ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಇರುವ ಕರ್ನಾಟಕ ಘಾಟ್ ಬಗ್ಗೆ ನಿಮಗೆ ಗೊತ್ತಿದೆಯೇ? ಕರ್ನಾಟಕ ಮತ್ತು ವಾರಣಾಸಿಗೆ ಏನು ನಂಟು?
ಭಾರತ ದೇಶ ಎಂದರೆ ಹಾಗೆ ನೋಡಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ. ನಿಮಗೆ ಎಲ್ಲಾ ರೀತಿಯ ವೈವಿಧ್ಯತೆ ಕಾಣುತ್ತದೆ ಆದರೆ ಕೊನೆಗೆ ನೀವು ಇಲ್ಲಿ ಭಾರತೀಯರೆ. ಪ್ರಾಂತೀಯ ಭಿನ್ನತೆಗೆ ಇದ್ದರೂ ಇಲ್ಲಿ ಭಾರತೀಯ ಎಂಬ ಭಾವನೆ ಕಿತ್ತೊಗೆಯಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಈ ಸುದ್ದಿಯಲ್ಲಿ ನಿಮಗೆ ನಾವು ಕರ್ನಾಟಕ ಮತ್ತು ಕಾಶಿ ವಿಶ್ವನಾಥ ಸನ್ನಿಧಿ ಇರುವ ವಾರಣಾಸಿಗೆ ಇರುವ ಸಂಬಂಧ ಏನು ಎಂದು ಹೇಳುತ್ತೇವೆ.
ವಾರಣಾಸಿ ಉತ್ತರ ಭಾರತದಲ್ಲಿ ಇದೆ ಕರ್ನಾಟಕ ದಕ್ಷಿಣ ಭಾರತದಲ್ಲಿ ಇದೆ. ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದರೆ ಖಂಡಿತವಾಗಿ ಸಂಬಂಧ ಇದೆ ಅದಕ್ಕಾಗಿಯೇ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಇರುವ ಹನುಮಾನ್ ಘಾಟ್ ನ ಒಂದು ಭಾಗಕ್ಕೆ ಕರ್ನಾಟಕ ಘಾಟ್ ಎಂದು ಕರೆಯುತ್ತಾರೆ. ಎಷ್ಟು ವಿಚಿತ್ರ ನೋಡಿ ಇಲ್ಲಿ ನಾವು ದಕ್ಷಿಣ ಮತ್ತು ಉತ್ತರ ಭಾರತದ ನಡುವಿನ ಅನ್ಯೋನ್ಯತೆ ಕಾಣಬಹುದು. ಹಿಂದಿ ಕನ್ನಡ ಎಂದು ಗಲಾಟೆ ಮಾಡುತ್ತಿರುವ ಬುದ್ದಿ ಜೀವಿಗಳು ಇದನ್ನು ಓದಬೇಕು. ಹೀಗೆ ನಮ್ಮ ದೇಶ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾಸುಹೊಕ್ಕಾಗಿದೆ ಎಂದು.
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಡಳಿತ ಸಮಯದಲ್ಲಿ ಕಾಶಿ ವಿಶ್ವನಾಥನ ಯಾತ್ರೆ ಮಾಡುತ್ತಿದ್ದರು. ಪರಮ ಶಿವನ ಪರಮ ಭಕ್ತರಾದ ಇವರು ತಮ್ಮ ಆಡಳಿತ ಕಾಲದಲ್ಲಿ 16 ಬಾರಿ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದಾರೆ. ಜೀವನದಲ್ಲಿ ಒಂದು ಬಾರಿ ಕಾಶಿಗೆ ಹೋಗುವುದೇ ಪುಣ್ಯದ ಕಾರ್ಯ ಅಂತಹದರಲ್ಲಿ 16 ಬಾರಿ ಕಾಶಿ ಯಾತ್ರೆ ಮಾಡಿರುವ ನಾಲ್ವಡಿ ಒಡೆಯರ್ ಅವರು ಪರಮ ಶಿವನ ಎಷ್ಟು ಪ್ರೀತಿಗೆ ಪಾತ್ರರು ಎಂದು ನಾವು ಊಹಿಸಬಹುದು.
ಹೀಗೆ ಒಡೆಯರ್ ಅವರು ಅಲ್ಲಿನ ಒಂದು ಸಣ್ಣ ಭೂ ಭಾಗವನ್ನು ಅಂದು ಖರೀದಿಸಿದ್ದರು. ಅದಕ್ಕೆ ಹಿಂದೆ ಮೈಸೂರು ಘಾಟ್ ಎಂದು ಹೆಸರಿಟ್ಟಿದ್ದರು. ಇದು ತಮ್ಮ ಸಂಸ್ಥಾನದ ನೆನಪಿಗಾಗಿ ಖರೀದಿ ಮಾಡಿ ಹೆಸರಿಟ್ಟಿದ್ದರು. ಕಾಲಾಂತರದಲ್ಲಿ ಅದು ಹೆಸರು ಬದಲಾಗಿ ಕರ್ನಾಟಕ ಘಾಟ್ ಆಗಿದೆ. ಹೀಗೆ ದಕ್ಷಿಣ ಮತ್ತು ಉತ್ತರ ಭಾರತದ ಸಂಬಂಧ ಅನಾದಿಕಾಲದಿಂದಲೂ ಇದೆ. ಇದನ್ನು ಭಾಷಾ ಹೆಸರಿನಲ್ಲಿ ಒಡೆಯುವ ಪ್ರಯತ್ನ ಮಾಡದಿರಿ. ಎಲ್ಲರಿಗೂ ಎಲ್ಲಾ ಭಾಷೆಯೂ ಬೇಕು. ನಾವು ಭಾರತೀಯರು ಎಂಬ ನಿಲುವಿನಿಂದ ಈ ರೀತಿ ಜಗಳ ಮಾಡುವುದು ಬಿಡಬೇಕು.