ಕಲರ್ಸ್ ಕನ್ನಡದಲ್ಲಿ ಈಗಾಗಲೇ ಬಿಗ್ ಬಾಸ್ ಆರಂಭಗೊಂಡಿದ್ದು, ಈಗಾಗಲೇ ಬಿಗ್ ಬಾಸ್ ಕಾವು ಎಲ್ಲೆಡೆ ಹರಡಿದೆ. ಮೈಕ್ದರಿಸದೆ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕೆ ಅವರಿಗೆ ಬಿಗ್ ಬಾಸ್ ಶಿಕ್ಷೆಯನ್ನು ಕೂಡ ಕೊಟ್ಟಿದ್ದರು. ವರ್ಗವಾಸಿಗಳು ಮತ್ತು ನರಕವಾಸಿಗಳು ಎಂಬ ಎರಡು ತಂಡ ವಿಭಾಗಗೊಂಡಿದ್ದು, ನರಕವಾಸಿಗಳಿಗೆ ನೀರು ನೀಡಿರುವ ವಿಚಾರವಾಗಿ ಬಿಗ್ ಬಾಸ್ ಮತ್ತೊಮ್ಮೆ ತಪ್ಪನ್ನು ಹುಡುಕಿದ್ದು ಮನೆ ಮಂದಿ ಗಳಿಸಿದ್ದ ಲಕ್ಸ್ಯೂರಿ ಬಜೆಟ್ ಕಳೆದುಕೊಂಡಿದೆ. ಈ ಬಾರಿಯ ಬಿಗ್ ಬಾಸ್ ಗಲಾಟೆ ಬಿಗ್ ಬಾಸ್ ಇಂದ ಜನರು ಕರೆದುಕೊಳ್ಳುತ್ತಿದ್ದಾರೆ. ಮೊದಲ ದಿನದಂದಲೇ ಮನೆಯಲ್ಲಿ ಗಲಾಟೆ ಶುರುವಾಗಿದೆ.
ಈಗ ಕಲರ್ಸ್ ಕನ್ನಡ ಫೇಸಬುಕ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಟೀಸರ್ ಗಮನಿಸಿದರೆ, ನಾಮಿನೇಷನ್ ವಿಚಾರದಲ್ಲಿ ಗಲಾಟೆ ಆಗುವುದನ್ನು ಕಾಣುತ್ತಿದ್ದೇವೆ. ನಾಮಿನೇಷನ್ ವಿಚಾರದಲ್ಲಿ ಸ್ವರ್ಗವಾಸಿ ಯಮುನಾ ಅವರು ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ಒಟ್ಟಾರೆಯಾಗಿ ಬಿಗ್ ಬಾಸ್ ಮನೆ ಈಗ ರಣಾಂಗಣವಾಗಿ ಪರಿವರ್ತನೆಯಾಗುತ್ತಿದೆ.
ನೋಡುಗರ ವಿಶ್ಲೇಷಣೆ ಪ್ರಕಾರ ಕೇವಲ ಗಲಾಟೆ ಮಾಡಿದರೆ ಮಾತ್ರ ಇಲ್ಲಿ ಇರಬಹುದು ಎಂಬ ಆಲೋಚನೆಯಲ್ಲಿ ಸ್ಪರ್ಧಿಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದು ನಿಜವಾಗಿಯೂ ಕೇವಲ ಗಲಾಟೆ ಅಥವಾ ಆಟದ ಕುರಿತಾಗಲ್ಲ ಇದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆಡುವಂತಹ ಆಟ ಎಂದು ವೀಕ್ಷಕರೆ ಹೇಳುತ್ತಿದ್ದಾರೆ. ಈಗಿನ ಟ್ರೆಂಡ್ ಪ್ರಕಾರ ನೋಡುವುದಾದರೆ ಗೌತಮಿ ಮತ್ತು ಧನರಾಜ ಆಚಾರ್ ಪರ ವೀಕ್ಷಕರ ಒಲವು ಹೆಚ್ಚಾಗಿರುವುದನ್ನು ಕಾಣಬಹುದು. ಇನ್ನು ಮುಂದಕ್ಕೆ ಏನಾಗುತ್ತದೆ ಎಂದು ಮುಂದಿನ ಎಪಿಸೋಡ್ ಗಳನ್ನು ಕಾಯಬೇಕು.