80% ದಿವ್ಯಾಂಗ ಹೊಂದಿರುವ ಈ ಮಹಿಳೆ ತನ್ನ ಜೀವನ ಸಾಗಿಸಲು ಯಾರನ್ನು ಅವಲಂಭಿಸಿಲ್ಲ ಬದಲಾಗಿ ತಾವೇ ಸ್ವಂತ ಉದ್ಯೋಗ ಮಾಡಿ ಮಾದರಿ ಆಗಿದ್ದಾರೆ?
ಅಂಗ ನ್ಯೂನತೆ ಎಂಬುವುದು ಮನಸಿಗೆ ಹೊರತು ದೇಹಕ್ಕಲ್ಲ ಎಂಬ ಮಾತೊಂದಿದೆ. ಅದೆಷ್ಟೋ ಜನ ದೇಹಕ್ಕೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೆಲಸಕ್ಕೆ ಹೋಗುವುದನ್ನೇ ಬಿಟ್ಟು ಮನೆಯಲ್ಲೇ ಕೂರುತ್ತಾರೆ. ಆದರೆ ಬದುಕ ಬೇಕೆಂಬ ಛಲ ತೊಟ್ಟು ಬದುಕುವುದಿಲ್ಲ ಬದಲಾಗಿ ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡುತ್ತಾರೆ. ಆದರೆ ನಾವು ಇಂದು ತಿಳಿಯಲು ಹೊರಟ ಈ ಮಹಿಳೆ ಇದಕ್ಕೆಲ್ಲ ತದ್ವಿರುದ್ದ. ದೇಹದ 80% ಭಾಗ ನ್ಯೂನತೆ ಹೊಂದಿದ್ದರು ಯಾರ ಹತ್ತಿರವೂ ಬೇಡಲಿಲ್ಲ, ಸರ್ಕಾರದ ನೆರವಿನ ಆದರೆ ಪಡೆಯಲಿಲ್ಲ ಬದಲಾಗಿ ತಾವೇ ತಮ್ಮ ಜೀವನ ರೂಪಿಸಿಕೊಳ್ಳುವಮೂಲಕ ಮಾದರಿ ಆಗಿದ್ದಾರೆ.
ಇವರು ಮೂಲತಃ ಗುಜರಾತಿನ ಮಹಿಳೆ , ಹೆಸರು ಚೇತನಾ ಬೇನ್ ಪಟೇಲ್. ಬಾಲ್ಯದಿಂದಲೇ ಪೋಲಿಯೋ ಕಾಯಿಲೆಗೆ ತುತ್ತಾಗಿ ತಮ್ಮ ದೇಹದ 80% ಭಾಗದಲ್ಲಿ ನ್ಯೂನ್ಯತೆ ಹೊಂದಿದ್ದಾರೆ. ಆದರೂ ಬದುಕುವ ಚಲ ಜೀವನದಲ್ಲಿ ಏನೋ ಮಾಡಬೇಕು ಎನ್ನುವ ಹಠ ಅವರನ್ನು ಇಂದು ಈ ಸ್ಥಾನದಲ್ಲಿ ಕೂರಿಸಿದೆ. ಜೀವನ ರೂಪಿಸಲು ವಿಧ್ಯಾಭ್ಯಾಸ ಮುಖ್ಯ ಎಂದು ಅರಿತಿದ್ದ ಇವರು ಬಹಳ ಕಷ್ಟ ಪಟ್ಟು ನಡೆದೇ 8 ನೆಯ ತರಗತಿ ವರೆಗೂ ಹೋದರು. ಆ ಸಮಯದಲ್ಲಿ ಅವರಿಗೆ ಮೂರು ಚಕ್ರದ ಸೈಕಲ್ ಒಂದು ಸಿಕ್ಕಿತು. ಇದರಿಂದಾಗಿ MA ತನಕದ ವಿಧ್ಯಾಭ್ಯಾಸ ಸುಸೂತ್ರವಾಗಿ ಸಾಗಿತು. ಆದರೆ ಕೆಲಸದ ಸಮಯ ಬಂದಾಗ ಇವರ ದೇಹ ನ್ಯೂನತೆ ಕಂಡು ಯಾರು ಕೆಲಸ ಕೊಡಲಿಲ್ಲ. ಇದರಿಂದ ಅವ್ರು ಧೃತಿ ಕೆಡಲಿಲ್ಲ, NGO ಮುಖಾಂತರ ಕಂಪ್ಯೂಟರ್ ತರಭೇತಿ ಪಡೆದು, ಅಲ್ಲಿಯೇ ಕಂಪ್ಯೂಟರ್ ಆಪರೇಟರ್ ನೌಕರಿ ಪಡೆಯುವಲ್ಲಿ ಯಶಸ್ವಿ ಆದರು.
ಆದರೆ ಜೀವನದಲ್ಲಿ ತಿರುವುಗಳು ಬಂದೆ ಬರುತ್ತದೆ ನೋಡಿ ಕಾರಣಂತರದಿಂದ ಅವರು ಇದ್ದ ಸ್ಥಳ ಬದಲಿಸಬೇಕಾಗಿ ಬಂತು. ಆ ಸಮಯಕ್ಕೆ ಅವರು ತಮ್ಮ ಕೆಲಸ ಕೂಡ ಕಳೆದು ಕೊಂಡರು. ಮತ್ತೆ ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಸಿಗಲಿಲ್ಲ. ಅದೇ ಸಮಯಕ್ಕೆ ಲಾಕ್ ಡೌನ್ ಕೂಡ ಆಗಿ ಹೋಯಿತು. ಆದರೆ ಬದುಕುವ ಚಲ ಮತ್ತು ಹಠಕ್ಕೆ ದೇವರು ಕೂಡ ಇವರ ಕೈ ಬಿಡಲಿಲ್ಲ. ಇವರು ಆ ಸಮಯದಲ್ಲಿ ಮನೆಯಲ್ಲಿ ಆದ ಮಾವಿನ ಕಾಯಿಯಿಂದ 2 ಕೆಜಿ ತನಕ ಉಪ್ಪಿನಕಾಯಿ ತಯಾರಿಸಿ ಸುತ್ತ ಮುತ್ತಲಿನ ಹಳ್ಳಿಗಳಿಗೆ ಉಚಿತವಾಗಿ ನೀಡಿದರು.
ಆದರೆ ಇವರ ಕೈ ರುಚಿ ಎಷ್ಟಿತ್ತೆಂದರೆ ಮತ್ತೆ ಅದೇ ಗ್ರಾಹಕರು ಕರೆ ಮಾಡಿ ಆರ್ಡರ್ ನೀಡಲು ಆರಂಭಿಸಿದರು. ಇದು ಹೀಗೆ ಮುಂದುವರೆದು ಉಪ್ಪಿನಕಾಯಿ ತಯಾರಿ ಮಾಡಿ ಮಾಡುವುದೇ ಇವರ ಕಾಯಕ ಆಗಿ ಹೋಯಿತು. ಇದೀಗ ಒಳ್ಳೆಯ ರೀತಿಯಲ್ಲಿ ವಹಿವಾಟು ನಡೆಯುತ್ತಿದ್ದು ಉತ್ತಮ ಲಾಭ ಪಡೆಯುತ್ತಿರುವುದಾಗಿ ಅವರು ಹೇಳುತ್ತಾರೆ. ಅದೇನೇ ಆಗಿ ಜೀವನದಲ್ಲಿ ಎಂದಿಗೂ ಸೋಲೊಪ್ಪಿಕೊಳ್ಳದೆ ಬಂದ ಕಷ್ಟಗಳ ಎದುರಿಸಿ ಬದುಕಿದರೆ ಇವರ ತರ ಮಾದರಿ ವ್ಯಕ್ತಿಗಳಾಗಿ ಬದುಕಬಹುದು.