WhatsApp ಗ್ರೂಪ್ ನಿಂದ ಆರಂಭಗೊಂಡ ಈ ಸಣ್ಣ ಉದ್ಯಮ ಬೆಳೆದು 6000 ಕೋಟಿ ರುಪಾಯಿ ಕಂಪನಿ ಆಗಿ ಬೆಳೆದು ನಿಂತ ಕಥೆ! ಮತ್ತೆ ಸುದ್ದಿಯಲ್ಲಿದೆ ಈ ಕಂಪನಿ?

ಎಲ್ಲರಿಗೂ ಏನಾದರೂ ಮಾಡಬೇಕು ಎಂಬ ಹಂಬಲ ಇರುತ್ತದೆ. ಕೆಲವರು ದೈರ್ಯ ಮಾಡಿಕೊಂಡು ಕೈ ಹಾಕುತ್ತಾರೆ ಹಾಗೆ ಅದರಲ್ಲಿ ಯಶಸ್ಸು ಕೂಡ ಕಾಣುತ್ತಾರೆ. ಕೆಲವು ಅದೃಷ್ಟವಂತರು ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡರೆ ಇನ್ನೂ ಕೆಲವರು ಮರಳಿ ಪ್ರಯತ್ನ ಮಾಡಿ ಮಾಡಿ ಯಶಸ್ಸು ಕಾಣುತ್ತಾರೆ. ಆದರೆ ಯಶಸ್ಸಿಗೆ ಯಾವುದೇ ರೀತಿಯ ಶಾರ್ಟ್ ಕಟ್ ಅಂತೂ ಇಲ್ಲ ಕಷ್ಟ ಪದಲೇ ಬೇಕು. ಅದೇ ರೀತಿಯ ಒಂದು ರೋಚಕ ಕಥೆ ಇದು. ಕಾಲೇಜು ಓದುತ್ತಿದ್ದ ವಿದ್ಯಾರ್ಥಿಗಳ whatsapp ಗ್ರೂಪ್ ನಿಂದ ಆರಂಭವಾದ ಈ ಉದ್ಯಮ ಮುಂದೆ ಬೆಳೆದು 6200 ಕೋಟಿ ರುಪಾಯಿ ಮೌಲ್ಯದ ದೊಡ್ಡ ಕಂಪನಿಯಾಗಿ ಬೆಳೆದಿತ್ತು. Company which started from WhatsApp and become a giant of 6200 crores .

2015 ನಲ್ಲಿ ಸಣ್ಣ ವಾಟ್ಸಾಪ್ ಗ್ರೂಪ್ ಮಾಡುವ ಮೂಲಕ ಸಣ್ಣ ಪುಟ್ಟ ವಸ್ತುಗಳ ಡೆಲಿವರಿ ಆರಂಭಿಸಿದ ಆ ವ್ಯಕ್ತಿ ಕಬೀರ್ ಬಿಸ್ವಾಸ್. ಮೂಲತಃ ಬೆಂಗಳೂರಿನಲ್ಲಿ ಆರಂಭಗೊಂಡ ಈ ಸಣ್ಣ ವಹಿವಾಟು ಬೆಳೆದು ಬೆಳೆದು ಸ್ಟಾರ್ಟ್ ಅಪ್ ಆಫ್ ದಿ ಇಯರ್ (startup of the year) ಎಂಬ ಹೆಗ್ಗಳಿಕೆ ಕೂಡ ಪಡೆಯಿತು. ಈ ಕಂಪನಿ ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಇದರ ಮೌಲ್ಯ 6200 ಕೋಟಿ ರುಪಾಯಿ ತಲುಪಿತ್ತು. ಇದು ಬೆಂಗಳೂರು ಮತ್ತು ಇತರ ಕೆಲವು ಸಿಟಿಗಳಲಿ ಬಹಳ ಚಿರ ಪರಿಚಿತ Dunzo ಆ್ಯಪ್. ಹೌದು Dunzo ಆ್ಯಪ್ ದಿನ ಬಳಕೆಯ ವಸ್ತುಗಳ ಡೆಲಿವರಿ ಕೊಡುವ ಆ್ಯಪ್ ಆಗಿದ್ದು ಇದರ ಮೂಲಕ ಯಾವುದೇ ವಸ್ತುಗಳ ಖರೀದಿ ಮಾಡಿ ಡೆಲಿವರಿ ಪಡೆಯಬಹುದು. ನಿಮ್ಮ ಮನೆ ಬಾಗಿಲಿಗೆ ದಿನ ಬಳಕೆಯ ವಸ್ತುಗಳನ್ನು ಇದು ಡೆಲಿವರಿ ಮಾಡುತ್ತದೆ.

ಆದರೆ ಈಗ ಮತ್ತೊಮ್ಮೆ ಕಂಪನಿ ಬಹಳ ಸುದ್ದಿಯಲ್ಲಿದೆ. ಮಾಹಿತಿ ಪ್ರಕಾರ ಕಂಪನಿ ಹಣಕಾಸಿನ ಅಡಚಣೆ ಇಂದಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದು ತನ್ನ 75% ಕೆಲಸಗಾರರನ್ನು ಅದು ತೆಗೆದು ಹಾಕಿದೆ ಎಂಬ ಮಾಹಿತಿ ದೊರೆತಿದೆ. ಈಗ ಕೇವಲ 50 ಜನ ಕೆಲಸಗಾರರನ್ನು ಇಟ್ಟುಕೊಂಡು ಕಂಪನಿ ನಡೆಯುತ್ತಿದೆ ಎಂಬ ಮಾಹಿತಿ ಕೂಡ ಇದ್ದು . ಇದು ಎಷ್ಟರ ಮಟ್ಟಿಗೆ ತನ್ನ ಹಣಕಾಸು ತೊಂದರೆಯಿಂದ ಹೊರ ಬರಲಿದೆ ಅಥವಾ ಕಂಪನಿ ಶಾಶ್ವತವಾಗಿ ಮುಚ್ಚಲಿದೆಯೇ ಎಂದು ಇನ್ನಷ್ಟೇ ಗೊತ್ತಾಗಬೇಕಿದೆ. ಏನೇ ಆದರೂ ಈಗಲೂ ಬೆಂಗಳೂರಿನಲ್ಲಿ ಇದು ಇನ್ನೂ ಕಾರ್ಯಾಚರಣೆ ನಡೆಸುತ್ತಾ ಇದೆ.

Delivery appDunzoStart-upSuccess storyUnicorn
Comments (0)
Add Comment