GESCOM Recruitment 2024 – GESCOM Apprentice Recruitment 2024 : ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿದ್ದು ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 221 ಹುದ್ದೆಗಳು ಖಾಲಿ ಇದ್ದು , ಆಫ್ಲೈನ್ ಮುಖಾಂತರ ಅರ್ಜಿ ಸ್ವೀಕರಿಸಲಾಗುವುದು.
ಎಸ್.ಎಸ್.ಎಲ್.ಸಿ ನಂತರ ಎರಡು ವರ್ಷ ಅವಧಿಯ ಐ.ಟಿ.ಐ. ತರಬೇತಿ ಹೊಂದಿರಬೇಕು, ಕುಶಲಕರ್ಮಿ ತರಬೇತಿ ಯೋಜನೆಯಡಿ ನಡೆಸುವ ವೃತ್ತಿ ಪರೀಕ್ಷೆಯ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ತೇರ್ಗಡೆಯಾಗಿ, ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (NCVT) ರಾಜ್ಯ ವೃತ್ತಿ ಪ್ರಮಾಣ ಪತ್ರ (SCVT) ಅಂಕಪಟ್ಟಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಈ ಒಂದು ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಕನಿಷ್ಠ 16 ವರ್ಷ ವಯಸ್ಸಾಗಿತ್ತು ಮತ್ತು ಗರಿಷ್ಠ 25 , ವಯೋಮಿತಿ ಸಡಿಲಿಕೆ ಇರುವ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದೆ.
ಅಭ್ಯರ್ಥಿಗಳಿಗೆ ಮಾಸಿಕ ರೂ. 5,500 ಶಿಶಿಕ್ಷು ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.ಐಟಿಐ/ ಐಟಿಐ (ಎಲೆಕ್ಟ್ರೀಷಿಯನ್ ವೃತ್ತಿ) ಯಲ್ಲಿ ಗರಿಷ್ಠ ಅಂಕಗಳ ಆಧಾರದ ಮೇಲೆ ಮೀಸಲಾತಿ ರೋಸ್ಟರ್ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಳಾಸ : ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ) ನಿಗಮ ಕಛೇರಿ ಗು.ವಿ.ಸ.ಕಂ.ನಿ., ಸ್ಟೇಷನ್ ರೋಡ್ ಕಲಬುರಗಿ, 585102
ಸೆಪ್ಟೆಂಬರ್ 13 ಕೊನೆ ದಿನಾಂಕ ಆಗಿರುತ್ತದೆ.