Siddeshwara Swamiji: ಸಿದ್ದೇಶ್ವರ ಶ್ರೀ ಅವರು ಬರೆದ ವಿಲ್ ಅಲ್ಲಿ ಏನೇನಿದೆ ಗೊತ್ತ? ನಡೆದಾಡುವ ದೇವರು ಎನ್ನುವುದು ಸುಳ್ಳಲ್ಲ.

138

ಸಿದ್ದೇಶ್ವರ ಶ್ರೀ ನಡೆದಾಡುವ ದೇವರು, ಜ್ಞಾನ ದಾಸೋಹ ಮೂಲಕ ಕೋಟ್ಯಂತರ ಜನರ ಮನೆ ಮನಗಳಲ್ಲಿ ನೆಲೆಸಿದ್ದಾರೆ. ಇದಕ್ಕೆ ಸಾಕ್ಷಿ ಇವರು ದೇವರಲ್ಲಿ ಲೀನವಾದ ಮೇಲು ಕೂಡ ಮಠದ ಕಡೆ ಬರುತ್ತಿದ್ದರೆ ಲಕ್ಷಾಂತರ ಜನರು. ಶ್ರೀ ಗಳ ಅಗಲಿಕೆಯಿಂದ ಆಶ್ರಮದಲ್ಲಿ ಮೌನ ತುಂಬಿಕೊಂಡಿದೆ. ಆದರೆ ಭಕ್ತರು ಸವಿರೋಪಾದಿಯಲ್ಲಿ ಶ್ರೀ ಗಳ ಚೀತಾ ಭಸ್ಮ ವನ್ನು ನೋಡಲು ಬರುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರಗಳಿಂದಲೂ ಕೂಡ ಜನರು ವಾಹನಗಳ ಮೂಲಕ ದೌಡಾಯಿಸುತ್ತಿದ್ದರೆ.

ಸಿದ್ದೇಶ್ವರ ಶ್ರೀ ಗಳು ಖ್ಯಾತ ಪ್ರವಚನಕಾರರು ಆಗಿದ್ದರು. ಇವರು ಪರಮಾತ್ಮನ ಪದ ಸೇರುವ ಮೊದಲೇ ವಿಲ್ ಕೂಡ ಬರೆದಿಟ್ಟಿದ್ದರು ಎನ್ನುವ ವಿಷಯ ಇದೀಗ ಗೊತ್ತಾಗಿದೆ. ಇದನ್ನು 9 ವರ್ಷಗಳ ಮೊದಲೇ ಅಂದರೆ 2014 ರಲ್ಲಿ ಬರೆದಿಟ್ಟಿದ್ದಾರೆ. ಇದರಲ್ಲಿ ಮುಖ್ಯವಾಗಿ ನನಗಾಗಿ ಯಾವುದೇ ಸ್ಮಾರಕ ನಿರ್ಮಾಣ ಮಾಡಬೇಡಿ ಎಂದು ಹೇಳಿದ್ದಾರೆ. ಹಾಗೇನೇ ಇನ್ನು ಹಲವಾರು ವಿಷಯಗಳನ್ನು ಬರೆದಿಟ್ಟಿದ್ದಾರೆ.

ಶ್ರೀಗಳು ಬರೆದ ವಿಲ್ ನಲ್ಲೇನಿದೆ?
ಲಿಂಗೈಕ್ಯದ ಬಳಿಕ ಅವರ ದೇಹ ಮಣ್ಣು ಮಾಡದೇ, ಅದನ್ನು ಅಗ್ನಿಸ್ಪರ್ಶ ಮಾಡಿ ಎಂದು ಬರೆದಿದ್ದಾರೆ. ಚಿತಾಭಸ್ಮ ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ. ಲಿಂಗೈಕ್ಯದ ಬಳಿಕ ಯಾವುದೇ ಶ್ರಾರ್ದ ಕರ್ಮಗಳನ್ನು ಮಾಡುವಂತಿಲ್ಲ. ಯಾವುದೇ ಸ್ಮಾರಕ ನಿರ್ಮಾಣ ಮಾಡುವಂತಿಲ್ಲ. ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಇನ್ನು ಶ್ರೀ ಗಳು ಅಂತಿಮ ಸಂದೇಶ ಕೂಡ ಜನರಿಗೆ ನೀಡಿದ್ದಾರೆ.

ಶ್ರೀಗಳ ಅಂತಿಮ ಸಂದೇಶ.
ಸತ್ಯವು ಇಲ್ಲ, ಅಸತ್ಯವು ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನು ಇಲ್ಲ, ನೀನು ಇಲ್ಲ. ಇಲ್ಲ ಇಲ್ಲ ಎಂಬುವುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು ಅಂತ್ಯಃ ಪ್ರಣಾಮಾಂಜಲಿಃ – ಶ್ರೀ ಸಿದ್ದೇಶ್ವರ ಸ್ವಾಮೀಜಿ. ಇದು ಸ್ವಾಮೀಜಿ ಅವರ ಅಂತಿಮ ಸಂದೇಶವಾಗಿದ್ದು, ತಮ್ಮ ಈ ಪ್ರವಚನಗಳಿಂದ ಅನೇಕ ಭಕ್ತರ ಜೀವನ ಬದಲಿಸಿದ್ದಾರೆ.

Leave A Reply

Your email address will not be published.