ಇದೀಗಾಗಲೇ ಕನ್ನಡದ ಮನೆಮಾತಾದ ಶೋ ಬಿಗ್ ಬಾಸ್ ಸೀಸನ್ 11 ಈಗಾಗಲೇ ಶುರು ಆಗಿದ್ದು. ಈ ಬಾರಿ ಬೇರೆ ಬೇರೆ ಕ್ಷೇತ್ರದ ಪ್ರತಿಭೆಗಳು ಕಣದಲ್ಲಿ ಇದ್ದು. ಬಲು ರೋಚಕ ವಾಗಿ ಮೂಡಿ ಬರಲಿದೆ ಎಂದು ಮಾತುಕತೆ ಶುರುವಾಗಿದೆ. ಎಂಟರ್ಟೈನ್ಮೆಂಟ್ ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳುವ ಕರಾವಳಿ ಪ್ರತಿಭೆ ಧನರಾಜ್ ಆಚಾರ ಅವರು ಈ ಬಾರಿಯ ಕೇಂದ್ರ ಬಿಂದು ಎಂದರು ತಪ್ಪಾಗಲಿಕ್ಕಿಲ್ಲ. ಆದರೆ ಇದೀಗ ಬಿಗ್ ಬಾಸ್ ಮೊದಲ ದಿಂದದಲ್ಲೇ ಧನರಾಜ್ ಅವರು ತಪೂಂದನ್ನು ಮಾಡಿದ್ದಾರೆ. ಬಿಗ್ ಬಾಸ್ ಇದಕ್ಕೆ ಶಿಕ್ಷೆ ಕೂಡ ಕೊಟ್ಟಿದ್ದಾರೆ . ಹಾಗದರೆ ಏನಿದು ತಪ್ಪು ಅಷ್ಟಕ್ಕೂ ಈ ತಪ್ಪಿಗೆ ಬಿಗ್ಬಾಸ್ ಕೊಟ್ಟ ಶಿಕ್ಷೆ ಏನು ಇಲ್ಲಿದೆ ವರದಿ.
ಬಿಗ್ ಬಾಸ್ ಮೊದಲ ದಿನದ ಸಣ್ಣ ಟಿಸರ್ ಒಂದು ಬಿಡುಗಡೆ ಆಗಿದ್ದು ಅದರಲ್ಲಿ ಧನರಾಜ್ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆಸಿ ಮಾತುಕತೆ ನಡೆಸಿರುವ ದೃಶ್ಯ ಕಾಣಬಹುದು. ಈ ದೃಶ್ಯಾವಳಿ ಪ್ರಕಾರ ಧನರಾಜ್ ಅವರು ಮನೆಯ ನಿಯಮ ಮುರಿದಿದ್ದು ಇದಕ್ಕೆ ಶಿಕ್ಷೆ ಕೂಡ ಪಡೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಧರಿಸುವ ಮೈಕ್ ಬಹಳ ಮುಖ್ಯವಾಗಿದೆ. ಏಕೆಂದರೆ ಮೈಕ್ ಸರಿಯಾಗಿ ಧರಿಸಿದರೆ ಮಾತ್ರ ಮಾತು ಸರಿಯಾಗಿ ಕೇಳುತ್ತದೆ. ಇದೀಗ ಬಿಗ್ ಬಾಸ್ ವಾರ್ನಿಂಗ್ ನಂತರ ಕೂಡ ಧನರಾಜ್ ಅವರು ಸರಿಯಾಗಿ ಮೈಕ್ ಧರಿಸದೆ ಇರುವ ಕಾರಣಕ್ಕೆ ಅವರನ್ನು ಕನ್ಫೆಷನ್ ರೂಮಿಗೆ ಕರೆಸಿಕೊಳ್ಳಲಾಗಿದ್ದು ಮಾತುಕತೆ ನಡೆಸಿದ್ದಾರೆ.
ಓಪನಿಂಗ್ ಸೆರೆಮನೆಯಲ್ಲಿ ಸುದೀಪ್ ಅವರ ಜೊತೆ ಮಾತುಕತೆ ನಡೆಸುವಾಗ ಜಿಂಕೆಯ ವಿಚರ ಬಂದಿದ್ದು. ಬಿಗ್ಬಾಸ್ ಇದೀಗ ಧನರಾಜ್ ಅವರನ್ನು ಏನೇ ಮಾಡಿದರೂ ಜಿಂಕೆಯ ತರ ಹಾರಿಕೊಂಡು ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಅದೇ ಪ್ರಕಾರ ಧನರಾಜ್ ಅವರು ಜಿಂಕೆ ತರ ಹಾರಿಕೊಂಡು ಹೋಗುವ ದೃಶ್ಯ ಕಾಣಬಹುದು. ಮುಂದಿನ ಆದೇಶದ ವರೆಗೆ. ಈ ರೀತಿಯಾಗಿ ಈರಬೇಕು ಎಂದು ಬಿಗ್ ಬಾಸ್ ಸೂಚನೆ ನೀಡಿದ್ದಾರೆ.