ಹಿಂದೂ ವಿ-ರೋಧಿ ಆರ್ಟಿಕಲ್ 30 ಮತ್ತು 30A ಮೇಲೆ ಮೋದಿ ಸರ್ಕಾರದ ಕಣ್ಣು! ಏನಿದು ನೆಹರು ಜಾರಿಗೆ ತಂದಿದ್ದ ಹಿಂದೂ ವಿ-ರೋಧಿ ನೀತಿ?

ಸಂವಿಧಾನ ಎಲ್ಲರೂ ಪಾಲನೆ ಮಾಡಬೇಕು ಮತ್ತು ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಕೊಡಬೇಕು ಎಂದು ಒಂದು ಕಡೆ ಹೇಳಿದರೆ ಇನ್ನೊಂದು ಕಡೆ ಸಂವಿಧಾನದ ಕೆಲವೊಂದು ತಿದ್ದು ಪಡಿಗಳು ಈ ಸಂವಿಧಾನವನ್ನೇ ಪ್ರಶ್ನೆ ಮಾಡುವಂತೆ ಮಾಡುತ್ತದೆ. ಇದಕ್ಕೆ ನೈಜ ಉದಾಹರಣೆ ಎಂದರೆ ಸಂವಿಧಾನದ ಆರ್ಟಿಕಲ್ 30 ಮತ್ತು 30A . ಬಹಳಷ್ಟು ವರ್ಷಗಳಿಂದ ಈ ಒಂದು ಆರ್ಟಿಕಲ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ಆದರೆ ನಾವು ಇಂದು ಜನರಿಗೆ ಸ್ವಲ್ಪ ಅರಿವು ಮೂಡಿಸಿ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ . ಇದನ್ನು ಹಿಂದೂ ವಿರೋಧಿ ನೀತಿ ಎಂದೇ ಬಣ್ಣಿಸಲಾಗುತ್ತದೆ. ಹಾಗದರೆ ಏನಿದೆ ಇದರಲ್ಲಿ ಅಂತಹ ಹಿಂದೂ ವಿರೋಧಿ ನೀತಿ ಎಂದು ತಿಳಿಯೋಣ.

ನೆಹರು ಅವರು ಈ ಒಂದು ತಿದ್ದುಪಡಿ ಬಗ್ಗೆ ಸರ್ದಾರ್ ಪಟೇಲರ ಮುಂದೆ ಇಟ್ಟಾಗ. ಅವರು ಇದಕ್ಕೆ ಕಡಾಖಂಡಿತವಾಗೆ ವಿರೋಧ ವ್ಯಕ್ತ ಪಡಿಸಿದರು. ಒಂದು ವೇಳೆ ಈ ತಿದ್ದುಪಡಿ ಮಾಡಿದರೆ ಅಸೆಂಬ್ಲಿ ಅಲ್ಲೇ ತಾನು ರಾಜೀನಾಮೆ ಕೊಟ್ಟು ಹೊರನಡೆಯುತ್ತೇನೆ ಎಂದು ಹೇಳಿದ್ದರು. ಆದರೆ ಇದಾದ ಸ್ವಲ್ಪ ಸಮಯದಲ್ಲೇ ಪಟೇಲರ ಅಕಾಲಿಕ ನಿಧನದಿಂದಾಗಿ ಕೊನೆಗೂ ನೆಹರು ಅವರು ಈ ತಿದ್ದುಪಡಿ ಮಾಡಿಯೇ ಬಿಟ್ಟರು. ಈ ಸಮಯದಲ್ಲಿ ಪಟೇಲರ ನಿಧನದ ಬಗ್ಗೆಯೂ ಗುಮಾನಿಗಳು ಹುಟ್ಟಲು ಆರಂಭಿಸಿದ್ದು ಸುಳ್ಳಲ್ಲ.

ಆರ್ಟಿಕಲ್ 30 ಪ್ರಕಾರ ಮು-ಸ್ಲಿಂ ಮತ್ತು ಕ್ರಿಶ್ಚಿ-ಯನ್ ಧರ್ಮದವರು ತಮ್ಮ ಧರ್ಮ ಶಿಕ್ಷಣವನ್ನು ಶಾಲೆಗಳಲ್ಲಿ ಬೋಧನೆ ಮಾಡಬಹುದು.ಮತ್ತು ಧರ್ಮ ಶಿಕ್ಷಣಕ್ಕಾಗಿ ಶಾಲೆ ಕಾಲೇಜು ಕೂಡ ತೆರೆಯಬಹುದು ಎಂದು ಇದು ಹೇಳುತ್ತದೆ. ಆದರೆ ಇನ್ನೊಂದೆಡೆ ಆರ್ಟಿಕಲ್ 30A ಪ್ರಕಾರ ಯಾವುದೇ ಶಾಲೆ ಕಾಲೇಜುಗಳಲ್ಲಿ ಹಿಂದೂ ಧರ್ಮದ ಶಿಕ್ಷಣ ಬೋಧನೆ ಮಾಡುವಂತೆ ಇಲ್ಲ. ಅದಲ್ಲದೆ ಹಿಂದೂ ಧರ್ಮ ಬೋಧನೆಗೆ ಯಾವುದೇ ರೀತಿಯ ಶಾಲೆ ಕಾಲೇಜು ತೆರೆಯುವಂತೆ ಇಲ್ಲ ಎಂಬ ತಿದ್ದುಪಡಿಯನ್ನು ಮಾಡಿದ್ದರು ಜವಹರ್ ಲಾಲ್ ನೆಹರು ಅವರು. ಒಂದೆಡೆ ಸಮಾನ ಹಕ್ಕು ಎನ್ನುತ್ತಾರೆ ಇನ್ನೊಂದೆಡೆ ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ತಿದ್ದುಪಡಿ ಮಾಡುತ್ತಾರೆ. ಇದೀಗ ಮೋದಿ ಅವರ ಕಣ್ಣು ಇದರ ಮೇಲಿದ್ದು ಈ ತಿದ್ದುಪಡಿಗಳು ಕೂಡ ಕೊನೆಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಾ ಇದೆ. ಮೋದಿ ಅವರ ಕಡೆಯ ಅವಧಿಯಲ್ಲಿ ಭಾರತ ನಿರೀಕ್ಷಸದ ಕೆಲವೊಂದು ಐತಿಹಾಸಿಕ ನಿರ್ಣಯಗಳು ಬರಲಿದೆ.

Anti hindu amendmentArticle 30Article 30AConstitution
Comments (0)
Add Comment