ಲೂ ಬರಲಿದೆ. ಈಗಾಗಲೇ ಬಿಲಿಯನ್ ಡಾಲರ್ ಉದ್ಯಮ ನಡೆಸುವ ಐಪಿಎಲ್ (IPL) ಇನ್ನು ಮುಂದೆ ಇನ್ನು ಎತ್ತರಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.