The Burj Khalifa: A Marvel of Engineering and Architecture”ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ಮಿಸಲು ತಗುಲಿದ ವೆಚ್ಚ ಎಷ್ಟು ಗೊತ್ತೇ?

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿರುವ ಬುರ್ಜ್ ಖಲೀಫಾ ವಿಶ್ವದ ಅತಿ ಎತ್ತರದ ಕಟ್ಟಡಗಳ ಸಾಲಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ, ಇದು ಬರೋಬ್ಬರಿ 828 ಮೀಟರ್ (2,722 ಅಡಿ) ಎತ್ತರವಿದೆ. 2010 ರಲ್ಲಿ ಪೂರ್ಣಗೊಂಡ ಈ ಮೆಗಾಸ್ಟ್ರಕ್ಚರ್ ಒಂದು ಸಾಂಪ್ರದಾಯಿಕ ಹೆಗ್ಗುರುತಾಗಿದೆ ಆದರೆ ಮಾನವನ ಜಾಣ್ಮೆ ಮತ್ತು ನವೀನ ವಿನ್ಯಾಸಕ್ಕೆ ಇದು ಹಿಡಿದ ಕೈಗನ್ನಡಿ.

ಈ ಕಟ್ಟಡದ ಕುರಿತಾಗಿ ದೀರ್ಘವಾಗಿ ನೋಡಿದರೆ ಇದರಲ್ಲಿ ಒಟ್ಟು 163 ಮಹಡಿಗಳು ಇವೆ.46 ಕಿಮೀ/ಗಂ (29 ಎಮ್ಪಿಎಚ್) ವೇಗದಲ್ಲಿ ಸಾಗುವ ವಿಶ್ವದ ಅತ್ಯಂತ ವೇಗದ  57 ಎಲಿವೇಟರ್‌ಗಳು (elevator) ಒಟ್ಟಾರೆಯಾಗಿ 8,000 ವಸತಿ ಘಟಕಗಳು ಇದ್ದು, 1,000 ವಾಣಿಜ್ಯ ಘಟಕಗಳನ್ನು ಹೊಂದಿದೆ. 124 ನೇ ಮತ್ತು 148 ನೇ ಮಹಡಿಗಳಲ್ಲಿ ವೀಕ್ಷಣಾ ಡೆಕ್‌ಗಳನ್ನು ನಿರ್ಮಾಣ ಮಾಡಿದ್ದು. ದುಬೈ ನ ಸುಂದರ ದೃಶ್ಯವನ್ನು ನೋಡಬಹುದು. ಬುರ್ಜ್ ಖಲೀಫಾ ದುಬೈನ ಆರ್ಥಿಕ ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಸಂಕೇತವಾಗಿದೆ, ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಹಾಗಾದ್ರೆ ಈ ಕಟ್ಟಡದ ನಿರ್ಮಾಣಕ್ಕೆ ಎಷ್ಟು ಖರ್ಚಾಗಿದೆ ಎಂಬ ಲೆಕ್ಕಾಚಾರದ ವಿಚಾರ ನಮ್ಮ ತಲೆಗೆ ಈ ವರೆಗೆ ಬಂದಿರಲಿಕ್ಕಿಲ್ಲ. ಈ ಒಂದು ಕಟ್ಟಡದ ಕಾಮಗಾರಿ 2010ರ್ಯಾಲಿ ಮುಗಿದಿದ್ದು ಇದರ ಒಟ್ಟು ಖರ್ಚು 12500 ಕೋಟಿ ರುಪಾಯಿ. ಈಗಿನ ಮೌಲ್ಯಕ್ಕೆ ಹೋಲಿಕೆ ಮಾಡುವುದಾರೇ ಇದು ನಾಲ್ಕರಿದ ಐದು ಪಟ್ಟು ಹೆಚ್ಚಾಗುತ್ತದೆ.

Burj KhalifaDibaidubaiLuxuryದುಬೈ
Comments (0)
Add Comment