UAE: ದುಬೈ ನ ಅಲ್ ಮಿನ್ಹಾದ್ ಜಿಲ್ಲೆಗೆ ಹಿಂದ್ ಎನ್ನುವ ಮರುನಾಮಕರಣ ಮಾಡಿದ ಅಲ್ಲಿನ ಶೇಖ್ ಮೊಹಮ್ಮದ್. ಇದಕ್ಕೆ ಕಾರಣವೇನು ಗೊತ್ತೇ?

91

ದುಬೈ ನ ಆಡಳಿತ ನಡೆಸುತ್ತಿರುವ ಹಾಗು ಅಲ್ಲಿನ ಉಪರಾಷ್ಟ್ರಪತಿ ಹಾಗು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಒಂದು ಆದೇಶ ಹೊರಡಿಸಿದ್ದಾರೆ. ದುಬೈ ನ ಅಲ್ ಮಿನಾದ್ ಎನ್ನುವ ಜಿಲ್ಲೆಗೆ ಹಿಂದ್ ಸಿಟಿ ಎನ್ನುವ ಮರುನಾಮಕರಣ ಮಾಡುವಂತೆ ಹೇಳಿದ್ದಾರೆ. ೮೩.೯ ಸ್ಕ್ವೇರ್ ಕಿಲೋ ಮೀಟರ್ ವಿಸ್ತಾರ ಇರುವ ಈ ಜಿಲ್ಲೆ ಒಟ್ಟಾರೆ ನಾಲ್ಕು ಜೋನ್ ಗಳಿದ್ದು ಪ್ರತಿಯೊಂದಕ್ಕೆ ಹಿಂದ್ ೧, ಹಿಂದ್ ೨, ಹಿಂದ್ ೩ ಹಾಗು ಹಿಂದ್ ೪ ಎಂದು ಹೆಸರಿಡಲಾಗುತ್ತದೆ.

ಇದು ಸುದ್ದಿ ಮಾದ್ಯಮದಲ್ಲಿ ಬರುತ್ತಲೇ ಅನೇಕರು ಸಾಮಾಜಿಕ ಜಾಲತಾಣದಲ್ಲಿ, ಭಾರತೀಯರು UAE ಅಲ್ಲಿ ನೀಡಿದ ಕೊಡುಗೆಗೆ ಈ ಮರುನಾಮಕರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಅಧಿಕೃತವಾಗಿ ಈ ಮರುನಾಮಕರಣಕ್ಕೆ ಕಾರಣ ತಿಳಿದುಬಂದಿಲ್ಲ. ಅನೇಕರು ಅನೇಕ ಕಾರಣ ನೀಡಿದರೆ, ಈ ಪದಕ್ಕೂ ಕೂಡ ಅನೇಕ ಅರ್ಥ ಇದೆ.

ಹಿಂದ್ ಎನ್ನುವ ಪದಕ್ಕೆ ಅರೇಬಿಕ್ ಅಲ್ಲಿ ಅನೇಕ ಅರ್ಥಗಳಿವೆ. ಇದೊಂದು ಹಳೆ ಅರೇಬಿಕ್ ಹೆಸರು ಕೂಡ ಹೌದು. ಅಲ್ಲಿನ ಪ್ರಧಾನಿ ಶೇಖ್ ಮೊಹಮ್ಮದ್ ಅವರ ಪತ್ನಿ ಹೆಸರು ಕೂಡ ಹಿಂದ್ ಎನ್ನುವ ಹೆಸರಿಂದ ಪ್ರಾರಂಭ ಆಗುತ್ತದೆ. ಇನ್ನು ಒಂದು ಒಂಟೆ ಗುಂಪಿಗೆ ಹಿಂದ್ ಎನ್ನುವ ಹೆಸರು ಕೂಡ ಇದೆ. 100 ಕಿಂತ ಹೆಚ್ಚು ಒಂಟೆ ಗೆ ಹಿಂದ್ ಎನ್ನುವ ಹೆಸರಿಂದ ಕರೆಯುತ್ತಾರೆ. ಇನ್ನು ಹಿಂದ್ ಎಂದು ಭಾರತೀಯರನ್ನು ಕೂಡ ಕರೆಯುತ್ತಾರೆ. ಅಥವಾ ಹಿಂದಿ ಎಂದು ಕರೆಯುತ್ತಾರೆ.

Leave A Reply

Your email address will not be published.