4 ವರ್ಷದ ಬಾಲಕ ಆಕಸ್ಮಿಕವಾಗಿ 3500 ವರ್ಷ ಹಳೆಯ ಕಂಚಿನ ಯುಗದ ಜಾರ್ ಅನ್ನು ಒಡೆದು ಹಾಕಿದ್ದಾನೆ.! ಇಸ್ರೇಲ್ ಮ್ಯೂಸಿಯಂ ಏನು ಮಾಡಿದೆ ಗೊತ್ತಾ?

3,500 ವರ್ಷಗಳಷ್ಟು ಹಳೆಯದಾದ ಕಂಚಿನ ಯುಗದ ಜಾರ್ ಅನ್ನು ಇಸ್ರೇಲ್‌ನ Hetch Meuseum ನಲ್ಲಿ ನಾಲ್ಕು ವರ್ಷದ ಬಾಲಕ ಆಕಸ್ಮಿಕವಾಗಿ ಛಿದ್ರಗೊಳಿಸಿದನು, ಈ ಜಾರ್ ಅನ್ನು ಯಾವುದೇ ಗಾಜಿನ ಅಡೆತಡೆಗಳಿಲ್ಲದೆ ಪ್ರದರ್ಶಿಸಲಾಗಿತ್ತು. 2200-1500 BC ಯಷ್ಟು ಹಿಂದಿನ ಅಪರೂಪದ ಪಾತ್ರೆಗಳು, ಯಾವುದೇ ಗಾಜಿನ ಆವರಣವಿಲ್ಲದೆಯೇ ಹೈಫಾದಲ್ಲಿನ ವಸ್ತುಸಂಗ್ರಹಾಲಯದ ಪ್ರವೇಶದ್ವಾರದ ಬಳಿ ಪ್ರದರ್ಶನಕ್ಕೆ ಇಡಲಾಗಿತ್ತು, ಇಲ್ಲಿ ಬರುವ ಜನರ ಅನುಭವವನ್ನು ಹೆಚ್ಚಿಸಲು ಈ ರೀತಿಯಾಗಿ ಯಾವುದೇ ಅಡೆತಡೆ ಇಲ್ಲದೆ ಇದನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಬಾಲಕ ಕುತೂಹಲದಿಂದ ಏನು ಎಂದು ನೋಡುವ ಭರದಲ್ಲಿ ಜಾರ್ ಅನ್ನು ಸ್ವಲ್ಪ ಎಳೆದಿದ್ದರಿಂದ ಅದು ಉರುಳಿ ನೆಲಕ್ಕೆ ಬಿದ್ದು ತುಂಡಾದ ಘಟನೆ ನಡೆದಿದೆ. “ಒಡೆದ ಜಾರ್‌ನ ಪಕ್ಕದಲ್ಲಿ ನನ್ನ ಮಗನನ್ನು ನೋಡಿದಾಗ ನಾನು ಆಘಾತಕ್ಕೊಳಗಾಗಿದ್ದೆ” ಎಂದು ಹುಡುಗನ ತಂದೆ ಅಲೆಕ್ಸ್ ಬಿಬಿಸಿಗೆ ತಿಳಿಸಿದರು. ಹಾನಿಗೆ ತನ್ನ ಮಗುವೇ ಕಾರಣ ಎಂದು ಅವರು ಆರಂಭದಲ್ಲಿ ನಂಬಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಅವರು.ಆದ ಘಟನೆ ಇಂದ ನೊಂದ ಹುಡುಗ ಕಣ್ಣೀರು ಹಾಕುತ್ತಿದ್ದ ಆದರೆ ನಂತರ ತನ್ನ ಮಗನನ್ನು ಸಮಾಧಾನ ಪಡಿಸಿ ನಂತರ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದೆ ಎನ್ನುತ್ತಾರೆ ಅಲೆಕ್ಸ್.

ವಸ್ತುಸಂಗ್ರಹಾಲಯದ ಪ್ರತಿನಿಧಿ ಲಿಹಿ ಲಾಸ್ಲೋ ಬಿಬಿಸಿಗೆ ತಿಳಿಸಿದ ಪ್ರಕಾರ, “ಪ್ರದರ್ಶನದ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಗಾದ ಉದಾಹರಣೆಗಳಿವೆ, ಮತ್ತು ಅಂತಹ ಪ್ರಕರಣಗಳನ್ನು ಪೊಲೀಸರನ್ನು ಒಳಗೊಂಡಂತೆ ಹೆಚ್ಚಿನ ತೀವ್ರತೆಯಿಂದ ಪರಿಗಣಿಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ, ಜಾರ್ ಆಕಸ್ಮಿಕವಾಗಿ ಹಾನಿಗೊಳಗಾಗಿದೆ ಚಿಕ್ಕ ಮಗು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭ ಏನೋ ಕುತೂಹಲದಿಂದ ನೋಡುವ ಭರದಲ್ಲಿ ಬಿದ್ದು ಒಡೆದಿದೆ ಆದ್ದರಿಂದ ಅದನ್ನು ನಾವು ಉದ್ದೇಶಪೂರ್ವಕ ವ್ಯಾಗಿ ಮಾಡಿದ್ದು ಎಂದು ಹೇಳಲು ಸಾಧ್ಯ ಇಲ್ಲ. ಆಕಸ್ಮಿಕವಾಗಿ ನಡೆದ ಘಟನೆ ಅಷ್ಟೇ ಆ ಜಾರ್ ಅನ್ನು ರಿಸ್ಟೋರ್ ಮಾಡಿ ಮತ್ತೆ ಅಲ್ಲೇ ಇರಿಸಲಾಗುವುದು ಎಂದು ಅವರು ಹೇಳಿದರು..

Boy broke antique jarHetch meusemIsraelMeusem
Comments (0)
Add Comment