ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕೇಸರಿಯನ್ನು ಪುಣೆಯಲ್ಲಿ ಬೆಳೆದು ಲಕ್ಷಾಂತರ ಹಣ ಗಳಿಸಿಕೊಂಡ ಸಾಫ್ಟ್ವೇರ್ ಇಂಜಿನಿಯರ್.
ಭಾರತ ಕೃಷಿ ಪ್ರದಾನ ರಾಷ್ಟ್ರ ಇಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕುವ ಲಕ್ಷಾಂತರ ಕುಟುಂಬಗಳು ಇವೆ. ಇಲ್ಲಿ ಕೃಷಿಯೇ ದೈನಂದಿನ ಜೀವನ ಎಂದು ರೂಢಿಯಾಗಿ ಬದುಕಿದ ಕುಟುಂಬಗಳು ಹೆಚ್ಚು. ಭಾರತದ ಆರ್ಥಿಕತೆಗೆ ಕೃಷಿಯ ಕೊಡುಗೆ ಮಹತ್ತರ ಸ್ಥಾನ ಇದೆ. ಭಾರತದ ಆರ್ಥಿಕತೆ ಭದ್ರವಾಗಿದೆ ಎಂದರೆ ಅದಕ್ಕೆ ಕಾರಣ ಕೂಡ ಕೃಷಿ ಎಂದು ಹೇಳಬಹುದು. ಕೃಷಿಯಲ್ಲಿ ಅತೀ ಹೆಚ್ಚು ಬೆಲೆಬಾಳುವ ಬೆಳೆಗಳಲ್ಲಿ ಕೆಸರಿಂಕುದ ಒಂದು. ಇದು ಪ್ರತಿ ಕೆಜಿ ಗೆ 4-5 ಲಕ್ಷ ರೂಪಾಯಿ ಇದೆ. ಹೌದು ಅಚ್ಚರಿ ಎನಿಸಿದರೂ ಸತ್ಯ ಸಂಗತಿ ಇದು.
ಇನ್ನು ಕೇಸರಿಯ ವಿಚಾರಕ್ಕೆ ಬಂದರೆ ಕೇಸರಿ ಬೆಳೆ ಬೆಳೆಯುವ ಏಕ ರಾಜ್ಯ ಕಾಶ್ಮೀರ ಮಾತ್ರ. ಅಲ್ಲಿನ ಹವಾಮಾನಕ್ಕೆ ಮಾತ್ರ ಈ ಬೆಳೆಯನ್ನು ಬೆಳೆಯಬಹುದು. ಆದರೆ ಪುಣೆಯ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಪುಣೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಅದರಿಂದ ಲಾಭ ಕೂಡ ಪಡೆಯುತ್ತಿದ್ದಾರೆ. ಶೈಲೇಶ್ ಮೋದಕ್ ಎನ್ನುವವರು ವೃತ್ತಿಯನ್ನು ಬಿಟ್ಟು ಕೃಷಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇವರು ಏರೋಪೋನಿಕ್ ಟೆಕ್ನಾಲಜಿ ಬಳಸಿ ಕಾಶ್ಮೀರದ ಹವಾಮಾನದ ರೀತಿಯಲ್ಲಿ ಅನುಕರಣೆ ಮಾಡಿ ಇಲ್ಲಿ ಕೇಸರಿಯನ್ನು ಬೆಳೆಯುತ್ತಿದ್ದಾರೆ.
ಆರಂಭದಲ್ಲಿ 10 ಲಕ್ಷ ಬಂಡವಾಳ ಹೂಡಿ ಇದನ್ನು ಆರಂಭಿಸಿದ್ದರು. ಮೊದಲಿಗೆ ಸ್ಟ್ರಾಬೆರಿ ಬೆಳೆಯ ಮೇಲೆ ಇದರ ಪ್ರಯೋಗ ಮಾಡಿ ಯಶಸ್ಸು ಕಂಡು ಕೇಸರಿ ಬೆಳೆಯ ಮೇಲೂ ಮಾಡಿದಾಗ ಅದು ಕೂಡ ಅವರ ಕೈ ಹಿಡಿದಿದೆ. ಎಕರೆ ಗಟ್ಟಲೆ ಪ್ರದೇಶದಲ್ಲಿ ಬೆಳೆಯುವ ಕೇಸರಿ ಬೆಳೆಯನ್ನು ಇವರು 160 ಸ್ಕ್ವೇರ್ ಫೀಟ್ ಕಂಟೇನರ್ ಒಳಗಡೆ ಬೆಳೆಸುತ್ತಿದ್ದಾರೆ. ನಮ್ಮ ಈ ಪೋಸ್ಟ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಗೆಳೆಯರ ಬಳಿ ಹಂಚಿಕೊಳ್ಳಿ.