ವಿನೇಶ್ ಫೋಗಟ್ ಅವರು ‘ಪಿಟಿ ಉಷಾ ಪ್ಯಾರಿಸ್‌ನಲ್ಲಿ ರಾಜಕೀಯ ಮಾಡಿದ್ದಾರೆ’ ಹೇಳಿಕೆಯ ನಂತರ, ಕುಸ್ತಿಪಟು ‘ಪ್ರಕರಣನಲ್ಲಿ ಸಾಕಷ್ಟು ನಡೆದಿದೆ’ ಎಂದು ಸತ್ಯ ಸಂಗತಿ ಬಿಚ್ಚಿಟ್ಟ ಲಾಯರ್ ಹರೀಶ್ ಸಾಳ್ವೆ ! ವಿನೇಶ್ ಪೊಗಾಟ್ ವಿರುದ್ಧ ಜನಾಕ್ರೋಶ.

120

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ( Indian Olympic Association IOA)ಯಿಂದ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಆರೋಪಿಸಿ ವಿನೇಶ್ ಫೋಗಟ್ ಅವರು ಐಒಎ ಅಧ್ಯಕ್ಷೆ ಪಿಟಿ ಉಷಾ ವಿರುದ್ಧ “ಪ್ಯಾರಿಸ್‌ನಲ್ಲಿ ರಾಜಕೀಯ ನಡೆದಿದೆ” ಎಂದು ಹೇಳುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ. (Court of Arbitrary for Sports)ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ನಲ್ಲಿ ಕುಸ್ತಿಪಟುಗಳ ವಿಚಾರಣೆಯ ಸಂದರ್ಭದಲ್ಲಿ ಐಒಎಯನ್ನು ಪ್ರತಿನಿಧಿಸಿದ್ದ ಭಾರತದ ಉನ್ನತ ವಕೀಲರಲ್ಲಿ ಒಬ್ಬರಾದ ಹರೀಶ್ ಸಾಳ್ವೆ ಅವರು ವಿಷಯವನ್ನು ಮತ್ತಷ್ಟು ಎಳೆಯಲು ನಿರಾಕರಿಸಿದ್ದು ವಿನೇಶ್ ಹೊರತು ಕ್ರೀಡಾ ಸಂಸ್ಥೆ ಅಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಒಲಂಪಿಕ್ಸ್ ಕೋರ್ಟ್ ನಲ್ಲಿ ಸರಿಯಾದ ತೀರ್ಮಾನ ಆಗದೆ ಇದ್ದಾಗ ಸ್ವಿಸ್ ಕೋರ್ಟ್ ಗೆ ಹೋಗುವ ಎಲ್ಲಾ ಅವಕಾಶ ಇತ್ತು. ಮೇಲ್ಮನವಿ ಸಲ್ಲಿಸ ಬಹುದಿತ್ತು ಆದರೆ ವಿನೆಷ್ ಫೋಗಾಟ್ ಅವರು ಕಡಾಖಂಡಿತವಾಗಿ ನಿರಾಕರಣೆ ಮಾಡಿದ್ದರು. ಅವರ ವಕೀಲರು ಕೂಡ ಇದರ ಬಗ್ಗೆ ಅಷ್ಟೊಂದು ಆಸಕ್ತಿ ತೋರಲಿಲ್ಲ ಎಂದು ಹೇಳಿದ್ದಾರೆ.

ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಖಚಿತಗೊಂಡಿದ್ದರು. ಆದಾಗ್ಯೂ, 100 ಗ್ರಾಂ ಅಧಿಕ ತೂಕದ ಕಾರಣ ಅವರ ಪ್ರತಿ ಸ್ಪರ್ಧಿ ಪಂದ್ಯ ಆಡದೆ ಚಿನ್ನದ ಪದಕ ಗೆದ್ದರು. ಬೆಳಿಗ್ಗೆ ನಡೆದ ಟೆಸ್ಟ್ ನಲ್ಲಿ ಅನರ್ಹಗೊಂಡಳು. ನಂತರ ಅವರು ಕ್ರೀಡೆಯಿಂದ ನಿವೃತ್ತಿ ಘೋಷಿಸಿದರು ಮತ್ತು ಪ್ಯಾರಿಸ್‌ನಲ್ಲಿರುವ CAS ನ ತಾತ್ಕಾಲಿಕ ಸಂಸ್ಥೆಯಲ್ಲಿ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದರು. ಸುಮಾರು ಒಂದು ವಾರದವರೆಗೆ ಪ್ರಕರಣದ ವಿಚಾರಣೆಯ ನಂತರ ಸಿಎಎಸ್ ವಿನೇಶ್ ವಿರುದ್ಧ ತೀರ್ಪು ನೀಡಿತು. ಇದೆಲ್ಲ ರಾಜಕೀಯ ನಾಟಕ ಅಂತ ಈಗ ಜನರು ಹೇಳುತ್ತಾ ಇದ್ದು ತಮ್ಮ ವರ್ಚಸ್ಸು ಕಳಕೊಂಡಂತೆ ಆಗಿದ್ದಾರೆ. ಆದರೆ ಇದೆಲ್ಲ ಮಾಡಿದರೆ ಮಾತ್ರ ರಾಜಕೀಯದಲ್ಲಿ ಇರಲು ಸಾಧ್ಯ ಎಂದು ಇನ್ನೊಂದು ವಾದಗಳು ಕೇಳಿ ಬರುತ್ತಿದೆ.

Leave A Reply

Your email address will not be published.