ಅರುಣಾಚಲ ಪ್ರದೇಶದಿಂದ 20ಕಿ ಮೀ ದೂರದಲ್ಲಿ ನಿರ್ಮಾಣ ಆಗ್ತಾ ಇದೆ ಚೈನಾದ ಹೊಸ ಹೆಲಿಪೋರ್ಟ್! ಏನಿದು ?
ಇದೀಗಾಗಲೇ ಭಾರತ ಮತ್ತು ಚೈನಾದ ನಡುವೆ ಗಡಿರೇಖೆಯ ವಿಚಾರದಲ್ಲಿ ತಕರಾರುಗಳು ಆಗುತ್ತಲೇ ಇದೆ. ಇದೆ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ಕೂಡ ಆಡಳಿತ ಪಕ್ಷದ ವಿರುದ್ಧವಾಗಿ ಇದೆ ವಿಚಾರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದೆ. ಅದೆಷ್ಟೋ ಕಿಮೀ ಭಾರತದ ಒಳಗೆ ಚೈನಾ ಪ್ರವೇಶಿಸಿದೆ ಎಂದು ಹೇಳುತ್ತಾ ಇರುವಾಗಲೇ ಇದೀಗ ಹೊಸದೊಂದು ಸುದ್ದಿ ಹರಿದಾಡುತ್ತಾ ಇದೆ. ಭಾರತದ ಗಡಿ ಅಂದರೆ ಅರುಣಾಚಲ ಪ್ರದೇಶದ 20 ಕಿಮೀ ದೂರದಲ್ಲಿ ಚೈನಾ ಒಂದು ಹೆಲಿಪೋರ್ಟ್ ನಿರ್ಮಾಣ ಮಾಡುತ್ತಿದೆ.
ಸ್ಯಾಟಲೈಟ್ ಚಿತ್ರಗಳ ಮೂಲಕ ಈ ವಿಷಯ ಬಹಿರಂಗವಾಗಿದೆ. ಸ್ಯಾಟಲೈಟ್ ಮೂಲಕ ತೆಗೆದು ಕಳಿಸಲಾದ ಚಿತ್ರದಲ್ಲಿ ಹೆಲಿಪೋರ್ಟ್ ನ ಸಂಪೂರ್ಣ ಚಿತ್ರಣ ಸ್ಪಷ್ಟವಾಗಿ ಕಾಣುತ್ತಾ ಇದೆ. ರನ್ ವೆ, ಹೆಲಿಕಾಪ್ಟರ್, ಶೆಡ್ ಎಲ್ಲವೂ ಚಿತ್ರದಲ್ಲಿ ಇದ್ದು. ಇದರ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆಗಳು ಇನ್ನೂ ಬಂದಿಲ್ಲ. ಚೈನಾ ಮಾತ್ರ ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಇದೆ .
ಇದು ಚೀನಾದ ಗಡಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದಂತೆ ಆಗಿದೆ. ಗಡಿ ಭಾಗದಲ್ಲಿ ಚೈನಾದ ಪಾರುಪತ್ಯ ಹೆಚ್ಚಾದಂತೆ ಆಗಿದೆ. ಚೈನಾದ ಗಡಿ ಭಾಗಲ್ಲೇ ಇದ್ದು ಭಾರತದ ಗಡಿ ಪ್ರವೇಶಿಸಿ ಅದರೊಳಗೆ ಈ ಕೆಲಸ ಆಗುತ್ತಿಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದರೂ ಯಾವುದೇ ರೀತಿಯ ಸ್ಪಷ್ಟನೆ ಇನ್ನಷ್ಟೇ ಬರಬೇಕಿದೆ. ಆದರೂ ಏನೇ ಆಗಲಿ ಭಾರತ ಕೂಡ ಎಲ್ಲಾ ರೀತಿಯಲ್ಲಿ ಕೂಡ ಸಕ್ಷಮವಾಗಿದೆ. ವಿರೋಧಿಗಳು ಯಾರೆ ಇರಲಿ ಭಾರತ ಎಂದು ಯಾರಿಗೂ ಹೆದರಿದ ದೇಶ ಅಲ್ಲ ಎಂಬುವುದು ಈಗಾಗಲೇ ಸಾಬಿತು ಕೂಡ ಆಗಿದೆ .