ಗಣಕಯಂತ್ರ ಸಹಾಯಕ ಹಾಗೂ ವಿವಿಧ ಹುದ್ದೆಗಳು – Jobs In Bangalore 2024 – Complete Details ಯಾವುದೇ ಪರೀಕ್ಷೆ ಇಲ್ಲ ಸೆಪ್ಟೆಂಬರ್ 5 ರಂದು ನೇರ ಸಂದರ್ಶನದ ಮೂಲಕ ಆಯ್ಕೆ?

161

Jobs In Bangalore 2024 – ವೈದ್ಯಕೀಯ ಅಧೀಕ್ಷಕರ ಕಛೇರಿ ಕೆ.ಸಿ.ಜನರಲ್ ಆಸ್ಪತ್ರೆ ಮಲ್ಲೇಶ್ವರಂ ಬೆಂಗಳೂರುಇಲ್ಲಿ ಖಾಲಿ ಇರುವ 13 ಪ್ರಯೋಗ ಶಾಲಾ ತಜ್ಞರು, ಕ್ಪ-ಕಿರಣ ತಜ್ಞರು, ನೇತ್ರಸಹಾಯಕರು, ಅನುಭವಿ ಲೆಕ್ಕ ಪಾತ್ರ ಸಹಾಯಕರು, ಕಾನೂನು ಸಲಹೆಗಾರರು ಮತ್ತು ಗಣಕ ಯಂತ್ರ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ರೀತಿಯ ಪರೀಕ್ಷೆ ಇಲ್ಲದೆ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಪ್ರಯೋಗ ಶಾಲಾ ತಜ್ಞರು :2ಕ್ಪ-ಕಿರಣ ತಜ್ಞರು : 1ನೇತ್ರಸಹಾಯಕರು : 2ಫಾರ್ಮಸಿಸ್ಟ್ : 1ಅನುಭವಿ ಲೆಕ್ಕ ಪತ್ರ ಸಹಾಯಕರು : 2ಕಾನೂನು ಸಲಹೆಗಾರರು : 1ಪ್ರೋಗ್ರಾಮರ್ : 1ಗಣಕ ಯಂತ್ರ : 3 ಒಟ್ಟು 13 ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳ ನಿಗದಿತ ಎಲ್ಲಾ ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಲಾಗುವುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು SSLC/ PUC/ Diploma/ ಬಿ ಫಾರ್ಮ್/ ಕಾನೂನು ಪದವಿ/ BE/ b.Tech/ MCA/ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಅನುಭವ ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ವಯೋಮಿತಿ ಗರಿಷ್ಠ 40 ವರ್ಷ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 05 ಸೆಪ್ಟೆಂಬರ್ 2024 ರಂದು ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. 

ಸಂದರ್ಶನ ನಡೆಯುವ ಸ್ಥಳ :

ಡಿ.ಎನ್.ಬಿ.ಸೆಮಿನಾರ್ ಹಾಲ್, ಡಿ.ಎನ್.ಬಿ. ಬ್ಲಾಕ್,

ಕೆ.ಸಿ ಸಾರ್ವಜನಿಕ ಆಸ್ಪತ್ರೆ, ಮಲ್ಲೇಶ್ವರಂ, ಬೆಂಗಳೂರು

Leave A Reply

Your email address will not be published.