ಬಿಸಿನೆಸ್ ಗೆ 50 ಲಕ್ಷ ಸಾಲ ಮಾಡಿದ ಹಣ ದರೋಡೆಗೊಂಡ ನಂತರ ಎದೆಗುಂದದೆ ಕೇವಲ 100 ರೂಪಾಯಿಗಳಲ್ಲಿ ಸ್ವಂತ ಬ್ರಾಂಡ್ ನಿರ್ಮಿಸಿದ ಈ ಮಹಿಳೆ.
ತಮಿಳು ನಾಡು ಮೂಲದ ೪೦ ವರ್ಷದ ಎಳವರಸಿ ಜಯಲಕ್ಷ್ಮಿ ಅವರ ಕುಟುಂಬ ೪೫ ವರ್ಷಗಳ ಹಿಂದೆ ಕೇರಳದ ತ್ರಿಶೂಲ್ ಜಿಲ್ಲೆಯೇ ತೆರಳಿ ಅಲ್ಲೇ ವಾಸ ಮಾಡಲು ಶುರು ಮಾಡಿದರು. ತನ್ನ ಹೆತ್ತವರು ಮತ್ತು ಅಜ್ಜಿಯೊಂದುಗೆ ಜೀವನ ನಡೆಸುತಿದ್ದರು ಎಳವರಸಿ. ಇವರ ಜೀವನೋಪಾಯಕ್ಕಾಗಿ ತಿಂಡಿಗಳು ಹಾಗು ಸಿಹಿತಿಂಡಿಗಳನ್ನು ಮಾಡಿ ಮಾರಾಟ ಮಾಡುತಿದ್ದರು. ತಾನು ಕೂಡ ಈ ತಿಂಡಿ ತಿನಿಸುಗಳನ್ನು ಮಾಡಿ ಮಾರಾಟ ಮಾಡುವುದನ್ನು ಮುಂದುವರೆಸಬೇಕೆಂದು ತೀರ್ಮಾನಿಸಿದರು. ಮೊದಲು ಮೊದಲು ಮನೆ ಮನೆಗೆ ಹೋಗಿ ಮಾರಾಟ ಮಾಡುತಿದ್ದರು.
ತನ್ನ ಮಾಡುವೆ ಅದ ನಂತರದಲ್ಲಿ ತನ್ನ ಮನೆಯವರೊಡನೆ ತನ್ನ ಆಲೋಚನೆಯನ್ನು ಚರ್ಚಿಸಿ ತಾನು ನಡೆಸುತ್ತಿದ್ದ ತಿಂಡಿಗಳ ವ್ಯಾಪಾರವನ್ನು ಸ್ವಲ್ಪ ದೊಡ್ಡ ಮಟ್ಟಿಗೆ ವಿಸ್ತರಿಸುವ ಬಗ್ಗೆ ಹಂಚಿಕೊಂಡಿದ್ದರು. ಇದಕ್ಕಾಗಲಿ ತಮ್ಮ ಮನೆಯವರ ಉಳಿತಾಯ ಹಾಗು ಸಾಲ ಮೂಲ ಮಾಡಿ ಸುಮಾರು ೫೦ ಲಕ್ಷ ಬಂಡವಾಳ ಹಾಕಿ ಒಂದು ಸೂಪರ್ ಮಾರ್ಟ್ ತರಹ ತೆರೆದು ಉದ್ಯಮಿಯಾಗಿ ಬದಲಾದರು. ದಿನದಿಂದ ದಿನಕ್ಕೆ ವ್ಯಾಪಾರ ವೃದ್ಧಿ ಆಗುತ್ತಾ ಹೋಯಿತು ಅಲ್ಲದೆ ಸುಮಾರು ೫೦ ಜನರಿಗೆ ಉದ್ಯೋಗ ಕೂಡ ನೀಡಿದ್ದರು ಎಳೆಯರಸಿ.
ಆದರೆ ವ್ಯಾಪಾರ ಉತ್ತಮವಾಗಿ ಹೋಗುತ್ತಿರುವಾಗಲೇ ತನ್ನ ಸೂಪರ್ ಮಾರ್ಟ್ ದರೋಡೆ ಗೊಂಡಿತು ಹಾಗು ಎಳೆಯರಸಿ ಜಯಲಕ್ಷ್ಮಿ ದೈಹಿಕವಾಗಿ ಹಾಗು ಮಾನಸಿಕವಾಗಿ ತುಂಬಾ ಕುಸಿದರು. ಇದರ ಪರಿಣಾಮ ತಿಂಗಳುಗಟ್ಲೆ ಅವರು ಆಸ್ಪತ್ರೆಯಲ್ಲೇ ಇದ್ದರು. ಭಯದಿಂದ ಜೀವನ ಕೂಡ ಸಾಗಿಸಲು ಸಾಧ್ಯವಾಗಲಿಲ್ಲ ಅದೇ ಸಮಯದಲ್ಲಿ ತಾನು ವ್ಯಾಪಾರ ನಡೆಸಲು ತನ್ನ ಕುಟುಂಬದವರಿಂದ ಮಾತ್ರವಲ್ಲದೆ ಬೇರೆ ಜನರಿಂದ ಕೂಡ ಸಾಲ ಪಡೆದಿದ್ದೇನೆ ಈಗ ತಾನು ಏನು ಮಾಡದಿದ್ದರೆ ನನ್ನ ಮನೆಯವರು ಅಲ್ಲದೆ ತಾನು ಸಾಲ ಪಡೆದ ಜನರು ಕೂಡ ನಷ್ಟ ಅನುಭವಿಸುತ್ತಾರೆ ಎಂದು ಅರಿವಾಯಿತು.
ದೃತಿಗೆಡದೆ ಎಳೆಯರಸಿ ಕೇವಲ ೧೦೦ ರೂಪಾಯಿ ಬಂಡವಾಳದಲ್ಲಿ ೨೦೧೨ ರಲ್ಲಿ ತನ್ನದೇ ಒಂದು ಸ್ವಂತ ಬ್ರಾಂಡ್ ಅನ್ನು ಪ್ರಾರಂಭಿಸಿದರು ಇದಕ್ಕೆ ಅವಸ್ಥಿ ಹಾಟ್ ಚಿಪ್ಸ್ ಎನ್ನುವ ಹೆಸರಿಟ್ಟರು. ಇದನ್ನು ತ್ರಿಶೂರ್ ರೈಲ್ವೆ ಸ್ಟೇಷನ್ ಬಳಿ ಮೊದಲಿಗೆ ಪ್ರಾರಂಭ ಮಾಡಿದರು. ರೈಲ್ ಅಲ್ಲಿ ಪ್ರಯಾಣಿಸುವ ಗ್ರಾಹಕರಿಗೆ ಸಣ್ಣ ಮಟ್ಟದಲ್ಲಿ ಸ್ನಾಕ್ಸ್ ಗಳನ್ನೂ ಪೂರೈಕೆ ಮಾಡುವುದು ಇವರ ಉದ್ದೇಶವಾಗಿತ್ತು ಹಾಗೆ ಜನರಿಗೆ ಯಾವರೀತಿಯ ತಿಂಡಿ ಇಷ್ಟ ಎನ್ನುವುದು ಕೂಡ ಗೊತ್ತಿತ್ತು. ಇವರ ಈ ಹೊಸ ಪ್ರಯತ್ನ ಇವರಿಗೆ ಅದೃಷ್ಟ ಕುಲಾಯಿಸಿತು.
ಜಯಲಕ್ಷ್ಮಿ ಅವರ ಪ್ರಕಾರ ” ನನ್ನ ಹಿನ್ನಡೆ ಗಳಿಂದ ನಾನು ಹಲವಾರು ಪಾಠ ಕಲಿತಿದ್ದೇನೆ, ನಿಮನ್ನು ಕೆಳಗೆ ಇಳಿಸ ಬಯಸುವವರು ನಿಮ್ಮ ಕೆಳಗಿದ್ದಾರೆ. ನೀವು ಯಾರು, ನಿಮ್ಮ ಜೀವನವನ್ನು ಹೇಗೆ ನಡೆಸಬಯಸುತ್ತೀರಾ ಎನ್ನುವುದನ್ನು ನೀವೇ ನಿರ್ಧಾರ ಮಾಡಬೇಕು. ನಾನು ಬೆಳೆಯಲು ಬಯಸಿದೆ ಹಾಗಾಗಿ ನಾನು ನನ್ನನ್ನು ಪ್ರೇರೇಪಿಸಿದೆ ಹಾಗು ಶ್ರಮ ಪಟ್ಟೆ. ಇಂದು ನಾನು ೬ ಕಡೆ ನನ್ನ ಶಾಪ್ ಹಾಕಿದ್ದೇನೆ ಹಾಗೆ ಸಿಹಿ ಕಾರದಂತಹ ೬೦ ಬಗೆಯ ಉತ್ಪನ್ನ ತಯಾರು ಮಾಡುತಿದ್ದೇನೆ. ಇಂದು ನಾನು ತಿಂಗಳಿಗೆ ೫ ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಿದ್ದೇನೆ” ಎಂದು ಜಯಲಕ್ಷ್ಮಿ ಹೇಳಿಕೊಂಡಿದ್ದಾರೆ.