ಭಾರತದ ಜಾವಲಿನ್ ಥ್ರೋವರ್ ನಿರಾಜ್ ಚೋಪ್ರಾ , ನಾವಧಿಪ್ ಸಿಂಗ್ ಅವರ ಜಾವಲಿನ್ ಬೆಲೆ ಎಷ್ಟು? ಇದು ಕೆಲವರ ಒಂದು ವರ್ಷದ ಸಂಬಳ !
ಅಥ್ಲೆಟಿಕ್ಸ್ ಜಗತ್ತಿನಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾ ಇದೆ ಮತ್ತು ಜಾವೆಲಿನ್ ಎಸೆತವು ದೇಶದ ಅತ್ಯಂತ ಭರವಸೆಯ ವಿಭಾಗಗಳಲ್ಲಿ ಒಂದಾಗಿ ಹೊರಹೊಮ್ಮಿದೆ.ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ನಡೆದ ಪ್ಯಾರಿಸ್ ಒಲಂಪಿಕ್ಸ್ ಮತ್ತು ಪ್ಯಾರ ಒಲಂಪಿಕ್ಸ್ ಸಾಕ್ಷಿ. ಪ್ರತಿಭಾನ್ವಿತ ಎಸೆತಗಾರರು ನಮ್ಮಲ್ಲಿ ಕೂಡ ಇದ್ದಾರೆ ಎಂದು ಸಾಬೀತು ಪಡಿಸಿದ್ದಾರೆ. ಭಾರತವು ಈಗ ಜಾಗತಿಕ ವೇದಿಕೆಯಲ್ಲಿ ಪರಿಗಣಿಸಬೇಕಾದ ಶಕ್ತಿಯಾಗಿದೆ. ಜಾವೆಲಿನ್ ಎಸೆತದಲ್ಲಿ ಭಾರತದ ಪಯಣವು 1950 ರ ದಶಕದಲ್ಲಿ ಪ್ರಾರಂಭವಾಯಿತು, ಗುರ್ತೇಜ್ ಸಿಂಗ್ ಮತ್ತು ಬಲ್ಜಿತ್ ಸಿಂಗ್ ಅವರಂತಹ ಅಥ್ಲೀಟ್‌ಗಳು ತಮ್ಮ ಛಾಪು ಮೂಡಿಸಿದರು. ಆದಾಗ್ಯೂ, 1958 ರ ಏಷ್ಯನ್ ಗೇಮ್ಸ್‌ನಲ್ಲಿ ಮಿಲ್ಕಾ ಸಿಂಗ್ ಅವರ ಕಂಚಿನ ಪದಕವು ಕ್ರೀಡೆಯಲ್ಲಿ ರಾಷ್ಟ್ರೀಯ ಆಸಕ್ತಿಯನ್ನು ಹುಟ್ಟುಹಾಕಿತು.
ಎಲ್ಲವೂ ಹೌದು ಆದರೆ ಇಲ್ಲಿ ನಾವು ಗಮನಿಸಬೇಕಾದ ಒಂದು ಅಂಶ ಎಂದರೆ. ನಾವು ಒಬ್ಬ ಆಟಗಾರ ಪದಕ ಗೆಲ್ಲುವುದರ ಬಗ್ಗೆ ಹೇಳುತ್ತೇವೆ. ಆದರೆ ಅದರ ಹಿಂದೆ ಇರುವ ಖರ್ಚು ವೆಚ್ಚ ತ್ಯಗಗಳ ಬಗ್ಗೆ ನಾವು ಆಳವಾಗಿ ಯೋಚಿಸಿ ನೋಡುವುದಿಲ್ಲ. ಅಂತಹ ಒಂದು ಕುತೂಹಲಕಾರಿ ವಿಷಯ ನಿಮ್ಮ ಮುಂದೆ ಇಡುತ್ತಿದ್ದೇವೆ.ಆರಂಭಿಕ ಹಂತದಲ್ಲಿ ಬಹಳಷ್ಟು ಕಷ್ಟಗಳು ಇವೆ ಎಂದು ಇತ್ತೀಚೆಗೆ ನವಾದೀಪ್ ಸಿಂಗ್ ಅವರು ಇಂಟರ್ವ್ಯೂ ಒಂದರಲ್ಲಿ ಹೇಳಿದ್ದರು. ಅವರು ಹೇಳುವ ಪ್ರಕಾರ ಜಾವಲಿನ್ ಬಹಳಷ್ಟು ದುಬಾರಿ ಅದನ್ನು ಖರೀದಿ ಮಾಡುವುದು ದೊಡ್ಡ ವಿಷಯ ಎಂದಿದ್ದಾರೆ. ಹಾಗದರೆ ಎಷ್ಟಿರಬಹುದು ಬನ್ನಿ ತಿಳಿಯೋಣ .
ಅವರು ಹೇಳುವ ಪ್ರಕಾರ ಅವರು ಖುದ್ದು ಬಳಸುವ ಜಾವಲಿನ್ ಬೆಲೆ 1-1.5 ಲಕ್ಷ ಬೆಲೆ ಬಾಳುತ್ತದೆ ಅಂತೆ. ಅದೇ ರೀತಿ ಅವರು ತಮ್ಮ ಮಾತು ಮುಂದುವರೆಸುತ್ತಾ ನೀರಜ್ ಅವರು ಬಳಸುವ ಜಾವಲಿನ್ ಬೆಲೆ 3-4 ಲಕ್ಷ ರುಪಾಯಿ ಇದೆ ಅಂತೆ. ಹಾಗೆ ಪಾಕಿಸ್ತಾನಿ ಆಟಗಾರ ಅರ್ಷದ್ ನದೀಮ್ ಅವರು ಬಳಸುವ ಜಾವಲಿನ್ ಕೂಡ ಸರಿಸುಮಾರು 5 ಲಕ್ಷದ ವರೆಗೆ ಇದೆ ಎನ್ನುತ್ತಾರೆ ಅವರು. ನಮಗೆ ಕೇವಲ ಅವರ ಸಾಧನೆ ಮಾತ್ರ ಗೊತ್ತು ಆದರೆ ಅವರ ಆರಂಭಿಕ ದಿನದ ಕಷ್ಟಗಳು ಗೊತ್ತಾಗುವುದಿಲ್ಲ. ಈಗ ಎಲ್ಲವೂ ಸ್ಪಾನ್ಸರ್ ಸಿಗುತ್ತದೆ ಆದರೆ ಆರಂಭ ಮಾತ್ರ ಕಷ್ಟ ಅಂತ್ ಹೇಳಿದ್ದಾರೆ.