ಲೇಮನ್ ಗ್ರಾಸ್ ಬೆಳೆದು ಲಕ್ಷಗಟ್ಟಲೆ ವಾರ್ಷಿಕವಾಗಿ ಸಂಪಾದನೆ ಮಾಡಬಹುದು. ಇದಕ್ಕೆ ಏನೆಲ್ಲಾ ಮಾಡಬೇಕು? ಇಲ್ಲಿದೆ ಮಾಹಿತಿ.

1,824

ಲೆಮನ್ ಗ್ರಾಸ್ ನಿಂಬೆ ಹುಲ್ಲಿನ ಬಗ್ಗೆ ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಇದರಿಂದ ಒಂದು ಸ್ವಂತ ಉದ್ಯಮ ಮಾಡಬಹುದು. ಇದನ್ನು ಬೆಳೆದು ಲಕ್ಷಗಟ್ಟಲೆ ಹಣ ಗಳಿಸಬಹುದು ಹಾಗೇನೇ ಇದನ್ನು ಮಾಡಲು ನೀವು ರೈತರೇ ಆಗಬೇಕೆಂದಿಲ್ಲ. ಯಾರು ಬೇಕಾದರೂ ಇದನ್ನು ಮಾಡಬಹುದು. ಇದು ಯಾವುದೇ ಆಹಾರದ ವಸ್ತು ಅಲ್ಲ, ಇದನ್ನು ಮದ್ದು ತಯಾರಿಸಲು ಹಾಗು ಇನ್ನಿತರ ಕೆಲಸಗಳಿಗೆ ಉಪಯೋಗ ಮಾಡುತ್ತಾರೆ. ಅದಕ್ಕಾಗಿಯೇ ಇದರ ಬೆಲೆ ಅಧಿಕವಾಗಿದೆ.

ಲೆಮನ್ ಗ್ರಾಸ್ ಅಂದರೆ ಏನು? ಲೆಮನ್ ಗ್ರಾಸ್ ಎನ್ನುವುದು ಒಂದು ಬಗೆಯ ಹುಲ್ಲಾಗಿದೆ. ಇದರಿಂದ ತಯಾರಾಗುವ ಎಣ್ಣೆ ಇಂದ ಔಷದಿ, ಕಾಸ್ಮೋಟಿಕ್ ಹಾಗೇನೇ ಡಿಟರ್ಜೆಂಟ್ ಗಳಿಗೆ ಬಳಕೆ ಮಾಡಲಾಗುತ್ತದೆ. ಈ ಲೆಮನ್ ಗ್ರಾಸ್ ಉದ್ಯಮದ ಬಗ್ಗೆ ಪ್ರಧಾನಿ ಮೋದಿ ಕೂಡ ಅನೇಕ ಬಾರಿ ಮಾತಾಡಿದ್ದಾರೆ. ಅದೇ ರೀತಿ ಈ ಉದ್ಯಮ ಮಾಡುವವರನ್ನು ಹೊಗಳಿದ್ದಾರೆ. ಈ ಲೇಂಪೋನ್ ಗ್ರಾಸ್ ಇಂದ ಟೀ ಮಾಡಿ ಕೆಲವರು ಇಂದು ಲಕ್ಷಗಟ್ಟಲೆ ಸಂಪಾಧನೆ ಕೂಡ ಮಾಡುತಿದ್ದರೆ.

ಈ ಲೆಮನ್ ಗ್ರಾಸ್ ಉತ್ಪಾದನೆ ಮಾಡುವ ಸಮಯ ಫೆಬ್ರವರಿ ಇಂದ ಜೂಲೈ ತಿಂಗಳುಗಳ ನಡುವೆ ಮಾಡಲಾಗುತ್ತದೆ. ಈ ಲೆಮನ್ ಗ್ರಾಸ್ ಬೆಳೆಯುವುದರಿಂದ ಇನ್ನೊಂದು ಉಪಯೋಗ ಏನಂದರೆ ಒಮ್ಮೆ ನೀವು ಇದರ ವ್ಯವಸಾಯ ಮಾಡಿದರೆ ಪುದಿನ ಹಾಗು ಕೊತ್ತಂಬರಿ ಸೊಪ್ಪು ಬೆಳೆದ ಹಾಗೆ ಮೂರೂ ನಾಲ್ಕು ಸರಿ ಬೆಳೆದು ಲಾಭ ಮಾಡಿಕೊಳ್ಳಬಹುದು. ಈ ಲೆಮನ್ ಗ್ರಾಸ್ ಅನ್ನು ಏಳು ಬಾರಿ ಕೊಯ್ಲು ಮಾಡಬಹುದಾಗಿದೆ. ನಟಿ ಮಾಡಿದ ೩-೫ ತಿಂಗಳುಗಳ ನಂತರ ಕೊಯ್ಲಾನ್ನು ಪ್ರಾರಂಭಿಸಬಹುದಾಗಿದೆ. ಇನ್ನೊಂದು ಒಳ್ಳೆಯ ವಿಷಯವೆಂದರೆ ಈ ನಾಟಿಗೆ ಗೊಬ್ಬರ ಹಾಕಬೇಕೆಂದಿಲ್ಲ. ಅದಕ್ಕಾಗಿಯೇ ಇದು ಖರ್ಚು ಕೂಡ ಕಡಿಮೆ ಎಂದರೆ ತಪ್ಪಾಗಲಾರದು.

ನಿಂಬೆ ಹುಲ್ಲಿನ ನಿಂದ ಮೇಲೆ ಹೇಳಿದ ಹಾಗೆ ಎಣ್ಣೆ ಬರುತ್ತದೆ ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡು ಲಾಭ ಗಳಿಸಬಹುದು. ಈ ಸಸಿಯು ನಿಂಬೆಯ ವಾಸನೆ ಸೂಸುವಾಗ ಇದರ ಕಠಾಯಿ ಮಾಡಬೇಕು. ಇದರ ಬೇರು ಸುಮಾರು ೩-೫ ಇಂಚು ಆಳದವರೆಗೆ ಬೆಳೆದಿರುತ್ತದೆ. ಇದರಿಂದ ಸಿಗುವ ಎಣ್ಣೆ ಮಾರುಕಟ್ಟೆಯಲ್ಲಿ ಒಂದು ಕಿಲೋ ಗೆ ೧೫೦೦ ರೂಪಾಯಿಗಳವೆರೆಗೆ ಇರುತ್ತದೆ. ಬೇರೆ ಫಸಲಿಗೆ ಹೋಲಿಸಿದರೆ ಇದು ಅತಿ ಹೆಚ್ಚು. ಈ ಕೃಷಿಯನ್ನು ಉದ್ಯಮವಾಗಿ ಅಳವಡಿಸಿಕೊಂಡರೆ ಸುಮಾರು ವಾರ್ಷಿಕವಾಗಿ ೧೨-೧೫ ಲಕ್ಷದವರೆಗೆ ಗಳಿಕೆ ಮಾಡಬಹುದು.

Leave A Reply

Your email address will not be published.