ಕೊನೆಗೂ 32 ಇಂಚಿನ ಟಿವಿ ಪಡೆದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಕಿಡ್ನಾಪ್ ಹಾಗು ಕೊಲೆ ಆರೋಪದಡಿ ಜೈಲು ಸೇರಿರುವ ದರ್ಶನ್ ಇದೀಗ ತಮ್ಮ ಸೆಲ್ ನಲ್ಲಿ ಒಂದು ೩೨ ಇಂಚಿನ ಟಿವಿ ಪಡೆದುಕೊಂಡಿದ್ದಾರೆ. ಜೈಲಿನ ಸಿಬ್ಬಂದಿಗಳು ದರ್ಶನ್ ಗೆ ಟಿವಿ ನೀಡಿದ್ದಾರೆ ಎಂದು IANS ಮೂಲಗಳು ತಿಳಿಸಿದೆ.
ನಟ ಜೈಲಿನ ಹೊರಗಡೆ ಏನಾಗುತ್ತಿದೆ ಎನ್ನುವ ಕುತೂಹಲದಲ್ಲಿದ್ದರು, ಇದಕ್ಕಾಗಿ ಜೈಲಿನ ಸಿಬ್ಬಂದಿಗಳಿಗೆ ಟಿವಿ ಹಾಕಿಸುವಂತೆ ಮನವಿ ಕೂಡ ಮಾಡಿದ್ದರು ಎನ್ನುವ ಸುದ್ದಿ ಮಾದ್ಯಮದಲ್ಲಿತ್ತು. ತನ್ನ ಮೇಲಿನ ಕೇಸ್ ಹಾಗು ಚಾರ್ಜಶೀಟ್ ಬಗೆಗಿನ ಮಾಹಿತಿ ಪಡೆದುಕೊಳ್ಳುವ ತವಕದಲ್ಲಿದ್ದರು.
![a man in a black shirt](https://online24po.com/wp-content/uploads/2024/09/113148057-1024x576.webp)
ಜೈಲ್ ನಲ್ಲಿ ರೌಡಿ ಶೀಟರ್ ಜೊತೆ ಚಾಯ್ ಕಪ್ ಹಾಗು ಚೇರ್ ಅಲ್ಲಿ ಕುಳಿತುಕೊಂಡಿರುವ ಫೋಟೋ ಹಾಗು ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿ ಯಾರೊಂದಿಗೋ ಮಾತಾಡುವ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ನಂತರ ದರ್ಶನ್ ಅವರನ್ನು ಬಳ್ಳಾರಿ ಜೈಲ್ ಗೆ ರವಾನೆ ಮಾಡಲಾಗಿತ್ತು.
ಬುಧವಾರ ಬೆಂಗಳೂರು ಪೊಲೀಸರು ದರ್ಶನ್ ಹಾಗು ಇನ್ನು ೧೬ ಆರೋಪಿಗಳ ವಿರುದ್ಧ ಚಾರ್ಜಶೀಟ್ ಸಲ್ಲಿಕೆ ಮಾಡಿದ್ದಾರೆ. ಒಟ್ಟು 3991 ಪೇಜ್ ಗಳ ಚಾರ್ಜಶೀಟ್ ಸಲ್ಲಿಕೆ ಆಗಿದೆ. ಇದೀಗ ಟಿವಿ ಸಿಕ್ಕಿದೆ ಎಂದು ಹೇಳಲಾಗುತ್ತಿರುವ ಸುದ್ದಿ ಕೂಡ ಮಾಧ್ಯಮ ಹಾಗು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಆಗುತ್ತಿದೆ. Darshan gets 32 inch tv in prison cell.