ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮಾಜಿ ನಾಯಕ ಹಾಗು ವಿಕೆಟ್ ಕೀಪರ್ ಹಾಗು ಸ್ಟಾರ್ ಆಟಗಾರ. ಯಾರಿಗೆ ಇವರ ಬಗ್ಗೆ ಗೊತ್ತಿಲ್ಲ ಹೇಳಿ. ಹಲವಾರು ಅಭಿಮಾನಿಗಳನ್ನು ಹೊಂದಿರುವ ಆಟಗಾರ. ನಾಯಕತ್ವದಲ್ಲಿ ಚಾಣಕ್ಯ ಹಾಗು ವಿಕೆಟ್ ಕೀಪಿಂಗ್ ಅಲ್ಲಿ ಕಿಂಗ್ ಆಗಿರುವ ಆಟಗಾರ. ಇವರ ಬಗ್ಗೆ ಹಲವು ವಿಷಯಗಳನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ.
2018 ರಲ್ಲಿ ಎರಡು ಬಾರಿ ಚೆನ್ನೈ ಬ್ಯಾನ್ ಆದ ನಂತರ, ಇದನ್ನು ಹಿರಿಯರ ತಂಡ ಎಂದು ಕರೆಯಲಾಗುತಿತ್ತು. ಆದರೆ ಈ ತಂಡ ನಾಲ್ಕು ಬಾರಿ ಐಪಿಎಲ್ ಕಪ್ ಗೆದ್ದಿದೆ. 2018 ರಲ್ಲಿ ಧೋನಿ ತಮ್ಮ ಪತ್ನಿ ಸಾಕ್ಷಿ ಜೊತೆ ತಮ್ಮ ಊರಾದ ರಾಂಚಿಯಲ್ಲೇ ಮನೆ ಮಾಡಿದ್ದಾರೆ. ಅಲ್ಲಿಂದ ಇಲ್ಲಿ ತನಕ ಅಲ್ಲೇ ವಾಸಿಸುತ್ತಿದ್ದಾರೆ. ಈ ರಾಂಚಿ ಅಲ್ಲಿ ಇದೆ 7 ಎಕ್ರೆ ಹರಡಿರುವ ದೊಡ್ಡದಾದ ಐಷಾರಾಮಿ ಬಂಗಲೆ.

ನಿಮಗೆ ಹೇಳಬೇಕೆಂದರೆ ಈ ಐಷಾರಾಮಿ ಫಾರ್ಮ್ ಹೌಸ್ ಮಾಡಲು ತಗೊಂಡಿದ್ದು ಬರೋಬ್ಬರಿ 3 ವರ್ಷಗಳು. ಪರಿಸರದ ಮೇಲಿನ ಪ್ರೀತಿ ಧೋನಿ ಗೆ ಎಷ್ಟಿದೆ ಎನ್ನುವ ವಿಷಯ ಈ ಫಾರ್ಮ್ ಹೌಸ್ ನೋಡುವಾಗ ಗೊತ್ತಾಗುತ್ತದೆ. ಹಾಗೇನೇ ಈ ಫಾರ್ಮ್ ಹೌಸ್ ಅಲ್ಲಿ ಒಂದು ಸ್ಟೇಡಿಯಂ ಕೂಡ ಇದೆ. ಸ್ವಿಮ್ಮಿಂಗ್ ಫೂಲ್, ನೆಟ್ ಪ್ರಾಕ್ಟೀಸ್ ಮೈದಾನ ಹಾಗು ಅಲ್ಟ್ರ ಮಾಡ್ರನ್ ಜಿಮ್ ಕೂಡ ಇದೆ. ಧೋನಿ ತಮ್ಮ ಬಾಲ್ಯದಲ್ಲಿ ಚಿಕ್ಕ ಪುಟ್ಟ ಕೊನೆಯಲ್ಲಿ ವಾಸಿಸುತ್ತಿದ್ದರು. ಇದೀಗ ಏಳು ಎಕ್ರೆ ಮನೆಯಲ್ಲಿ ವಾಸಿಸುವಷ್ಟು ಬೆಳೆದಿದ್ದಾರೆ.