ಸೋಷಿಯಲ್ ಮೀಡಿಯಾ ದಿಂದ ತಿಂಗಳಿಗೆ 9.5 ಲಕ್ಷ ದುಡಿಮೆ ,3 ಸ್ವಂತ ಮನೆ!ಎಲ್ಲವೂ ಒಂದು ಆಂಡ್ರಾಯ್ಡ್ ಫೋನ್ ಬಳಸಿ?
ಅವಕಾಶಗಳು ಜೀವನದಲ್ಲಿ ಅದೃಷ್ಟವಂತರು ಮಾತ್ರ ಹುಡುಕಿಕೊಂಡು ಬರುತ್ತದೆ. ಆದರೆ ಅದೃಷ್ಟ ಎಲ್ಲರಿಗೂ ಎಲ್ಲಾ ಸಮಯದಲ್ಲಿ ಇರುವುದಿಲ್ಲ. ಆದರೆ ಅದೃಷ್ಟ ಇಲ್ಲದವನಿಗೆ ಜೀವನ ಇಲ್ಲ ಎಂದಲ್ಲ ಬದಲಾಗಿ ಅದೃಷ್ಟವನ್ನು ನಾವು ಬರಿಸಿಕೊಳ್ಳಬೇಕು. ಅದಕ್ಕಾಗಿ ಅವಕಾಶ ಇಲ್ಲದಾಗ ಅವಕಾಶವನ್ನು ನಾವು ಸೃಷ್ಟಿ ಮಾಡಿಕೊಳ್ಳಬೇಕು. ಹೌದು ಅವಕಾಶಗಳನ್ನು ಕಾಯುತ್ತಾ ಕೂತರೆ ಜೀವನದಲ್ಲಿ ಏನು ಸಾಧನೆ ಮಾಡಲು ಸಾಧ್ಯ ಇಲ್ಲ ಬದಲಾಗಿ ಅವಕಾಶವನ್ನು ನಾವೇ ಸೃಷ್ಟಿ ಮಾಡಿಕೊಂಡರೆ ಎಲ್ಲವನ್ನೂ ಸಾಧಿಸಬಹುದು. ಅಂತಹ ಒಂದು ರೋಚಕ ಕಥೆ ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ.
ಮೊಬೈಲ್ ಈಗ ಎಲ್ಲರಲ್ಲೂ ಇದೆ, ಒಂದೊಂದು ಮನೆಯಲ್ಲಿ ಕಡಿಮೆ ಅಂದರು 3-4 ಮೊಬೈಲ್ ಫೋನ್ ಗಳು ಇದ್ದೆ ಇದೆ. ಆದರೆ ಮೊಬೈಲ್ ಫೋನ್ ಬಳಸಿ ಹಾಳದವರೆ ಹೆಚ್ಚು ಆದರೆ ಅದೇ ಫೋನ್ ಬಳಸಿ ಏನೆಲ್ಲಾ ಮಾಡಬಹುದು ಎಷ್ಟು ಹಣ ಸಂಪಾದನೆ ಮಾಡಬಹುದು ಎಂದು ಕೆಲವರಿಗೆ ಮಾತ್ರ ಗೊತ್ತು. ಅಂತವರೆ ಜೀವನದಲ್ಲಿ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳುವವರು. ಅಂತಹ ವ್ಯಕ್ತಿಗಳಲ್ಲಿ ಮೈಸೂರಿನ ರಮ್ಯಾ ಜಗತ್ ಅವರು ಒಬ್ಬರು. ಇವರು ಮೊಬೈಲ್ ಫೋನ್ ಬಳಸಿ ಒಂದೇ ತಿಂಗಳಲ್ಲಿ 9.5 ಲಕ್ಷ ಹಣ ಸಂಪಾದನೆ ಮಾಡಿದ್ದು ಅಲ್ಲದೆ. ಮೂರು ಅಂತಸ್ತಿನ ಮನೆ, ಆಸ್ತಿ ತೋಟ ಎಲ್ಲವನ್ನೂ ಖರೀದಿ ಮಾಡಿದ್ದಾರೆ. ಇದೆಲ್ಲ ಸಾಧ್ಯ ಆಗಿದ್ದು ಅವರ ಮೊಬೈಲ್ ಫೋನ್ ಇಂದ ಮಾತ್ರ .
YouTube ಇಂಟರ್ವ್ಯೂ ಒಂದರಲ್ಲಿ ಹೇಳುವ ಪ್ರಕಾರ ಬರವಣಿಗೆ ಅವರ ಬಹಳ ದೊಡ್ಡ ಅಸ್ತ್ರ, ಅದನ್ನೇ ಬಳಸಿಕೊಂಡು ಅವರು ಕನ್ನಡ ಬ್ಲಾಗ್ ಒಂದನ್ನು ಶುರು ಮಾಡಿ ತಮ್ಮ ಅನಿಸಿಕೆಗಳನ್ನು ಹೊಸ ಸಿನೆಮಾಗಳ ಬಗೆಗೆ ವಿಮರ್ಶೆಗಳನ್ನು ಬರೆದು ಹಾಕುತ್ತಿದ್ದರು. ಹೀಗೆ ಇವರು ತಮ್ಮ ಆಂಡ್ರಾಯ್ಡ್ ಮೊಬೈಲ್ ಬಳಸಿಯೇ ಇದನ್ನು ಆರಂಭ ಮಾಡಿ ಎಷ್ಟೊಂದು ಜನರನ್ನು ತಲುಪಿದರು ಎಂದರೆ ಇವರು ಸ್ವಲ್ಪದರಲ್ಲಿ ಶುರು ಮಾಡಿ ಒಂದೇ ತಿಂಗಳಲ್ಲಿ 9.5 ಲಕ್ಷ ಹಣ ಸಂಪಾದನೆ ಮಾಡಿದ್ದಾರೆ. ಅದರಿಂದ ಬಂದ ಹಣದಲ್ಲೇ ಅವರು ಜಾಗ್ ಖರೀದಿ ಮಾಡಿ, ಮೂರು ಅಂತಸ್ತಿನ ಮನೆ ಕೂಡ ಕಟ್ಟಿದ್ದಾರೆ. ತೋಟ ಆಸ್ತಿ ಪಾಸ್ತಿ ಎಲ್ಲವನ್ನೂ ಮಾಡಿದ್ದಾರೆ. ಮನಸಿದ್ದರೆ ಮಾರ್ಗ ಎಲ್ಲಾ ಕಡೆ ಇದೆ. ಅವರು ಹೇಳುವ ಪ್ರಕಾರ ಮೊಬೈಲ್ ಕೆಟ್ಟದನ್ನು ಮಾಡುತ್ತದೆ ಒಳ್ಳೆಯದನ್ನು ಮಾಡುತ್ತದೆ ಆದರೆ ನಾವು ಅದನ್ನು ಹೇಗೆ ಉಪಯೋಗ್ ಮಾಡುತ್ತ್ ಅದರ ಮೇಲೆ ಅದು ನಿರ್ಧರಿತವಾಗುತ್ತದೆ ಎಂದು. ನೀವು ಕೂಡ ಬ್ಲಾಗಿಂಗ್ ಸ್ಟಾರ್ಟ್ ಮಾಡಿ ಹಣ ಗಳಿಸಬಹುದು. ಬ್ಲಾಗಿಂಗ್ ಚಾನೆಲ್ ಶುರು ಮಾಡೋ ಮುಂಚೆ ಅದರ ಬಗೆಗೆ ಆಳವಾದ ಅಧ್ಯಯನ ನಡೆಸಿ. ಅದೇ ರೀತಿ ರಮ್ಯಾ ಜಗತ್ ಅವರ ಯೂಟ್ಯೂಬ್ ಚಾನೆಲ್ ಕೂಡ ಇದ್ದು ಅದರಲ್ಲೂ ಅವರು ಬಹಳ ಉಪಕಾರಿ ಮಾಹಿತಿ ಹಂಚಿಕೊಳ್ಳುತ್ತಾ ಇರುತ್ತಾರೆ .