Entertainment

ಶಿವಾಜಿ ಮಹಾರಾಜ್ ಪುತ್ರನ ಬಗೆಗಿನ ಸಿನೆಮಾ Chhaava. ಇದನ್ನು ಪ್ರತಿಯೊಬ್ಬ ಭಾರತೀಯರು ಯಾಕೆ ನೋಡಬೇಕು? ಇಲ್ಲಿದೆ ಸಿನೆಮಾ ವಿಮರ್ಶೆ.

Chhaava: ನಿಜವಾಗಿಯೂ ಹೇಳಬೇಕೆಂದರೆ ಈ ಸಿನೆಮಾ ನೋಡಿದ ಮೇಲೆ ನನಗೆ ಕೈ ಕಾಲುಗಳೇ ಅಲುಗಾಡುತ್ತಿಲ್ಲ. ಈ ಸಿನೆಮಾ ವರ್ಣನೆ ಮಾಡಲು ಪದಗಳು ಕೂಡ ಇಲ್ಲ. ಇಂತಹ ಪರಿಸ್ಥಿಯಿತಿ ಬರುವುದು ಆ ಸಿನೆಮಾ ಸಿನೆಮಾ ಆಗಿರದೆ ಕಥೆ ಹಾಗು ನಟನೆ ನಮ್ಮ ಒಳಹೊಕ್ಕು ನಮ್ಮ ಇತಿಹಾಸದಲ್ಲಿ ನಮ್ಮ ಮೇಲೆ ದಾಳಿ ಮಾಡಿದವರು ನಮ್ಮನ್ನು ಇಷ್ಟು ಕ್ರೂರವಾಗಿ ನಡೆಸಿಕೊಂಡಿದ್ದಾರಾ ಎನ್ನುವುದು. ಆದರೂ ಈ ಸಿನೆಮಾದ ಬಗ್ಗೆ ನನ್ನ ಆಲೋಚನೆಗಳನ್ನು ಸ್ವಲ್ಪ ಹಂಚಿಕೊಳ್ಳುತ್ತಿದ್ದೇನೆ.

Chhaava ಸಿನೆಮಾ ನೋಡಿದ ನಂತರ ಕೈಕಾಲು ಅಲುಗಾಡುತ್ತಿಲ್ಲ ಹಾಗು ಮಾತು ಬರುತ್ತಿಲ್ಲ ಎಂದು ಹೇಳಿದ್ದೆ. ಅದು ಈ ಸಿನೆಮಾದ ಕೊನೆಯ ಘಟ್ಟದ ಕಥೆ ಹಾಗು ದೃಶ್ಯ ಅಂದರೆ ಕ್ಲೈಮಾಕ್ಸ್ ನೋಡಿ. ಇದೊಂದು ಅತ್ಯಂತ ನೋವಿನ ಕ್ಲೈಮಾಕ್ಸ್ ಎಂದರೆ ತಪ್ಪಾಗಲಾರದು. ಇನ್ನೊಂದು ವಿಷಯ ಏನೆಂದರೆ ಈ ಘಟನೆ ನಿಜಕ್ಕೂ ನಮ್ಮ ಭಾರತದ ಇತಿಹಾಸದಲ್ಲಿ ನಡೆದಿದೆ.

ಇನ್ನು ಸಿನೆಮಾ ಬಗ್ಗೆ ಮಾತಾಡುವುದಾದರೆ, ಇದು 2 ಗಂಟೆ 36 ನಿಮಿಷದಾಗಿದೆ. ಈ ಕಥೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ಸಿನೆಮಾ ಆಗಿದೆ. ಇದು Chatrapati Sambhaji Maharaj ಎನ್ನುವ ಕಾದಂಬರಿ ಇಂದ ಸಿನೆಮಾ ಮಾಡಲಾಗಿದೆ. ಈ ಕಾದಂಬರಿ ಬರೆದ ಲೇಖಕರು ಶಿವಾಜಿ ಸವಾಂತ್ (Shivaji Sawant).

ಮೊದಲರ್ಧ.

ಮೊದಲರ್ಧದಲ್ಲಿ ಈ ಸಿನೆಮಾ ಪಾತ್ರಗಳ ಪರಿಚಯ ನೀಡುತ್ತದೆ. ಇದು ನಮಗೆ ಮೊದಲೇ ಗೊತ್ತಿದ್ದರೂ ಕೂಡ ಕಥೆ ನಮ್ಮನ್ನು ಬೋರ್ ಆಗದಂತೆ ನೋಡಿಕೊಳ್ಳುತ್ತದೆ.

chhaava

ಕೊನೆಯರ್ಧ.

ಇನ್ನು ಎರಡನೆಯರ್ಧದಲ್ಲೂ ಕಥೆ ಸ್ವಾರಸ್ಯವಾಗಿ ನಡೆಯುತ್ತದೆ. ಇಲ್ಲಿ ವಿಷಯಗಳು ತೆರೆದುಕೊಳ್ಳಲು ಪ್ರಾರಂಭಿಸುತ್ತದೆ. ಕೊನೆಯ 45 ನಿಮಿಷಗಳು ರೋಮಾಂಚನಗೊಳಿಸುತ್ತದೆ. ಇನ್ನು ಈ ಸಿನೆಮಾದ ಮ್ಯೂಸಿಕ್ ನಿಮಗೆ ಕಥಾಹಂದರಕ್ಕೆ ಪೂರಕವಾಗಿದೆ. ಚಿತ್ರಕಥೆ ಅತ್ಯುತ್ತಮವಾಗಿದೆ. ಈ ಪಾತ್ರಕ್ಕೆ ವಿಕಿ ಕೌಶಲ್ (Vicky Kaushal) ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

ಇನ್ನು ಅಭಿನಯ ವಿಷಯಕ್ಕೆ ಬಂದರೆ ವಿಕಿ ಕೌಶಲ್ ಅವರ ವೃತ್ತಿ ಜೀವನದ ಅತ್ಯುತ್ತಮ ನಟನೆಯಾಗಿದೆ. ಛತ್ರಪತಿ ಸಂಭಾಜಿಯೇ ಆಗಿದ್ದರು ಈ ಸಿನೆಮಾದಲ್ಲಿ. ಈ ಸಿನೆಮಾ ನೋಡುತ್ತಿದ್ದಾಗ ಸಿನೆಮಾ ಎನಿಸದೆ ನಾವು ಸಂಭಾಜಿಯನ್ನೇ ನೋಡುತ್ತಿದ್ದೇವೆ ಎನಿಸುತ್ತದೆ. ಅಷ್ಟು ಅದ್ಭುತವಾಗಿ ನಟಿಸಿದ್ದಾರೆ ನಟ.

ಈ ಸಿನೆಮಾ ಧೈರ್ಯ, ಗೌರವ, ರಾಷ್ಟ್ರೀಯತೆ, ದೃಢ ನಿಶ್ಚಯ, ಪ್ರೀತಿಯನ್ನು ಸಾರುತ್ತದೆ. ಇತಿಹಾಸ ಶಾಲೆಗಳಲ್ಲಿ ತಿಳಿಸಲಿಲ್ಲ. ಇದನ್ನು ಈ ಮೂಲಕ ನಾವು ತಿಳಿದುಕೊಳ್ಳುವ ಅವಕಾಶ ಬಂದೊದಗಿದೆ. ಮರಾಠ ಹಾಗು ಹಿಂದೂ ಸಾಮ್ರಾಜ್ಯದ ಸಿದ್ದಾಂತ, ಹಿಂದವೀ ಸಾಮ್ರಾಜ್ಯದ ಕಲ್ಪನೆ, ಶಿವಾಜಿ ಮಹಾರಾಜರ (Chatrapati Shivaji Maharaj) ಹಾಕಿಕೊಟ್ಟ ಹಿಂದವೀ ಕನಸನ್ನು ಮುನ್ನಡೆಸುವ ಮಗನ ಛಲದ ಬಗ್ಗೆ ಸಾರುತ್ತದೆ ಈ ಸಿನೆಮಾ. ದಯವಿಟ್ಟು ಈ ಸಿನೆಮಾ ನೋಡುವುದನ್ನು ಮರೆಯಬೇಡಿ. ಈ ಸಿನೆಮಾ ಮಾಡಿದ Maddock Films ಗೆ ನಿಜವಾಗಲೂ ವಂದನೆ ಸಲ್ಲಿಸಬೇಕು.

Leave a Reply

Your email address will not be published. Required fields are marked *