ಪತನದತ್ತ ಕೆನಡಾ ಸರ್ಕಾರ ! ಜಸ್ಟಿನ್ ಟ್ರುಡೊ ಅವರ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ NDP ಮುಖ್ಯಸ್ಥ ಜಗ್ಮೀತ್ ಸಿಂಗ್ ? ಯಾರು ಈ ಜಗ್ಮೀತ್ ಸಿಂಗ್? ಅವರ ಹಿನ್ನೆಲೆಯೇನು?

18

Canada govt in risk : ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಜಸ್ಟಿನ್ ಟ್ರುಡೊ ನೇತೃತ್ವದ ಕೆನಡಾ ಸರ್ಕಾರವು ಬುಧವಾರ ಆಘಾತವನ್ನು ಅನುಭವಿಸಿದೆ. ಟ್ರುಡೊ ಸರ್ಕಾರವು ಅಧಿಕಾರದಲ್ಲಿ ಬರಲು NDP ಸಹಾಯ ಮಾಡಿತ್ತು ಆದರೆ ನಡೆದ ಅನಿಶ್ಚಿತ ಘಟನೆಯಿಂದ ಸರ್ಕಾರ ಸಂಕಟಕ್ಕೆ ಸಿಲುಕಿದೆ.Jagmeet Singh, chief of NDP withdrew support ಆದರೆ, ಟ್ರುಡೊ ಅವರು ದೇಶದಲ್ಲಿ ಯಾವುದೇ ರೀತಿಯ ಮರುಚುನಾವಣೆಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಕೆನಡಾದ ಕಾನೂನಿನ ಪ್ರಕಾರ, ಅಕ್ಟೋಬರ್ 2025 ರ ಅಂತ್ಯದ ವೇಳೆಗೆ ಕೆನಡಾದಲ್ಲಿ ಚುನಾವಣೆಗಳನ್ನು ನಡೆಸಲಾಗುವುದು. ಆದರೆ NDP ಯ ಸಿಂಗ್ ಅವರು 2022 ರಲ್ಲಿ ಟ್ರುಡೊ ಮತ್ತು ಅವರ ನಡುವೆ ನಡೆದ ಒಪ್ಪಂದವನ್ನು ಮುರಿದು ಹಾಕುತ್ತಿದ್ದಾರೆ ಎಂದು ಹೇಳಿದರು.ಇದರೊಂದಿಗೆ, ಈಗ ಸರ್ಕಾರ ಉಳಿಸಲು ಮತ್ತೊಂದು ಹೊಸ ಮೈತ್ರಿ ಮಾಡಬೇಕು ಅಷ್ಟೇ. ಆದರೆ ಯಾರು ಈ ಜಗ್ಮಿತ್ ಸಿಂಗ್ ಎಂದು ನಾವಿಂದು ತಿಳಿದುಕೊಳ್ಳೋಣ.

ಸಿಂಗ್ ಟ್ರುಡೊ ಅವರ ಬಲಗೈ ಬಂಟನಾಗಿದ್ದ ವ್ಯಕ್ತಿ. ಅವರು ಟಾಮ್ ಮುಕ್ಲೇರ್ ನಂತರ 2017 ರಲ್ಲಿ ನ್ಯೂ ಡೆಮಾಕ್ರಟಿಕ್ ಪಾರ್ಟಿಯನ್ನು (ನಡಿಪಿ) ಮುನ್ನಡೆಸಿದರು. ಫೆಡರಲ್ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಮೊದಲು, ಸಿಂಗ್ ಅವರು 2011-17 ರಿಂದ ಒಂಟಾರಿಯೊದಲ್ಲಿ ಪ್ರಾಂತೀಯ ಸಂಸತ್ತಿನ (MPP) ಸದಸ್ಯರಾಗಿದ್ದರು. 2019 ರಲ್ಲಿ, ಸಿಂಗ್ ಅವರು ಬ್ರಿಟಿಷ್ ಕೊಲಂಬಿಯಾದ ಬರ್ನಾಬಿ ಸೌತ್‌ನ ಸಂಸದರಾಗಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಚುನಾವಣೆ ಗೆದ್ದು ಸಂಸದರಾದರು . ಸಂಸದರಾಗಿ, ಜಗ್ಮೀತ್ ಸಿಂಗ್ ಅವರು ಕೈಗೆಟುಕುವ ದರದಲ್ಲಿ ವಸತಿ ವ್ಯವಸ್ಥೆ, ಆರೋಗ್ಯ ಸುಧಾರಣೆ ವಿಶೇಷವಾಗಿ ಫಾರ್ಮಾಕೇರ್ ಮತ್ತು ದಂತ ಆರೈಕೆಯನ್ನು ವಿಸ್ತರಿಸುವಲ್ಲಿ ಯಶಸ್ವಿ ಆದರು ಮತ್ತು ಆದಾಯದ ಅಸಮಾನತೆಯನ್ನು ಪರಿಹರಿಸುವುದರ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸಿದ್ದರು ತಮ್ಮ ಪ್ರಗತಿಪರ ನೀತಿಗಳಿಗಾಗಿ ಅವರು ಬಹಳ ಪ್ರಸಿದ್ಧಿ ಆಗಿದ್ದರು.

ಸಿಂಗ್ ಅವರ ನಾಯಕತ್ವದಲ್ಲಿ NDP ಪಕ್ಷವು ಜನಾಂಗೀಯ ನ್ಯಾಯ, ಸ್ಥಳೀಯ ಜನರ ಹಕ್ಕುಗಳು ಮತ್ತು ಕೆನಡಾದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ವರ್ಣಭೇದ ನೀತಿಯ ವಿರುದ್ಧ ಧ್ವನಿಯೆತ್ತಿದ್ದರು. 2021 ರಲ್ಲಿ ಟ್ರೂಡೊ ಬಹುಮತ ಗಳಿಸುವಲ್ಲಿ ವಿಫಲರಾದಗ ಸ್ಪರ್ಧಿಗಳಾಗಿದ್ದ ಜಗ್ಮಿತ್ ಸಿಂಗ್ ಮತ್ತು ಟ್ರಡೋ ಅವರು ಸಮ್ಮಿಶ್ರ ಸರ್ಕಾರದ ರಚನೆ ಮಾಡಿದ್ದರು.ಸಿಂಗ್ 2018 ರಲ್ಲಿ ಫ್ಯಾಶನ್ ಡಿಸೈನರ್ ಗುರುಕಿರಣ್ ಕೌರ್ ಅವರನ್ನು ವಿವಾಹ ಆಗಿದ್ದರು. ಅವರಿಗೆ ಒಂದು ಮಗು ಕೂಡ ಇದೆ .

Leave A Reply

Your email address will not be published.