12 ವರ್ಷದ ಹುಡುಗಿಯ ವಿಶೇಷ ಆವಿಷ್ಕಾರ, ಇನ್ನು ನೀರು ಕುಡಿದ ನಂತರ ಆ ಬಾಟಲಿಯನ್ನು ತಿನ್ನಬಹುದು. ಬಾಟಲಿ ಮಾಡಿದ್ದಾದರೂ ಯಾವುದರಿಂದ ಗೊತ್ತಾ?
ಭಾರತವಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಪ್ಲಾಸ್ಟಿಕ್ ಒಂದು ಮಾರಕ. ದೊಡ್ಡ ಸಮಸ್ಯೆಯಾಗಿದೆ. ಇಂದು ಇದರ ಬಳಕೆ ವಿಶ್ವದಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ಇದು ಆರೋಗ್ಯಕ್ಕೆ ಹಾನಿ ಎಂದು ಗೊತ್ತಿದ್ದರೂ ಕೂಡ ಜನರು ಇದನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದಾರೆ. ಕ್ಯಾರಿ ಬ್ಯಾಗ್ ಇಂದ ಹಿಡಿದು, ನೀರಿನ ಬೊಟ್ಟಲಿ ಗಳ ವರೆಗೆ ಇದರ ಉಪಯೋಗ ಇಂದು ನಡೆಯುತ್ತಿದೆ.

ಪ್ರಪಂಚದಾದ್ಯಂತ ಒಂದು ದಿನಕ್ಕೆ ನೀರಿನ ಬಾಟಲಿ ೧.೩ ಬಿಲಿಯನ್ ನಷ್ಟು ಮಾರಾಟವಾಗುತ್ತದೆ. ಆ ಪ್ರಮಾಣದ ಬಾಟಲಿ ಗಳಲ್ಲಿ ಅನೇಕ ಪ್ಲಾಸ್ಟಿಕ್ ಹಾನಿಕಾರಕ ಕೂಡ ಆಗಿದೆ. ಪ್ರತಿನಿತ್ಯ ಬಳಸುವ ಪ್ಲಾಸ್ಟಿಕ್ ಗಳಲ್ಲಿ ಮರುಬಳಕೆಗೆ ಉಪಯೋಗ ಆಗುವಂತದ್ದು ಕೇವಲ 9 ಶೇಕಡಾದಷ್ಟು ಮಾತ್ರ. ಉಳಿದ ಪ್ಲಾಸ್ಟಿಕ್ ಸಮುದ್ರಕ್ಕೆ, ನದಿಯ ಚರಂಡಿಗೆ ಎಸೆಯಲಾಗುತ್ತದೆ. ಉಳಿದದ್ದನ್ನು ಸುಡಲಾಗುತ್ತದೆ. ಈ ಸಮಸ್ಯೆ ಇಂದ ಮುಕ್ತಿ ಪಡೆಯಲು 12 ವರ್ಷದ ಬಾಲಕಿ ಒಂದು ವಿಶೇಷ ಆವಿಷ್ಕಾರದ ಜೊತೆಗೆ ಬಂದಿದೆ.
ಈ ಬಾಟಲಿ ಇಂದ ನೀರು ಕುಡಿದ ನಂತರ ಇದನ್ನು ಬಿಸಾಡದೆ, ಅದನ್ನು ತಿಂದು ಕಾಳಿ ಮಾಡಬಹುದು. ಕ್ಯಾಲಿಫೋರ್ನಿಯಾ ಸಂದುದ್ರ ತೀರಕ್ಕೆ ಹೋದಾಗ ಈ ಹುಡುಗಿ ದಡದಲ್ಲಿ ರಾಶಿ ರಾಶಿ ನೀರಿನ ಪ್ಲಾಸ್ಟಿಕ್ ಬಾಟಲ್ ನೋಡಿ ಅಂದೇ ಈ ಸಮಸ್ಯೆ ಗೆ ಆಗುವಷ್ಟು ಪರಿಹಾರ ಕಂಡು ಹಿಡಿಯಬೇಕೆಂದು ನಿಶ್ಚಯ ಮಾಡಿದಳು ಈ ಹುಡುಗಿ. ಈ ಆಲೋಚನೆ ಬಂದಕೂಡಲೇ ಸಂಪೂರ್ಣ ಸಮರ್ಪಣೆಯೊಂದಿಗೆ ತಿನ್ನಬಹುದಾದ ನೀರಿನ ಬಾಟಲಿಯನ್ನು ಕಂಡು ಹುಡುಕಿದಳು ಈ ಹುಡುಗಿ.
ಈ ಬಾಟಲಿ ಪ್ಲಾಸ್ಟಿಕ್ ನಿಂದ ತಯಾರಿಸಿದಲ್ಲ, ಬದಲಾಗಿ ರಾಸಾಯನಿಕಗಳಿಂದ ತಯಾರು ಮಾಡಲಾಗಿದ್ದು, ಇದು ದೇಹಕ್ಕೆ ಹಾಗು ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಕಾಲ್ಸಿಯಂ ಲ್ಯಾಕ್ಟೇಟ್, ಸೋಡಿಯಂ ಅಲ್ಜಿನೇಟ್, ನೀರು ಮತ್ತು ನಿಂಬೆ ರಸ ದೊಂದಿಗೆ ಬೇರೆ ರಾಸಾಯನಿಕ ಬಳಸಿ ಜೆಲ್ ಮಾದರಿಯ ಬಾಟಲಿ ಸ್ವರೋಪ ನೀಡಲಾಗಿದೆ. ಈ ಬಾಟಲಿ ಯಲ್ಲಿ ನೀರು ತುಂಬಿಸಿ, ಹಲ್ಲಿನ ಮೂಲಕ ರಂದ್ರ ಮಾಡಿ ನೀರು ಕುಡಿಯಬಹದು.

ಈ ಪರಿಸರ ಸ್ನೇಹಿ ಬಾಟಲ್ ಗಳನ್ನೂ ಮೂರೂ ವಾರಗಳ ಕಾಲ ಫ್ರಿಡ್ಜ್ ಅಲ್ಲಿ ಇರಿಸಬಹುದು. ಈ ಜೆಲ್ ಬಾಟಲಿಯಲ್ಲಿ ಮೂರರಿಂದ ನಾಲ್ಕಿ ಕಪ್ ನಷ್ಟು ನೀರು ತುಂಬಿಸಬಹುದು. ನೀರು ಕುಡುದ ನಂತರ ಇದನ್ನು ತಿನ್ನ ಬಹುದು ಅಥವಾ ಇದನ್ನು ಬಿಸಾಡಬಹುದು. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಅಮೇರಿಕಾದ ವಿಜ್ಞಾನ ಮೇಳಕ್ಕಾಗಿ ಈ ಹೊಸ ಸಂಶೋಧನೆ ಮಾಡಲಾಗಿದ್ದು, ಇಲ್ಲಿ 500 ಡಾಲರ್ ಮೊತ್ತ ಗೆಲ್ಲುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ ಈ ಹುಡುಗಿ. ಸಂಶೋಧನೆ ನಡೆಯುತ್ತಿದ್ದು ಮುಂಬರುವ ದಿನಗಳಲ್ಲಿ ಇದು ಕೂಡ ಮಾರುಕಟ್ಟೆಯಲ್ಲಿ ಲಭ್ಯವಾಗಬಹುದು.