ಸಿದ್ದರಾಮಯ್ಯ ಬಗ್ಗೆ ಕೊನೆಗೂ ಮೌನ ಮುರಿದ ಲಾವಣ್ಯ ಬಲ್ಲಾಳ್. ಸಿಕ್ಕಾಪಟ್ಟೆ ವೈರಲ್ ಆಯಿತು ಸಿದ್ದು ವಿಡಿಯೋ.
ಸಿದ್ದರಾಮಯ್ಯನವರು ಸದಾ ಒಂದಿಲ್ಲ ಒಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರು ಹೋದಲ್ಲಿ ಆಡಿದ ಮಾತು ನಡೆಯುವ ರೀತಿ ಎಲ್ಲವೂ ವೈರಲ್ ಆಗುತ್ತದೆ. ಹೌದು ಅವರು ಮಾತನಾಡುವ ಶೈಲಿ ಅಂತಹದು ಮತ್ತು ಒಂದು ಗುಂಪಿನ ಜನರನ್ನು ಉದ್ರೇಕಿಸುವ ಮಾತು ಕೂಡ ಹೌದು. ಆದರೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿ ಇದ್ದಾರೆ ಸಿದ್ರಾಮಯ್ಯ ಅವರು.

ನಿನ್ನೆ ಡಿ ಕೆ ಶಿವಕುಮಾರ್ ಅವರು ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ಸಿದ್ದರಾಮಯ್ಯ ಬಾಗಿ ಆಗಿದ್ದರು. ಇಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದದ್ದು ಲಾವಣ್ಯ ಬಲ್ಲಾಳ್ ಅವರು. ಮೀಡಿಯಾ ಇಂಚಾರ್ಜ್ ಕೂಡ ಹೌದು ಇವರು. ವೇದಿಕೆಯಿಂದ ಹೊರ ಹೋಗುವಾಗ ಸಿದ್ರಾಮಯ್ಯ ಅವರು ಲಾವಣ್ಯ ಅವರನ್ನು ನೋಡಿಕೊಂಡು ಹೋಗುತ್ತಾ ಇವಳಾ ಎಂದಿದ್ದರು. ಈ ವೀಡಿಯೊ ಮಾತ್ರ ಬಹಳ ಸದ್ದು ಮಾಡಿತ್ತು ಮತ್ತು ವೈರಲ್ ಕೂಡ ಆಗಿತ್ತು. ಕಾರ್ಯಕ್ರಮ ಮುಗಿದ ನಂತರ ಈ ವೀಡಿಯೊ ನೋಡಿದ ಲಾವಣ್ಯ ಬಲ್ಲಾಳ್ ಅವರು ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವಿಡಿಯೋ ತುಂಬಾ ಕ್ಯೂಟ್ ಆಗಿದೆ, ಸಿದ್ರಾಮಯ್ಯ ಸರ್ ಅವರು ಹೋದಲ್ಲೆಲ್ಲ ವೈರಲ್ ಆಗುತ್ತಾರೆ. ಅವರು ಏನು ಮಾಡಿದರೂ ಅದು ಸುದ್ದಿ ಆಗುತ್ತದೆ. ನಾನು ಇದು ಈ ಪರಿ ವೈರಲ್ ಆಗುತ್ತದೆ ಅಂದು ಕೊಂಡಿಲ್ಲ ಸಿದ್ರಾಮಯ್ಯ ಸರ್ ಜೊತೆ ಇರುವ ಅನ್ಯೋನ್ಯತೆ ಗೌರವ ಇಲ್ಲಿ ಕಾಣುತ್ತದೆ. ಕೆಲವರು ಇದನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಅದು ಅವರವರ ಮನಸ್ಥಿತಿಗೆ ಬಿಟ್ಟಿದ್ದು ಅದಕ್ಕೆ ನಾನು ಏನು ಹೇಳುವುದಿಲ್ಲ ಎಂದು ಹೇಳಿದ್ದಾರೆ .