2025 New Rules: ಏಪ್ರಿಲ್ 1 ರಿಂದ ಈ 8 ಬದಲಾವಣೆ ಗಮನದಲ್ಲಿಡಿ. ಗ್ಯಾಸ್ ಸಿಲಿಂಡರ್ ಅಗ್ಗ, ಟೋಲ್ ದುಬಾರಿ.
ಭಾರತದಲ್ಲಿ ಏಪ್ರಿಲ್ 1 ರಿಂದ ಪ್ರತಿ ವರ್ಷ ಹಣಕಾಸು ವರ್ಷ ಪ್ರಾರಂಭವಾಗುತ್ತದೆ. ಈ ಹೊಸ ವರ್ಷದೊಂದಿಗೆ ಅನೇಕ ಹೊಸ ನಿಯಮಗಳು (New Rules) ಜಾರಿಗೆ ಬರಲಿದೆ. ಈ ನಿಯಮಗಳು ನಿಮ್ಮ ಗಳಿಕೆ, ವೆಚ್ಚ ಹಾಗು ಉಳಿತಾಯದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಆದಾಯ ತೆರಿಗೆ ಸ್ಲಾಬ್ ಇಂದ ಹಿಡಿದು ಟೋಲ್ ತೆರಿಗೆ ಹಾಗು LPG ಗ್ಯಾಸ್ ಸಿಲಿಂಡರ್ ಅಗ್ಗದ ವರೆಗಿನ ಮಾಹಿತಿ ನಿಮಗೆ ತಿಳಿದಿರಲೇ ಬೇಕು. ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುವ ಈ 8 ಬದಲಾವಣೆಯನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.
- ಟೋಲ್ ತೆರಿಗೆಯಲ್ಲಿ ಹೆಚ್ಚಳ: ನೀವು ದಿನಾಲೂ ರಸ್ತೆ ಮೂಲಕ ಸಂಚರಿಸುವವರದರೆ ಇನ್ನು ಮುಂದೆ ಟೋಲ್ ತೆರಿಗೆ ಹೆಚ್ಚಾಗಿ ಪಾವತಿಸಬೇಕಾಗುತ್ತದೆ. ಪ್ರಮುಖ ಹೆದ್ದಾರಿ ಟೋಲ್ ತೆರಿಗೆ ದರವನ್ನು ರೂ 5 ರಿಂದ 10 ಕ್ಕೆ ಏರಿಸಲಾಗಿದೆ. ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ ಹಾಗು ಕರ್ನಾಟಕ ವೆಸ್ಟ್ ಬಂಗಾಲ ದಲ್ಲಿ ಈ ಬೆಲೆ ಏರಿಕೆ ಜಾರಿ ಆಗಲಿದೆ.
- LPG ಸಿಲಿಂಡರ್ ನ ಹೊಸ ದರಗಳು: ಪ್ರತಿ ತಿಂಗಳಂತೆ ಈ ತಿಂಗಳು ಕೂಡ ಸಿಲಿಂಡರ್ ಬೆಲೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 1 ರಿಂದ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಸ್ವಲ್ಪ ಬೆಲೆ ಕಡಿಮೆ ಇರಲಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 1803 ರಿಂದ 1762 ಕ್ಕೆ ಲಭ್ಯವಾಗಲಿದೆ. ಆದರೆ ಸಾಮಾನ್ಯ ಸಿಲಿಂಡರ್ ಮನೆಯಲ್ಲಿ ಬಳಸುವ ಸಿಲಿಂಡರ್ ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
- CNG ಹಾಗು PNG ಮತ್ತು ATF ದರಗಳು: ನೈಸರ್ಗಿಕ ಅನಿಲದ ಬೆಳೆಯನ್ನು ಸರಕಾರ 4% ಏರಿಕೆ ಮಾಡಿದೆ. ಇದರಿಂದಾಗಿ CNG ಹಾಗು PNG ದರಗಳು ಏರಿಕೆಯಾಗಲಿದೆ. ನೈಸರ್ಗಿಕ ಅನಿಲಗಳ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಸರಕಾರ ಅನಿಲ ಬೆಲೆ ಹೆಚ್ಚಿಸಿದಂತೆ ಇವುಗಳ ಬೆಲೆ ಕೂಡ ಹೆಚ್ಚು ಕಡಿಮೆ ಆಗಲಿದೆ.
- ಹೊಸ ಆದಾಯ ತೆರಿಗೆ: 2025-26 ಹಣಕಾಸು ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೊಸ ಆದಾಯ ತೆರಿಗೆ ಸ್ಲಾಬ್ ಘೋಷಣೆ ಮಾಡಿದ್ದಾರೆ. ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಒಬ್ಬ ವ್ಯಕ್ತಿಯ ಆದಾಯ ವರ್ಷದಲ್ಲಿ 12 ಲಕ್ಷದವರೆಗೆ ಇದ್ದಾರೆ ಅವರಿಗೆ ತೆರಿಗೆ ಕಟ್ಟಲು ವಿನಾಯಿತಿ ಸಿಗಲಿದೆ. ಇದರ ಹೊರತಾಗಿ 75000 ರೂಪಾಯಿಗಳ ಹೆಚ್ಚಿನ ವಿನಾಯಿತಿ ಸಿಗಲಿದೆ.
- UPI ಪಾವತಿ ಸಂಬಂದಿಸಿದ ಬದಲಾವಣೆ: UPI ಮೂಲಕ ವಹಿವಾಟಿ ನಡೆಸದ ಹಾಗು ದೀರ್ಘ ಕಾಲದವರೆಗೆ ನಿಷ್ಕ್ರಿಯಗೊಂಡ UPI ಖಾತೆಗಳನ್ನು ಇಂದಿನಿಂದ ಮುಚ್ಚಲಾಗುವುದು. ಇದರರ್ಥ ಇದುವರೆಗೆ ನೀವು ಬಳಸದ UPI ಐಡಿ ಇನ್ನು ಮುಂದೆ ನಿಮಗೆ ಬಳಸಲು ಸಾಧ್ಯವಾಗುವುದಿಲ್ಲ.
- ಹೊಸ ಪಿಂಚಣಿ ಪೋರ್ಟಲ್ : ಕೇಂದ್ರ ಸರಕಾರವು ಏಕೀಕೃತ ಪಿಂಚಣಿ ಯೋಜನೆ UPS ಅನ್ನು ಪ್ರಾರಂಭ ಮಾಡಲಿದೆ. ಏಪ್ರಿಲ್ 1 ರಿಂದ ಈ ಯೋಜನೆ ಜಾರಿಗೆ ಬರಲಿದೆ. ಎಲ್ಲ ಕೇಂದ್ರ ಸರಕಾರದ ನೌಕರರು ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಉದ್ಯೋಗಿ 10 ವರ್ಷಗಳ ವರೆಗೆ ಸೇವೆ ಪೂರ್ತಿಗೊಳಿಸಿದರೆ ಕನಿಷ್ಠ ಪ್ರತಿ ತಿಂಗಳು 10,000 ರೂಪಾಯಿಗಳ ಪಿಂಚಣಿ ಲಭ್ಯವಿರುತ್ತದೆ.
- ರೂಪೇ ಡೆಬಿಟ್ ಕಾರ್ಡ್ ನಲ್ಲಿ ಹೊಸ ವಿಶೇಷತೆಗಳನ್ನು ಸೇರಿಸಲಾಗಿದೆ. NPCI ರೂಪೇ ಡೆಬಿಟ್ ಕಾರ್ಡ್ ಬಳಸುವವರಿಗೆ ಸ್ಪಾ ಸೆಶನ್, ಅಪಘಾತ ವಿಮೆ, ಗಾಲ್ಫ್ ಕೋರ್ಸ್ ಪ್ರವೇಶ, ವಿಮಾನ ನಿಲ್ದಾಣದ ಲಾಂಜ್ ಪ್ರವೇಶ, OTT ಸದಸ್ಯತ್ವ, ಕ್ಯಾಬ್ ಕೂಪನ್ ಗಳು ಹಾಗು ಇನ್ನಿತರ ಸೌಲಭ್ಯಗಳು ಈ ಕಾರ್ಡ್ ನಲ್ಲಿ ಲಭ್ಯವಾಗಲಿದೆ.
- GST ಹಾಗು ಡಿಜಿ ಲಾಕರ್ ನಿಆಯಾಮದಲ್ಲಿ ಬದಲಾವಣೆ. ಈಗ ಹೂಡಿಕೆದಾರರು ತಮ್ಮ ಡಿಮ್ಯಾಟ್ ಹಾಗು ಸಿಎಎಸ್ ಸ್ಟೇಟ್ಮೆಂಟ್ ಗಳನ್ನೂ ನೇರವಾಗಿ ಡಿಜಿಲಾಕರ್ ನಲ್ಲಿ ಸ್ಟೋರ್ ಮಾಡಬಹುದು. ಇನ್ನು GST ಲಾಗ್ ಇನ್ ಮಾಡುವಾಗ ಟೂ ಫ್ಯಾಕ್ಟರ್ ಚೆಕಿಂಗ್ ಕಡ್ಡಾಯವಾಗಿದೆ. ಇದರಿಂದ GST ಡೇಟಾ ಇನ್ನು ಸುರಕ್ಷಿತವಾಗುತ್ತದೆ.
