5 ರೂಪಾಯಿಗೆ ಆದ ಅವಮಾನ ಸಹಿಸಲಾಗದೆ 2000ರೂಪಾಯಿ ಸಾಲ ಪಡೆದು ಆರಂಭಿಸಿದ ಉದ್ಯಮ ಇಂದು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

469

ಜೀವನ ಹಾಗೆ ಜೀವನದಲ್ಲಿ ಏನು ಬೇಕಾದರೂ ಸಹಿಸ ಬಹುದು ಆದರೆ ಜೀವನದಲ್ಲಿ ಆಗುವ ಅವಮಾನ ಮಾತ್ರ ಎಂದಿಗೂ ಸಹಿಸಬಾರದು ಮತ್ತು ಆಗುವುದು ಇಲ್ಲ. ಅವಮಾನ ಎದುರಿಸಿದರೆ ಮಾತ್ರ ನಾವು ಸನ್ಮಾನದ ಎತ್ತರಕ್ಕೆ ಬೆಳೆಯುವುದು. ಇಲ್ಲವಾದರೆ ನಮ್ಮೊಳಗಿನ ಆ ಛಲ ಹಠ ಎಂಬುವುದು ಅಲ್ಲೇ ಇರುತ್ತದೆ. ಇವರ ಹೆಸರು ಸ್ವಾತಿ ಟೊಂಗೆ, ಸೋಲಾಪುರ ಊರಿನವರು. ಜೀವನದಲ್ಲಿ ಬರಿ ಕಷ್ಟಗಳನ್ನು ಕಂಡ ವ್ಯಕ್ತಿ, ಎಲ್ಲವನ್ನೂ ಬಿಟ್ಟು ಜೀವನ ಬೇಡ ಎಂದಾಗ ಆದ ಅವಮಾನಕ್ಕೆ ತೆಗೆದು ಕೊಂಡ ನಿರ್ಧಾರ ಅವರ ಜೀವನದ ದಿಕ್ಕನ್ನೇ ಬದಲಿಸಿ ಹಾಕಿತು.

ಇವರದು ದೊಡ್ಡ ಕುಟುಂಬ ಅದರಲ್ಲಿ 54 ಜನ ಇದ್ದರು. ಎಲ್ಲರ ಜೀವನ ನಡೆಸುವ ಬರದಲ್ಲಿ ವಿಧ್ಯಾಭ್ಯಾಸ ಮೊಟಕು ಗೊಳಿಸಿ ಆಕೆಗೆ ಮದುವೆ ಮಾಡಿಸಲಾಯಿತು.ಸಣ್ಣ ಪ್ರಾಯದ ಹುಡುಗಿ ಮಗು ಕೇವಲ 3 ತಿಂಗಳು ಇರುವಾಗ ಗಂಡ ತೀರಿಕೊಂಡ ಅಲ್ಲಿಂದ ಜೀವನಕ್ಕೆ ಆಧಾರ ಯಾರು ಇಲ್ಲ. ದೊಡ್ಡ ಮಗು 2 ವರ್ಷ ತನ್ನ ಮನೆಯಲ್ಲಿ ತಿಂಡಿ ತಿನ್ನಲು ಎಂದು 2ರೂಪಾಯಿ ಕೇಳಿದರೆ ಅದಕ್ಕೆ 5ರೂಪಾಯಿ ಅವಮಾನ ಮಾಡಿ ಕೊಡುತ್ತಿದ್ದರು. ಇದರಿಂದ ಬೇಸತ್ತು ತಾನೆ ಏನಾದರು ಮಾಡಬೇಕು ಎಂದು ನಿರ್ಧರಿಸಿ ಸೆಲ್ಫ್ ಹೆಲ್ಪ್ ಗ್ರೂಪ್ ಸೇರಲು ನಿರ್ಧರಿಸಿದರು.

ಇಲ್ಲಿ ಅವರಿಗೆ ಕುಟುಂಬದಿಂದ ಕೂಡ ಬಹಿಷ್ಕಾರ ಹಾಕಲಾಯಿತು. ಕೊನೆಗೆ ತಮ್ಮದೇ ಸೂರು ಕಟ್ಟಿಕೊಂಡು ಬದುಕಲು ಶುರು ಮಾಡಿದರು. ಆರಂಭದಲ್ಲಿ ಕಷ್ಟ ಅನುಭವಿಸಿದರು ಕೊನೆಗೆ ಸುಖ ಬಂತು. ಇವರ ಮಾತನಾಡುವ ಶೈಲಿ ನೋಡಿ ಇವರನ್ನು ಮಾರ್ಕೆಟಿಂಗ್ ವಿಭಾಗಕ್ಕೆ ಹಾಕಿದರು ಅಲ್ಲಿ ಕೂಡ ಯಶಸ್ಸು ಕಂಡರು. ಹಾಗೆ ಮುಂದಕ್ಕೆ ಮುಂಬೈ ಮಹಾರಾಷ್ಟ್ರ ದಂತಹ ನಗರಕ್ಕೆ ತೆರಳಿ ಅಲ್ಲಿ ಸೇಲ್ಸ್ ನಲ್ಲಿ ಬಹಳ ಸಾಧನೆ ಮಾಡಿದರು ಅದೆಷ್ಟೋ ರೂಪಾಯಿ ಲಾಭ ಮಾಡಿದರು.

ಕೊನೆಗೆ ಊರಿಗೆ ಬಂದು ಅವರದೇ ಮೇಡಂ ಬಳಿ ಎರಡು ಸಾವಿರ ಸಾಲ ಪಡೆದು ಉದ್ಯಮ ಆರಂಭಿಸಿದರು ಮೊದಲಿಗೆ ಹಪ್ಪಳದ ಉದ್ಯಮ ಶುರು ಮಾಡಿದರು ಆದರೆ ಜನರು ನಾನ್ ವೆಜ್ ಕಡೆ ಹೆಚ್ಚು ಒಲವು ಇದೆ ಎಂದು ತಿಳಿದು ಕೊಲಾಪುರ್ ಚಿಕನ್ ಮತ್ತು ಇತರ ವಸ್ತುಗಳನ್ನು ಉತ್ತರು ಇದು ಉತ್ತಮವಾಗಿ ನಡೆಯಿತು. ಅದೆಷ್ಟೋ ಲಕ್ಷ ಲಾಭ ಬರಲು ಆರಂಭವಾಯಿತು.

Leave A Reply

Your email address will not be published.