55 ವರ್ಷದ ಮಹಿಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಹಿನ್ನಲೆಯಲ್ಲಿ ಈ ವಿಡಿಯೋ ಜನರನ್ನು ಭಾವುಕರನ್ನಾಗಿಸಿದೆ. ಈ ತಾಯಿ ಹಣ ಸಂಪಾದಿಸಲು ಮತ್ತು ಜೀವನವನ್ನು ಪೂರೈಸಲು ರಾತ್ರಿಯಲ್ಲಿ ಹೇಗೆ ಆಟೋ ಓಡಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.ತಡರಾತ್ರಿಯಲ್ಲಿ ಕೆಲಸ ಮಾಡುವಾಗ ಇರುವ ಸವಾಲುಗಳ ಹೊರತಾಗಿಯೂ, ಅವರು ತನಾಗಾಗಿ ತಾನು ಸ್ವತಂತ್ರ ಬದುಕು ಕಟ್ಟಿಕೊಂಡ ಬಗ್ಗೆ ಹೆಮ್ಮೆ ಪಡುತ್ತಾರೆ. ತನ್ನ ಮಗನ ತನ್ನನ್ನು ನೋಡಿಕೊಳ್ಳುವುದಿಲ್ಲ ಮತ್ತು ತನ್ನ ಗಂಡ ಕೂಡ ಬೇಗನೆ ಮರಣ ಹೊಂದಿದ್ದು ತನಗೆ ತಾನೇ ಎಂದು ಹೇಳುತ್ತಾ ಭಾವುಕರಾದರು.
ತನ್ನ ಮಗ ಸಂಪಾದನೆ ಮಾಡುವುದಿಲ್ಲ ಮತ್ತು ತನ್ನಲ್ಲೇ ಹಣವನ್ನು ಸುಳಿಗೆ ಮಾಡುತ್ತಾನೆ. ಹಣ ನೀಡಲು ನಿರಾಕರಿಸಿದಾಗ ತನ್ನೊಂದಿಗೆ ಜಗಳವಾಡುತ್ತಾನೆ ಎಂದು ಅವರು ಬಹಿರಂಗವಾಗಿ ತಮ್ಮ ದುಃಖವನ್ನು ಹೇಳಿಕೊಂಡರು , “ನನ್ನ ಮಗು ನನ್ನನ್ನು ಗೌರವಿಸುವುದಿಲ್ಲ; ನಾನು ಇನ್ನೇನು ಹೇಳಲಿ? ಬಹುಶಃ ನನ್ನ ಪಾಲನೆ ಪೋಷಣೆಯಲ್ಲಿ ಏನಾದರೂ ಕೊರತೆಯಿದೆ.” ಎಂದು ಅವರು ತಮ್ಮನ್ನು ತಾವೇ ದೂರಿಕೊಂಡು ಅತ್ತರು.
ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಾ ಇದ್ದರೂ ಅವರು ಸಕಾರಾತ್ಮಕ ಯೋಚನೆಗಳು ಎಲ್ಲರನ್ನೂ ಅಚ್ಚರಿ ಮೂಡಿಸುತ್ತದೆ. ಅವರು ಹೇಳುವ ಪ್ರಕಾರ ಯಾವುದೇ ಕೆಲಸ ಆಗಲಿ ಕೆಲಸ ಮಾಡಿ ದುಡಿದು ತಿನ್ನುವುದರಲ್ಲಿ ಅವಮಾನವಿಲ್ಲ; ಭಿಕ್ಷೆ ಬೇಡುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳುತ್ತಾರೆLink: https://www.instagram.com/reel/C8HutEyv4W_/?igsh=MXI5NzNiYTMzcm9uMw==