Criket News: ಭಾವನಾತ್ಮಕ ವಿಡಿಯೋ ಹಂಚಿಕೊಂಡ ದಿನೇಶ್ ಕಾರ್ತಿಕ್. ನಿವೃತ್ತಿ ಸುಳಿವು ನೀಡಿದ ದಿನೇಶ್ ಕಾರ್ತಿಕ್?

381

ಟಿ-೨೦ ವಿಶ್ವಕಪ್ (T-20 WorldCup) ಸೋಲಿನ ಬಳಿಕ ಭಾರತ ತಂಡದ ಪುನರ್ ರಚನೆ ಬಗ್ಗೆ ಮಾತುಗಳು ಬರುತ್ತಿದೆ. ಅದೇ ಸಮಯದಲ್ಲಿ, ಇದೀಗ ಭಾರತದ ಫಿನಿಶರ್ ಹಾಗು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಮುನ್ಸೂಚನೆ ನೀಡಿದ್ದಾರೆ. ಇತ್ತೀಚಿಗೆ ಅಷ್ಟೇ ಇನ್ಸ್ಟಾಗ್ರಾಮ್ ಅಲ್ಲಿ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ನಿವೃತ್ತಿಯ ಊಹಾಪೋಹಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ.

ಇನ್ಸ್ಟಾಗ್ರಾಮ್ ಅಲ್ಲಿ ವಿಡಿಯೋ ಮೂಲಕ ತನ್ನನ್ನು ಬೆಂಬಲಿಸಿದ ತಂಡದ ಸಹ ಆಟಗಾರರು, ತರಬೇತುದಾರರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ಹೀಗೆ ಹೇಳುತ್ತಾ ದಿನೇಶ್ ಕಾರ್ತಿಕ್ (dinesh Karthik) ” ಭಾರತ ಪರವಾಗಿ ಟಿ-೨೦ ಆಡುವ ಉದ್ದೇಶದಿಂದ ಬಹಳ ಕಷ್ಟ ಪಟ್ಟಿದ್ದೇನೆ, ಇದು ನನಗೆ ಹೆಮ್ಮೆ ಇದೆ. ನಾವು ನಮ್ಮ ಗುರಿ ತಲುಪಲು ಸಾಧ್ಯವಾಗಲಿಲ್ಲ. ಆದರೆ ಈ ಸರಣಿ ನನ್ನ ಜೀವನದಲ್ಲಿ ಅನೇಕ ನೆನಪುಗಳನ್ನು ತುಂಬಿಸಿದೆ.” ಎಂದು ಬರೆದುಕೊಂಡಿದ್ದಾರೆ.

ಕಾರ್ತಿಕ್ ಅವರ ಈ ಪೋಸ್ಟ್ ಹಂಚಿಕೊಂಡ ತಕ್ಷಣವೇ ಹಾರ್ದಿಕ್ ಪಾಂಡ್ಯ (Hardhik Pandya), ಕೃಣಾಲ್ ಪಾಂಡ್ಯ, ಅರ್ಶದೀಪ್ ಸಿಂಗ್ (Arshadeep Singh) ಮುಂತಾದವರು ಹಾರ್ಟ್ ಎಮೋಜಿ ಮೂಲಕ ಕಾಮೆಂಟ್ ಮಾಡಿದ್ದಾರೆ. ಇದೆ ವೇಳೆ ಅಭಿಮಾನಿಗಳು ದಿನೇಶ್ ಕಾರ್ತಿಕ್ ನಿವೃತ್ತಿ ಪಡೆದರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. DK 37 ನೇ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವುದು ಅಸಾಧ್ಯವೇ ಆಗಿತ್ತು. ಏಕೆಂದರೆ ಅನೇಕ ಆಟಗಾರರು ಈ ವಯಸ್ಸಿನಲ್ಲಿ ನಿವೃತ್ತಿ ತಗೊಳ್ಳುತ್ತಾರೆ. ಆದರೆ ದಿನೇಶ್ (Dinesh Karthik) ಅವರ ಈ ಜೀವನ ಹಾದಿ ಎಲ್ಲರಿಗು ಸ್ಪೂರ್ತಿಯಾಗಿದೆ.

Leave A Reply

Your email address will not be published.