Baba Vanga Predictions: ಯುರೋಪ್ನಲ್ಲಿ ಇಸ್ಲಾಂ ಆಳ್ವಿಕೆ ನಡೆಸುತ್ತದೆ, ಏಲಿಯನ್ ಜೊತೆಗೂ ಸಂಪರ್ಕ ಸಾಧಿಸಲಿದ್ದಾರೆ ಮನುಷ್ಯರು ! ಏನಿದು ಸಂಪೂರ್ಣ ಲೇಖನವನ್ನು ಓದಿ!
ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಸದಾ ಸುದ್ದಿಯಲ್ಲಿ ಇರುತ್ತದೆ . ಬಲ್ಗೇರಿಯನ್ ಮೂಲದ ಈ ವ್ಯಕ್ತಿ 3 ಅಕ್ಟೋಬರ್ 1911 ರಂದು ಜನಿಸಿದರು. ಮತ್ತು, 11 ಆಗಸ್ಟ್ 1996 ರಂದು ದೈವಾದಿನರಾಗಿದ್ದರು, 84 ನೇ ವಯಸ್ಸಿನ ವರೆಗೆ ಬದುಕಿದ್ದ ಇವರು ಭವಿಷ್ಯದ ಬಗ್ಗೆ ಅವರು ಹೇಳಿರುವ ಭವಿಷ್ಯದ ವಿಷಯಗಳು ಪ್ರತಿ ಬಾರಿ ವೈರಲ್ ಆಗುತ್ತಿದೆ. ಬಾಬಾ ವೆಂಗಾ ಅವರು ತಮ್ಮ ಮರಣದ ಮೊದಲು 5079 ರ ವರೆಗೆ ಭವಿಷ್ಯ ನುಡಿದಿದ್ದಾರೆ. ಸೋವಿಯತ್ ಒಕ್ಕೂಟದ ವಿಘಟನೆ ಮತ್ತು ಅಮೆರಿಕದಲ್ಲಿ 9/11 ಭಯೋತ್ಪಾ-ದಕ ದಾಳಿ-ಯಂತಹ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ನಿಜವಾಗಿತ್ತು.
ಬಾಬಾ ವೆಂಗಾ ಅವರು ಹೇಳುವ ಪ್ರಕಾರ ಮಾನವೀಯತೆಯು ಭೂಮಿಯಲ್ಲಿ ಅಂತ್ಯವನ್ನು ಕಾಣುತ್ತದೆ. 2025ರಿಂದ ಜಗತ್ತಿನ ವಿನಾಶ ಆರಂಭವಾಗಲಿದೆ.ಇದೇ ವೇಳೆಗೆ 5074ರಲ್ಲಿ ಭೂಮಿಯಲ್ಲಿ ಮಾನವೀಯತೆ ಸಂಪೂರ್ಣ ನಾಶವಾಗಲಿದೆ.ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ ಮುಂದಿನ ವರ್ಷ ಯುರೋಪ್ ನಲ್ಲಿ ದೊಡ್ಡ ಸಂಘರ್ಷ ಆಗಲಿದೆ, ಭೀಕರ ಹೃದಯ ವಿದ್ರಾವಕ ಘಟನೆಗಳು ನಡೆಯಲಿವೆ ಎಂದರು. ಇದು ದೊಡ್ಡ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ.ಇವರ ಪ್ರಕಾರ, 3797 ರ ಹೊತ್ತಿಗೆ ಭೂಮಿಯ ಮೇಲಿನ ಜೀವನವು ಅಸಾಧ್ಯವಾಗುತ್ತದೆ, ಈ ಕಾರಣದಿಂದಾಗಿ ಮಾನವರು ಇತರ ಗ್ರಹಗಳಲ್ಲಿ ವಾಸಿಸಲು ಬಲವಂತವಾಗಿ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಭೂಮಿಯ ಮೇಲಿನ ಜೀವನವು 5079 ರಲ್ಲಿ ಕೊನೆಗೊಳ್ಳುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಹವಾಮಾನ ಬದಲಾವಣೆಯು 2033 ರಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದಾರೆ. ಪೋಲಾರ್ ಮಂಜುಗಡ್ಡೆಗಳು ಕರಗುವುದರಿಂದ ಸಮುದ್ರ ಮಟ್ಟವು ಗಣನೀಯವಾಗಿ ಏರುತ್ತದೆ. 2043 ರಲ್ಲಿ, ಯುರೋಪ್ನಲ್ಲಿ ಮುಸ್ಲಿಂ ಆಳ್ವಿಕೆ ಮತ್ತು ಭೌಗೋಳಿಕ ರಾಜಕೀಯ ಬದಲಾವಣೆಗಳು ಇರುತ್ತದೆ. ಬಾಬಾ ವೆಂಗಾ ಪ್ರಕಾರ, 2076 ರಲ್ಲಿ ಪ್ರಪಂಚದಾದ್ಯಂತ ಕಮ್ಯುನಿಸ್ಟ್ ಆಳ್ವಿಕೆ ಇರುತ್ತದೆ. 2130 ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ. ವೆಂಗಾ 2170 ರಲ್ಲಿ ಜಾಗತಿಕ ಬರಗಾಲ ಬರುತ್ತದೆ ಎಂದು ಹೇಳಿದ್ದಾರೆ. ಇದು ಹವಾಮಾನ ಬದಲಾವಣೆಯ ಪರಿಣಾಮವನ್ನು ಹೆಚ್ಚಿಸುತ್ತದೆ. 3035 ರಲ್ಲಿ ಭೂಮಿ ಮತ್ತು ಮಂಗಳ ಗ್ರಹಗಳ ನಡುವೆ ಯು-ದ್ಧ ನಡೆಯಲಿದೆ ಎಂದು ಅವರು ತಮ್ಮ ಭವಿಷ್ಯವಾಣಿಯನ್ನು ಬರೆದಿದ್ದಾರೆ.