BSNL ಬಂಪರ್ ಯೋಜನೆ: 5 GB ಉಚಿತ ಇಂಟರ್ನೆಟ್ 30 ದಿನಗಳವರೆಗೆ. ಆದರೆ BSNL ಒಂದು ಚಿಕ್ಕ ಟ್ವಿಸ್ಟ್ ಕೊಟ್ಟಿದೆ. ಪಡೆಯುವುದು ಹೇಗೆ?

1,230

BSNL ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಇತ್ತೀಚಿಗೆ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಗ್ರಾಹಕರನ್ನು ಸೆಳೆಯಲು BSNL ಉಚಿತ 5GB ಡೇಟಾ ನೀಡುತ್ತಿದೆ ಅದು ಕೂಡ ೩೦ ದಿನಗಳಿಗೆ. ಆದರೆ ಈ ಯೋಜನೆ ಪಡೆಯುವಲ್ಲಿ ಚಿಕ್ಕ ಟ್ವಿಸ್ಟ್ ಇದೆ. ಏಕೆಂದರೆ ಪ್ರತಿಯೊಬ್ಬರೂ ಈ ಉಚಿತ ಡೇಟಾ ಪಡೆಯಲು ಅರ್ಹರಾಗಿರುವುದಿಲ್ಲ. ಇದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಏನಿದು ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ವಾಸ್ತವವಾಗಿ BSNL #SwithtoBSNL ಎಂಬ ಹೆಸರಿನ ಹೊಸ ಯೋಜನೆಯೊಂದಿಗೆ ಹೊಸ ಅಭಿಯಾನ ನಡೆಸುತ್ತಿದೆ. ಇದರ ಪ್ರಕಾರ ಹೊಸದಾಗಿ BSNL ಗೆ ತಮ್ಮ ಸಿಮ್ ಅನ್ನು ಬದಲಾಯಿಸಲು ಬಯಸುವ ಗ್ರಾಹಕರಿಗೆ ಈ ಯೋಜನೆ ಆಗಿದೆ. ಈ ಯೋಜನೆ ಜನವರಿ ೧೫ ೨೦೨೨ ರವರೆಗೆ ಮಾತ್ರ ಲಭ್ಯವಾಗಿದೆ. ಈ ೫ GB ಡೇಟಾ ಕೇವಲ ೩೦ ದಿನಗಳ ವರೆಗೆ ಲಭ್ಯವಿರುತ್ತದೆ/ ನೀವು ಕೇವಲ bsnl ಹೊಸ ಸಿಮ್ ಖರೀದಿಸುವುದರಿಂದ ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ನಿಮ್ಮ ಈಗಿನ ಸಿಮ್ ನಿಂದ ಪೋರ್ಟ್ ಮಾಡಿಸಿದರೆ ಈ ಯೋಜನೆ ಲಾಭ ಪಡೆಯಬಹುದಾಗಿದೆ. ಇದಕ್ಕೆ ಯಾವ ನಿಯಮ ಅನುಸರಿಸಬೇಕು ಅದರ ಮಾಹಿತಿ ಇಲ್ಲಿದೆ.

ಈ ಯೋಜನೆ ಪಡೆಯಬಯಸುವವರು ಮೊದಲಿಗೆ BSNL ಸಂಸ್ಥೆಯ ಅಧಿಕೃತ ಫೇಸ್ಬುಕ್ ಹಾಗು ಟ್ವಿಟ್ಟರ್ ಪೇಜ್ ಫಾಲೋ ಮಾಡಬೇಕು. ನಂತರ ಈ ಪೇಜ್ ಗಳಲ್ಲಿ ಹಂಚಿಕೊಳ್ಳುವ ಪ್ರತಿ ಪೋಸ್ಟ್ಗಳನ್ನು ತಮ್ಮ timeline ಗಳಲ್ಲಿ ಶೇರ್ ಹಾಗು retweet ಮಾಡಬೇಕಾಗುತ್ತದೆ. ಫೇಸ್ಬುಕ್ ಪೇಜ್ id @bsnlcorpe ಹಾಗು ಟ್ವಿಟ್ಟರ್ id @BSNLcorpe ಅನ್ನು ಫಾಲೋ ಮಾಡಬೇಕಾಗುತ್ತದೆ. ಇಶ್ಟಕ್ಕೆ ಮುಗಿದಿಲ್ಲ ನಿಯಮ. ಈ ಉಚಿತ ಯೋಜನೆ ಪಡೆಯ ಬಯಸುವ ಗ್ರಾಹಕರು ಟ್ವಿಟ್ಟರ್ ಹಾಗು ಫೇಸ್ಬುಕ್ ಅಲ್ಲಿ ತಾವು ಯಾಕೆ BSNL ಗ್ರಾಹಕರಾಗಯುತ್ತೇವೆ ಎನ್ನುವುದನ್ನು #SwithtoBSNL ಹ್ಯಾಶ್ಟ್ಯಾಗ್ ಜೊತೆಗೆ BSNL ಅಧಿಕೃತ ಪೇಜ್ ಅನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಬೇಕಾಗುತ್ತದೆ.

ಇಷ್ಟಾದ ನಂತರ ತಾವು ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಪೋಸ್ಟ್ಗಳ screenshot ತೆಗೆದು BSNL ಗೆ ವಾಟ್ಸಪ್ಪ್ ಮುಖಾಂತರ ಕಳಿಸಬೇಕಾಗುತ್ತದೆ. ಕಲಿಸಲು ಈ ನಂಬರ್ ಮೊದಲು ಸೇವ್ ಮಾಡಿಕೊಳ್ಳಿ 9457086024. ಇಷ್ಟು ಕೆಲಸ ನೀವು ಮಾಡಿದರೆ ನೀವು BSNL ನ ಉಚಿತ ೫ GB ಉಚಿತ ಇಂಟರ್ನೆಟ್ ಪಡೆಯಲು ಅರ್ಹರಾಗುತ್ತಿರ. ಈ ಯೋಜನೆ ಜನವರಿ ೧೫ ೨೦೨೨ ರ ವರೆಗೆ ಮಾತ್ರ ಲಭ್ಯವಿದೆ. ಪೋರ್ಟ್ ಮಾಡಿದ ಹಾಗು ನಿಯಮ ಪಾಲಿಸಿದ ಗ್ರಾಹಕರು ಅರ್ಹರೋ ಎನ್ನುವುದು ಸಂಸ್ಥೆ ನಿರ್ಧರಿಸುತ್ತದೆ.

Leave A Reply

Your email address will not be published.