Choo Mantar: ಬಹು ನಿರೀಕ್ಷಿತ ಚೂ ಮಂತರ್ ಸಿನಿಮಾ OTT ಯಲ್ಲಿ ಬಿಡುಗಡೆ. ಎಲ್ಲಿ ಹಾಗು ಹೇಗೆ ನೋಡುವುದು? ಇಲ್ಲಿದೆ ಮಾಹಿತಿ.
ಶರಣ್ ಹೃದಯ್ ಕನ್ನಡದ ಒಬ್ಬ ಪ್ರತಿಭಾವಂತ ನಟ. ಇವರು ಮೊದಲು ಹಾಸ್ಯ ನಟನಾಗಿ ಸಿನೆಮಾದಲ್ಲಿ ನಟನೆ ಮಾಡಿ ಇದೀಗ ಒಬ್ಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಅನೇಕ ಮೂವಿ ಗಳಲ್ಲಿ ಯಶಸ್ಸು ಪಡೆದಿದ್ದಾರೆ. ಇವರ ಇತ್ತೀಚಿನ ಹಾರರ್ ಕಾಮಿಡಿ ಸಿನೆಮಾ ಎರಡು ಭಾಗಗಳಲ್ಲಿ ಬಂದಿತ್ತು. ಅದೇ ಅವತಾರ ಪುರುಷ. ಇದಾದ ನಂತರ ಇದೀಗ ಚೂ ಮಂತರ್ (Choo Mantar) ಎನ್ನುವ ಹಾರರ್ ಸಿನೆಮಾ ಬಂದು ರಾಜ್ಯದಯಾಂತ ಹೆಚ್ಚಿನ ಸದ್ದು ಮಾಡಿತ್ತು.
Read this : OTT Platform: ಸಿನೆಮಾ ಕುರಿತು ಎತ್ತಿದ ಕಳವಳಕ್ಕೆ ಸರಕಾರ ಸಹಾಯಸ್ತ ಚಾಚಿದೆ. ಬರಲಿದೆ ಸರಕಾರಿ ಸ್ವಾಮ್ಯದ ಸ್ವಂತ OTT.
2024 ರಲ್ಲಿ ಬಿಡುಗಡೆ ಆಗಬೇಕಿದ್ದ ಸಿನೆಮಾ ಕಾರಣಾಂತರಗಳಿಂದ ಈ ವರ್ಷ ಜನವರಿಯಲ್ಲಿ ಸಂಕ್ರಾಂತಿಯಂದು ಬಿಡುಗಡೆ ಆಗಿತ್ತು.ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದು 50 ದಿನಗಳವರೆಗೆ ಥಿಯೇಟರ್ ನಲ್ಲಿ ಪ್ರದರ್ಶನಗೊಂಡಿವೆ. ಇದೀಗ ಚೂ ಮಂತರ್ (Choo Mantar) ಸಿನಿಮಾ OTT ಯಲ್ಲಿ ಯುಗಾದಿ ಯಂದು ಬಿಡುಗಡೆ ಗೊಂಡಿದೆ. ಈ ಸಿನೆಮಾದಲ್ಲಿ ಶರಣ್ ಎರಡು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಲ್ಲದೆ ಇವರಿಗೆ ಚಿಕ್ಕಣ್ಣ, ಅದಿತಿ ಪ್ರಭುದೇವ ಸಾತ್ ಕೊಟ್ಟಿದ್ದಾರೆ. ಈ ಸಿನೆಮಾ (Choo Mantar) ಮಾರ್ಚ್ 28 ನಡುರಾತ್ರಿ ಯಿಂದ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ಲಭ್ಯವಿದೆ. ಕೇವಲ ಕನ್ನಡ ಭಾಷೆಯಲ್ಲಿ ಇರುವ ಇದು ಇಂಗ್ಲಿಷ್ ಸಬ ಟೈಟಲ್ ನೊಂದಿಗೆ ವೀಕ್ಷಿಸಲು ಲಭ್ಯವಿದೆ. ಯುಗಾದಿಗೆ ಈ ಸಿನೆಮಾ ಎಲ್ಲರು ಮನೆಯಲ್ಲಿ ಕೂತು ನೋಡಬಹುದಾಗಿದೆ.