ಇತ್ತೀಚಿಗೆ ಎಲ್ಲರೂ ನೋಡಿರುವ ಪ್ರಕಾರ ತಿರುಮಲ ತಿರುಪತಿ ದೇವಸ್ಥಾನದಲ್ಲಿ ನಡೆದ ಅಧರ್ಮದ ಹೆಯ ಕೃತ್ಯ . ಎಲ್ಲರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದೆ. ದೇವಸ್ಥಾನದ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದು ಅಲ್ಲದೆ ಎಷ್ಟೋ ಕೋಟ್ಯಾಂತರ ಜನರ ಭಾವನೆಗಳಿಗೂ ಇದು ಧಕ್ಕೆ ಮಾಡಿದೆ. ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಬಳಸಿದ ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಬಳಸಿರುವ ಆಘಾತಕಾರಿ ಸಂಗತಿ ಇದೀಗ ಜಗಜ್ಜಾಹೀರು ಆಗಿದೆ. ಹಾಗದರೆ ನಾವು ದಿನ ಬಳಕೆಯಲ್ಲಿ ಬಳಸುವ ತುಪ್ಪದಲ್ಲಿ ಕೂಡ ಈ ರೀತಿಯ ಕಲಬೆರಕೆ ಇರಬಹುದು ಅಲ್ಲವೇ? ನಾವುಡರ ಬಗ್ಗೆ ಎಂದು ಕೂಡ ಯೋಚನೆ ಮಾಡಿರಲಿಕ್ಕಿಲ್ಲ.
ಆದರೆ ನಾವು ಯಾವುದೇ ಲ್ಯಾಬ್ ಗೆ ಸ್ಯಾಂಪಲ್ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡುವ ಅಗತ್ಯತೆ ಇಲ್ಲ. ನಾವು ಮನೆಯಲ್ಲಿಯೇ ಇದರ ಪ್ರಾಥಮಿಕ ಪರೀಕ್ಷೆ ಮಾಡಿ ತುಪ್ಪ ಅಸಲಿಯೋ ಅಥವಾ ಕಲಬೆರಕೆ ಎಂದು ಪತ್ತೆ ಹಚ್ಚಬಹುದು. ಹಾಗದರೆ ಯಾವೆಲ್ಲ ವಿಧಾನ ಬಳಸಿ ಇದನ್ನು ಪತ್ತೆ ಹಚ್ಚಬಹುದು. ಹಲವಾರು ವಿಧಾನಗಳು ಇದ್ದು ನಾವು ಇವತ್ತು ಕೆಲವೊಂದನ್ನು ಹೇಳುತ್ತೇವೆ. ನೀವು ಇದನ್ನು ಮನೆಯಲ್ಲಿಯೇ ಪ್ರಯೋಗ ಮಾಡಿ ಹಾಗೆ ನಿಮ್ಮ ಇತರ ಸ್ನೇಹಿತರು ಕುಟುಂಬಸ್ಥರಿಗೂ ಇದರ ಬಗ್ಗೆ ಅರಿವು ಮೂಡಿಸಿ. ಇನ್ನಷ್ಟು ಇಂತಹ ದಂಧೆಗಳಿಗೆ ನಾವು ಕಡಿವಾಣ ಹಾಕಲೇ ಬೇಕು.
ಮೊದಲನೆಯದಾಗಿ ನೀವು ಗಟ್ಟಿ ತುಪ್ಪವನ್ನು ಸ್ವಲ್ಪ ತೆಗೆದು ನಿಮ್ಮ ಅಂಗೈ ಮೇಲೆ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಡಿ. ಅಸಲಿ ತುಪ್ಪವಾದರೆ ಅದು ನಿಮ್ಮ ಕೈಯಿಂದ ಕರಗಿ ನೀರಾಗಿ ಹೋಗುತ್ತದೆ. ಬದಲಿಗೆ ಅದರಲ್ಲಿ ಏನಾದರೂ ಮಿಶ್ರಣ ಆಗಿದ್ದಲ್ಲಿ ಅದು ಕರಗುವುದಿಲ್ಲ. ಹಾಗೆಯೆ ಇನ್ನೊಂದು ವಿಧಾನದ ಮೂಲಕ ನೀವು ತುಪ್ಪವನ್ನು ಸರಿಯಾಗಿ ಬಿಸಿಯಲ್ಲಿ ಕುದಿಸಿ ಸ್ವಲ್ಪ ತಣಿದ ನಂತರ ಫ್ರಿಜ್ ನಲ್ಲಿ ಇಟ್ಟುಬಿಡಿ.ಅದು ಗಟ್ಟಿಯಾದಾಗ ಗಮನಿಸಿ ಅದರಲ್ಲೇ ಎರಡು ಪದರಗಳು ನಿರ್ಮಾಣ್ ಆಗಿರುತ್ತದೆ. ತಳ ಪದರದಲ್ಲಿ ತುಪ್ಪ ಮತ್ತು ಮೇಲ್ಪದರದಲ್ಲಿ ಕಲಬೆರಕೆ ವಸ್ತು ಇರುತ್ತದೆ. ಹಾಗೆಯೆ ನಾವು ಮನೆಯಲ್ಲಿ ಬಳಸುವ ಉಪ್ಪನ್ನು ಸ್ವಲ್ಪ ತುಪ್ಪಕ್ಕೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಒಂದು ವೇಳೆ ನಿಮ್ಮ ತುಪ್ಪ ನೈಜ ಬಣ್ಣದಲ್ಲಿ ಹಾಗೆ ಇದ್ದರೆ ಅದು ಶುದ್ಧ ತುಪ್ಪ . ಒಂದು ವೇಳೆ ಅದು ಬಣ್ಣ ಬದಲಾಯಿಸಿದರೆ ಅದರಲ್ಲಿ ಕಲಬೆರಕೆ ಆಗಿರುವುದು ನಿಶ್ಚಿತ. ಹೀಗೆ ಮನೆಯಲ್ಲಿಯೇ ಈ ವಿಧಾನಗಳ ಮೂಲಕ ಇದನ್ನು ಪತ್ತೆ ಹಚ್ಚಿರಿ. ನಿಮ್ಮ ಸ್ನೇಹಿತರಿಗೆ ಈ ವಿಷಯವನ್ನು ಹಂಚಿಕೊಳ್ಳಿ.