Cricket News: ರೋಹಿತ್ ಶರ್ಮ ತಂಡಕ್ಕೆ ಮರಳಿದರೆ ಈ ಆಟಗಾರನನ್ನು ಹೊರಗೆ ಇಡಲೇಬೇಕು ಎಂದ ವಾಸಿಂ ಜಾಫರ್.
ರೋಹಿತ್ ಶರ್ಮ ಭಾರತ ತಂಡಕ್ಕೆ ವಾಪಾಸಾದರೆ, ತಾತ್ಕಾಲಿಕ ಭಾರತ ತಂಡದ ನಾಯಕ ಕೆ ಎಲ್ ರಾಹುಲ್ ತಂಡದಿಂದ ಹೊರಗೆ ಕೂರಲೇಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಸತತ ವೈಫಲ್ಯ ಅನುಭವಿಸಿದ ಕೆ ಎಲ್ ರಾಹುಲ್ ಗಿಂತ ಉತ್ತಮ ಪ್ರದರ್ಶನ ನೀಡುವ ಶುಭಮನ್ ಗಿಲ್ ರೋಹಿತ್ ಶರ್ಮ ಜೊತೆಗೆ ಆರಂಭಿಕರಾಗಿ ಆಡಬೇಕು ಎಂದು ಜಾಫರ್ ಹೇಳಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ದ ನಾಲ್ಕು ಟೆಸ್ಟ್ ಪಂದ್ಯಗಳಿವೆ ಅದರಲ್ಲಿ ಈ ಬದಲಾವಣೆ ಬೇಕೆಂದು ಹೇಳಿದ್ದಾರೆ.
ರಾಹುಲ್ ಕಳೆದ ನಾಲ್ಕು ಇನ್ನಿಂಗ್ಸ್ ಅಂದರೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ್ದು ಕೇವಲ ೨೨,೨೩,೨೦ ಹಾಗು ೨ ಅದು ಕೂಡ ಬಾಂಗ್ಲಾದೇಶದ ವಿರುದ್ಧ. 2022 ರಲ್ಲಿ ಟೆಸ್ಟ್ ಮ್ಯಾಚ್ ಅಲ್ಲಿ ಕೇವಲ 137 ರನ್ ಆರಂಭಿಕರಾಗಿ ರಾಹುಲ್ ಗಳಿಸಿದ್ದಾರೆ. ಆದರೆ ರೋಹಿತ್ ಶರ್ಮ ಬದಲಿಗೆ ಆಯ್ಕೆ ಆದ ಶುಭಮನ್ ಗಿಲ್ ಎರಡನೇ ಇನ್ನಿಂಗ್ಸ್ ಅಲ್ಲಿ ಮೇಡನ್ ಶತಕ ಗಳಿಸುವ ಮೂಲಕ ತಮ್ಮ ಆಯ್ಕೆ ಸರಿಯಾಗಿದೆ ಎಂದು ಸಾರಿದ್ದಾರೆ. ರಾಹುಲ್ ತಂಡದಿಂದ ಹೊರಗೆ ಯಾವುದೇ ಅನುಮಾನವಿಲ್ಲದೆ ಹೋಗಲೇಬೇಕು. ಆರಂಭಿಕ ಬ್ಯಾಟ್ಸಮನ್ ಆಗಿ ಅವರ ಇನ್ನಿಂಗ್ಸ್ ಅತ್ಯಂತ ಸಾಮಾನ್ಯದ್ದಾಗಿತ್ತು. ರೋಹಿತ್ ಬಂದರೆ ರಾಹುಲ್ ಹೋಗಲೇಬೇಕು ಎಂದು ಜಾಫರ್ ಹೇಳಿದ್ದಾರೆ.
ಬಾಂಗ್ಲಾದೇಶ ಭಾರತದ ವಿರುದ್ಧ ತಮ್ಮ ಮೊದಲ ಟೆಸ್ಟ್ ಗೆಲುವು ದಾಖಲು ಮಾಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರು. ಆದರೆ ಅವರ ಈ ಕನಸಿಗೆ ಶ್ರೇಯಸ್ ಅಯ್ಯರ್ ಹಾಗು ರವಿಚಂದ್ರನ್ ಅಶ್ವಿನ್ ನೀರೆರಚಿದರು. ಅದೇ ರೀತಿ ಶುಭಮನ್ ಗಿಲ್ ತಮ್ಮದೇ ಶೈಲಿಯಲ್ಲಿ ಬ್ಯಾಟ್ ಮಾಡಿ ಶತಕ ಮಾಡಿದರೆ, ಕೆ ಎಲ್ ರಾಹುಲ್ ಎಲ್ಲ ಇನ್ನಿಂಗ್ಸ್ ಅಲ್ಲೂ ಫ್ಲಾಪ್ ಆಗಿದ್ದಾರೆ. ಇದು ಜಾಫರ್ ಅವರ ಅಭಿಪ್ರಾಯ ಅಲ್ಲದೆ ಅನೇಕ ಕ್ರಿಕೆಟ್ ಅಭಿಮಾನಿ ಗಳು ಕೂಡ ಇದೆ ಅಭಿಪ್ರಾಯ ಹೊಂದಿದ್ದಾರೆ. ಕೆ ಎಲ್ ರಾಹುಲ್ ಮುಂಬರುವ ಶ್ರೀಲಂಕಾ ಸರಣಿಯಲ್ಲಿ ಹೇಗೆ ಆಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.