ಕೋರೋನಾ ನಂತರ ಜಗತ್ತಿಗೆ ಚೀನಾ ಕೊಡ ಹೊರಟಿರುವ ಮತ್ತೊಂದು ಶಾಕ್ ಯಾವುದು ಗೊತ್ತಾ??

332

ನಮಸ್ಕಾರ ಸ್ನೇಹಿತರೇ ಕೋರೋನಾ ಎಂಬುದು ಜಗತ್ತಿನ ಹಲವು ರಾಷ್ಟ್ರಗಳಿಗೆ ವೀಪರೀತ ತಲೆನೋವಾಗಿ ಪರಿಣಮಿಸಿದೆ. ಕೋರೋನಾ ಕಾರಣ ಹಲವಾರು ದೇಶಗಳು ಆರ್ಥಿಕತೆ, ನಿರುದ್ಯೋಗ, ಹಣದುಬ್ಬರ , ಆರೋಗ್ಯ ಮುಂತಾದ ಸಂಭಂದಿತ ಕಾರಣದಿಂದ ದಿನೇ ದಿನೇ ಅದರ ಭೀಕರ ಪರಿಣಾಮ ಎದುರಿಸುತ್ತಿವೆ. ಅಮೇರಿಕಾದ ಅಧ್ಯಕ್ಷರು ಕಳೆದ ಭಾರಿ ಕೋರೋನಾವನ್ನ ಚೀನಿ ವೈರಸ್ ಎಂದು ಕರೆದಿದ್ದು ಬಹಳಷ್ಟು ಸಂಚಲನ ಮೂಡಿಸಿತ್ತು. ಚೀನಾ ದೇಶದ ವಿದೇಶಾಂಗ ಸಿಬ್ಬಂದಿಗಳು ಆ ಪದ ಪ್ರಯೋಗವನ್ನ ದಯವಿಟ್ಟು ಬಳಸಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದನ್ನ ನಾವುಗಳು ಸ್ಮರಿಸಬಹುದು.

ಚೀನಾದ ವುಹಾನ್ ನ ಲ್ಯಾಬ್ ನಲ್ಲಿ ಹುಟ್ಟಿಕೊಂಡು, ಜಗತ್ತಿನಾದ್ಯಂತ ಪಸರಿಸಿತ್ತು. ಅಂತಹ ಚೀನಾ ಈಗ ಮತ್ತೊಂದು ಪ್ರಯೋಗದ ಮೂಲಕ ಜಗತ್ತಿಗೆ ಬಿಗ್ ಶಾಕ್ ನೀಡಲು ಮುಂದಾಗಿದೆ. ಸೂರ್ಯ ಅಗಾಧ ಶಕ್ತಿಗಳ ಆಕರ. ಸದ್ಯ ಪ್ರಪಂಚದಲ್ಲಿ ಮುಗಿದು ಹೋಗದಿರುವ ಏಕೈಕ ಸಂಪನ್ಮೂಲವೆಂದರೇ ಅದು ಸೌರಶಕ್ತಿ. ಹಾಗಾಗಿ ಅದನ್ನ ಹೆಚ್ಚು ಬಳಸಿಕೊಳ್ಳಿ ಎಂದು ಅಭಿಯಾನಗಳು ಸಹ ನಡೆಯುತ್ತಿರುತ್ತಿವೆ. ಈಗ ಅಂತಹ ಸೂರ್ಯನಿಗೆ ಸೆಡ್ಡು ಹೊಡೆಯಲು ಚೀನಾ ಮುಂದಾಗಿದೆ. ಹೌದು ಚೀನಾ ಅಗಾಧ ಶಕ್ತಿಗಳ ಮೂಲವಾದ ಒಂದು ಕೃತಕ ಸೂರ್ಯನನ್ನ ಸೃಷ್ಠಿಸಲು ಮುಂದಾಗಿರುವ ವಿಷಯ ಈಗ ಹೊರಬಿದ್ದಿದೆ.

ಈ ಕೃತಕ ಸೂರ್ಯ, ಈಗಿರುವ ಸೂರ್ಯನಿಗಿಂತಲೂ ಎಂಟು ಪಟ್ಟು ಅಧಿಕ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆಯಂತೆ. ನಿಸರ್ಗದಲ್ಲಿ ಸುಲಭವಾಗಿ ಸಿಗುವ ಹೈಡ್ರೋಜನ್ ನ್ಯೂಕ್ಲಿಯಸ್ ಮತ್ತು ನ್ಯೂಕ್ಲಿಯರ್ ಗಳ ಆಗರದಿಂದ 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದುವರೆಗೂ ಕೃತಕ ಸೂರ್ಯನ ವಿನ್ಯಾಸ,ಸಂಶೋಧನೆ, ಚಲನೆ, ಕಾಯ, ನೀಲ ನಕ್ಷೆ ಪೂರ್ಣಗೊಂಡಿದ್ದು, ಇದು ಸಂಪೂರ್ಣ ಅಭಿವೃದ್ಧಿ ಹೊಂದಿ ಕೆಲಸ ಮಾಡಲು ಇನ್ನು ಒಂದು ದಶಕ ಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದರೆ. ಒಂದು ವೇಳೆ ಚೀನಾ ಈ ಪ್ರಯೋಗದಲ್ಲಿ ಯಶಸ್ವಿಯಾದರೇ, ಹಸಿರು ಇಂಧನದಲ್ಲಿ ಸ್ವಾಯುತ್ತತೆ ಪಡೆಯುವ ಮೂಲಕ ಜಗತ್ತಿನ ಮತ್ತಷ್ಟು ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚೀನಾ ದೇಶದ ಈ ಪ್ರಯತ್ನದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.