Cricket News: ಬಾಂಗ್ಲಾದೇಶದ ಟೆಸ್ಟ್ ಸರಣಿಗೆ ಈ ಇಬ್ಬರು ಆಟಗಾರರು ರೋಹಿತ್ ಶರ್ಮ ಅವರನ್ನು ಬದಲಿಸಬಲ್ಲರು.

115

ಗಾಯದ ಸಮಸ್ಯೆ ಇಂದ ಈಗಾಗಲೇ ಕೊನೆಯ ಏಕದಿನ ಪಂದ್ಯದಿಂದ ಹೊರಗೆ ನಡೆದಿರುವ ರೋಹಿತ್ ಶರ್ಮ (Rohit Sharma) ಮುಂದೆ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುವುದಿಲ್ಲ ಎಂದು ರಾಹುಲ್ ದ್ರಾವಿಡ್ (Rahul Dravid) ಹೇಳಿದ್ದಾರೆ. ಗಾಯದ ಚಿಕಿತ್ಸೆಗೆ ಈಗಾಗಲೇ ಮುಂಬೈಗೆ ಮರಳಿದ್ದಾರೆ ರೋಹಿತ್ ಶರ್ಮ. ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು ಮೊದಲ ಟೆಸ್ಟ್ ಡಿಸೆಂಬರ್ ೧೪ ರಂದು ನಡೆಯಲಿದೆ ಹಾಗೇನೇ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ ೨೨ ರಂದು ನಡೆಯಲಿದೆ.

ರೋಹಿತ್ ಶರ್ಮ (Rohit Sharma) ಅವರ ಅಲಭ್ಯತೆ ಇಂದ ಅವರ ಸ್ಥಾನ ಖಾಲಿ ಇದ್ದು ಇವರ ಸ್ಥಾನ ತುಂಬಬಲ್ಲ ಇಬ್ಬರು ಆಟಗಾರರ ಬಗ್ಗೆ ನಾವು ಇಂದು ಹೇಳಲಿದ್ದೇವೆ. ಮೊದಲನೇದಾಗಿ ಶುಭಮನ್ ಗಿಲ್ (Shubman Gill). ಈಗಾಗಲೇ ಟೆಸ್ಟ್ ಗೆ ಆಯ್ಕೆ ಆಗಿದ್ದರೆ ಈ ಆಟಗಾರ. ಆದರೆ ತಂಡದಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎನ್ನುವುದು ಅನುಮಾನವಿತ್ತು. ಆದರೆ ರೋಹಿತ್ ಶರ್ಮ ಗಾಯಾಳುವಾಗಿ ಹೊರಗೆ ನಡೆದುದರಿಂದ ಶುಭಮನ್ ಗಿಲ್ ಸ್ಥಾನ ಪಡೆಯುವುದು ಬಹಳಷ್ಟು ಖಚಿತವಾಗಿದೆ.

ಎರಡನೇ ಆಟಗಾರ ಸರ್ಫಾರಾಜ್ ಖಾನ್ (Sarfaraz Khan). ರೋಹಿತ್ ಶರ್ಮ ಅಲಭ್ಯತೆಯಲ್ಲಿ ಅವರ ಸ್ಥಾನ ತುಂಬಿಸಲು ಸರ್ಫಾರಾಜ್ ಖಾನ್ ಕೂಡ ಒಂದು ಉತ್ತಮ ಆಯ್ಕೆ ಆಗಿರುತ್ತದೆ. ಇವರನ್ನು ತಂಡಕ್ಕೆ ಸೇರಿಸಲು ಕ್ರಿಕೆಟ್ ಮ್ಯಾನೇಜ್ಮೆಂಟ್ ಹೇಳಿದರು ಹೇಳಬಹುದು. ಮುಂಬೈ ಆಟಗಾರ ಸದ್ಯದ ಮಟ್ಟಿಗೆ ಉತ್ತಮ ಫಾರ್ಮ್ ಅಲ್ಲಿ ಇದ್ದಾರೆ. ದೇಶಿಯ ಟೆಸ್ಟ್ ಕ್ರಿಕೆಟ್ ಅಲ್ಲಿ ಉತ್ತಮ ಬ್ಯಾಟ್ ಬೀಸುವುದರ ಮೂಲಕ ತಮ್ಮ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ನಿಮ್ಮ ಪ್ರಕಾರ ಯಾರು ರೋಹಿತ್ ಶರ್ಮ ಸ್ಥಾನ ಪಡೆಯಲು ಸೂಕ್ತ ಎನ್ನುವುದು ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.