Chartered accountant: ಅತ್ಯಂತ ಕಿರಿಯ ವಯಸ್ಸಿನಲ್ಲೇ CA ಮಾಡಿ ವಿಶ್ವದಾಖಲೆ ಬರೆದ ಭಾರತದ ಯುವತಿ

ಮಧ್ಯ ಪ್ರದೇಶದ ಮೊರೇನಾ ಎನ್ನುವ ಸಣ್ಣ ಹಳ್ಳಿಯ ಯುವತಿ ಅತೀ ಕಿರಿಯ ವಯಸ್ಸಿನಲ್ಲೇ CA ಉತ್ತೀರ್ಣರಾದ ಯುವತಿ ಎನ್ನುವ ಪಾತ್ರಕ್ಕೆ ಭಾಜನರಾಗಿದ್ದಾರೆ. ಇವರು ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಲ್ಲಿ ಶಾಮೀಲಾಗಿದೆ. ಭಾರತಕ್ಕೆ ಒಂದು ಹೆಮ್ಮೆಯ ವಿಷಯ‌ ಕೂಡಾ ಆಗಿದೆ.

೧೯ ವರ್ಷ ಹಾಗು ೩೩೦ ದಿನಗಳಲ್ಲಿ ಸಿಎ ಉತ್ತೀರ್ಣರಾಗಿದ್ದಾರೆ ನಂದಿನಿ ಅಗರ್ವಾಲ್. ಇವರು ಪ್ರಸ್ತುತ ಮುಂಬಯಿ ಯಲ್ಲಿ ಸಿಂಗಾಪುರ್ ಮೂಲದ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಂದಿನಿ ಅಗರ್ವಾಲ್ ಬಾಲ್ಯದಿಂದಲೂ ಅತ್ಯಂತ ಪ್ರತಿಭಾವಂತೆಯಾಗಿದ್ದು, ಎಲ್ ಕೆಜಿ ಹಾಗೂ ಯುಕೆಜಿ ಕಲಿಯುವಾಗಲೇ ಇಂಗ್ಲಿಷ್ ಹಾಗು ಹಿಂದಿಯಲ್ಲಿ ಉತ್ತಮ‌ ಹಿಡಿತವನ್ನು ಹೊಂದಿದ್ದರು.

ಇದೇ ಪ್ರತಿಭೆಯನ್ನು ಪರಿಗಣಿಸಿದ ಶಾಲಾ ಆಡಳಿತ ಮಂಡಳಿ ಇವರನ್ನು ಎಲ್ ಕೆ ಜಿ ಇಂದ ಎರಡನೇ ತರಗತಿಗೆ ಭಡ್ತಿ ನೀಡಿತ್ತು. ಇವರ ಅಣ್ಣ ಸಚಿನ್ ಅಗರ್ವಾಲ್ ಇವರ ಒಡಹುಟ್ಟಿದವರಾಗಿದ್ದಾರೆ. ೨೦೨೧ ರ ಸಿಎ ಪರೀಕ್ಷೆಯಲ್ಲಿ ೮೦೦ ಅಂಕಗಳಿಗೆ ೬೧೪ ಅಂಕಗಳನ್ನು ಪಡೆಯವ ಮೂಲಕ ಭಾರತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇವರು ಪ್ರತಿದಿನ ೧೨-೧೫ ಗಂಟೆಗಳ ವರೆಗೆ ಒದುತ್ತಾ ಇದ್ದರಂತೆ. ಹಾಗೇನೆ ಶಿಸ್ತು ಬದ್ದ ಜೀವನ ಶೈಲಿ ರೂಪಿಸಿಕೊಂಡಿದ್ದರು. ಪರೀಕ್ಷೆ ಸಮಯದಲ್ಲಿ ಮೊಬೈಲ್ ಹಾಗು ಟಿವಿ ಇಂದ ದೂರ ಇರುತ್ತಿದ್ದರು. ಇವರ ತಂದೆ ನರೇಶ್ ಚಂದ್ ಹಾಗು ಒಬ್ಬ ತೆರಿಗೆ ಸಲಹೆಗಾರರು, ತಾಯಿ ಡಿಂಪಲ್ ಒಬ್ಬರು ಗೃಹಿಣಿ ಆಗುದ್ದಾರೆ

ಅಂತರಾಷ್ಟ್ರೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಈಗ ಡಾ ನಂದಿನಿ ೧೮೦ ದೇಶಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಗುರುತಿಸಲ್ಪಟ್ಟಿದ್ದಾರೆ. ಎರಡು ಅಂತರಾಷ್ಟ್ರೀಯ ಪರೀಕ್ಷೆ ನೀಡಿದ್ದಾರೆ. ಎಸಿಸಿಎ ಅಂತರಾಷ್ಟ್ರೀಯ ಪರೀಕ್ಷೆ ನೀಡಿ ದೇಶದಲ್ಲಿ ಮೊದಲ ರ್ಯಾಂಕ್ ಹಾಗು ವಿಶ್ವದಲ್ಲಿ ೭ ನೇ ರ್ಯಾಂಕ್ ಬಂದಿದ್ದಾರೆ. ೧೮೦ ದೇಶಗಳಲ್ಲಿ ಮಾನ್ಯತೆ ಪಡೆದಿರುವ ಸಿಎ ಆಗಿದ್ದು ಯಾವುದೇ ದೇಶಗಳಲ್ಲಿ ಕೆಲಸ ಇವರು ಮಾಡಬಹುದಾಗಿದೆ.

Comments (0)
Add Comment