Bangladesh Crisis: ವಿದೇಶಗಳ ಕೈವಾಡಕ್ಕೆ ಇನ್ನೊಂದು ಭಾರತದ ನೆರೆಯ ದೇಶ ಬಲಿ. ಬಾಂಗ್ಲಾದೇಶದಲ್ಲಿ ಬರಲಿದೆಯೆ ಭಾರತ ವಿರೋಧಿ ಸರಕಾರ?
ಪ್ರಜಾಪ್ರಭುತ್ವಕ್ಕೆ (Democracy) ಇನ್ನೊಂದು ಹೆಸರು ಭಾರತ (India) ಎಂದರೆ ತಪ್ಪಾಗಲಾರದು. ಇದಕ್ಕೆ ಮುಖ್ಯ ಕಾರಣ ಹಿಂದೂ ಬಹುಸಂಖ್ಯಾತರು ಎಂದರೆ ತಪ್ಪಾಗಲಾರದು. ಇಸ್ಲಾಮಿಕ್ ದೇಶವಾದರೂ ಕೂಡ ಬಾಂಗ್ಲಾದೇಶ (Bangladesh) ತಕ್ಕಮಟ್ಟಿಗೆ ಭಾರತ ಪರವಾಗಿತ್ತು ಎನ್ನುವುದಕ್ಕೆ ಯಾವ ಸಂಶಯವವು ಕೂಡ ಇರಲಿಲ್ಲ. ಶೇಕ್ ಹಸೀನಾ ಯಾವತ್ತು ಕೂಡ ಭಾರತ ವಿರೋಧಿ ಧೋರಣೆ ತೋರಲಿಲ್ಲ. ತನ್ನ ದೇಶದಲ್ಲಿಯೇ ಭಾರತ ವಿರೋಧಿ ಕೂಗು ಕೇಳುತ್ತಿದ್ದರು ಕೂಡ ಭಾರತ ತನ್ನ ಮಿತ್ರ ದೇಶ ಎಂದು ಭಾರತ ಪರವಾಗಿ ವಾದ ಮಾಡಿದ್ದೂ ಶೇಕ್ ಹಸೀನಾ (Sheik Hasina).
ಭಾರತ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಮಯನ್ಮಾರ್ ಹಾಗು ಇದೀಗ ಸರದಿ ಬಾಂಗ್ಲಾದೇಶದ್ದು. ಈ ಎಲ್ಲ ನೆರೆಯ ರಾಷ್ಟ್ರಗಳಲ್ಲಿ ಅರಾಜಕತೆ ಮನೆ ಮಾಡಿದೆ. ರಾಜಕೀಯ ದಲ್ಲಿ ಸ್ಥಿರತೆ ಈ ನೆರೆಯ ರಾಷ್ಟ್ರಗಳಲ್ಲಿ ತೋರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ವಿದೇಶಿ ಶಕ್ತಿಗಳ ಕೈವಾಡ ಎಂದರೆ ತಪ್ಪಿಲ್ಲ. ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ನಂತರ ಇದೀಗ ಬಾಂಗ್ಲಾದೇಶ (Bangladesh) ಕೂಡ ಪಾಶ್ಚಿಮಾತ್ಯ ಹಾಗು ಚೀನಾ ದೇಶಗಳ ಕುತಂತ್ರಕ್ಕೆ ಬಲಿಯಾಗಿದೆ.
ಭಾರತ ವಿರೋಧಿ ಚೀನಾ ಇದೀಗ ಭಾರತದ ಎಲ್ಲ ನೆರೆಯ ರಾಷ್ಟ್ರಗಳಲ್ಲಿ ಕೂಡ ತನ್ನ ಸಾಮರ್ಥ್ಯ ಮೆರೆಯುತ್ತಿದೆ. ಭಾರತದ ನೆರೆಯ ದೇಶಗಳಿಗೆ ಸಾಲದ ಸುಳಿಯಲ್ಲಿ ಸಿಲುಕಿಸಿ ತನ್ನ ಆಟ ಆಡುತ್ತಿದೆ ಚೀನಾ. ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್ ಹಾಗು ಬಾಂಗ್ಲಾದೇಶ ಇಂದಿನ ವರೆಗೂ ಭಾರತದ ಮಿತ್ರದೇಶವಾಗಿತ್ತು. ಆದರೆ ಒಂದೊಂದೇ ದೇಶ ಗಡಿಯಲ್ಲಿ ಭಾರತದೊಂದಿಗೆ ತಕರಾರು ಹಚ್ಚಲು ಪ್ರಾರಂಭಿಸಿದೆ. ಇನ್ನು ಇತ್ತೀಚಿಗೆ ಸಿಲುಕಿದ ಬಾಂಗ್ಲಾದಲ್ಲಿ ಇನ್ನು ಭಾರತ ವಿರೋಧಿ ಸರಕಾರ ಬರಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಬಾಂಗ್ಲಾದೇಶ (Bangladesh) ಭಾರತಕ್ಕೆ ಬಹಳ ಮುಖ್ಯ ನೆರೆಯ ದೇಶವಾಗಿದೆ. ಭಾರತದ ಪೂರ್ವ ರಾಜ್ಯಗಳ ಸಂಪರ್ಕಕ್ಕೆ ಕೊಂಡಿ ಬಾಂಗ್ಲಾ ಎಂದರೆ ತಪ್ಪಾಗಲಾರದು. ಬಾಂಗ್ಲಾ ಭಾರತದ ವಿರುದ್ಧ ತಿರುಗಿ ಬಿದ್ದರೆ ಭಾರತಕ್ಕೆ ಪೂರ್ವ ರಾಜ್ಯಗಳ ಸಂಪರ್ಕ ಕಡಿದು ಹೋಗುವ ಸಾಧ್ಯತೆ ಇದೆ. ಇದೆ ಕಾರಣಕ್ಕೆ ಇದೀಗ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಹಾಗು ಮಿಲಿಟರಿ ಮಾತುಕತೆ ಶುರುವಾಗಿದೆ. ಬೇರೆಲ್ಲ ದೇಶಕ್ಕಿಂತ ಬಾಂಗ್ಲಾದಲ್ಲಿ ಭಾರತ (India) ಸಂಬಂಧ ವೃದ್ಧಿ ಗೊಳ್ಳಲೇ ಬೇಕಾಗಿದೆ. ಭಾರತದ ಮುಂದಿನ ನಡೆ ಏನಾಗಲಿದೆ ಹಾಗೇನೇ ಪಾಕಿಸ್ತಾನದಲ್ಲಿ ಮಿಲಿಟರಿ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.